ಕನ್ನಡದ ಪ್ರತಿಭಾವಂತ ನಿರ್ದೇಶಕ ವಿಜಯ್ ಪ್ರಸಾದ್ ಮತ್ತೊಂದು ಸಿದ್ಲಿಂಗು ಕಥೆ ಹೇಳಲು ಮುಂದಾಗಿದ್ದಾರೆ. ಈ ಹಿಂದೆ ಲೂಸ್ ಮಾದ ಯೋಗಿ (Yogi) ಮತ್ತು ರಮ್ಯಾ ಅವರನ್ನು ಆಯ್ಕೆ ಮಾಡಿಕೊಂಡು ಸಿದ್ಲಿಂಗು ಕಥೆ ಹೇಳಿದ್ದರು ವಿಜಯ್ ಪ್ರಸಾದ್. ಇದೀಗ ರಮ್ಯಾ (Ramya) ಬದಲು ಸೋನು ಗೌಡ (Sonu Gowda) ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿ ಸಿದ್ಲಿಂಗು 2 (Sidlingu 2) ಚಿತ್ರದ ಕಥೆ ಹೇಳುತ್ತಿದ್ದಾರೆ.
Advertisement
ರಮ್ಯಾ ಮಾಡಿದ ಪಾತ್ರಕ್ಕೆ ಸೋನು ಗೌಡ ರಿಪ್ಲೇಸ್ ಆಗಿದ್ದಾರಾ ಎನ್ನುವ ಮಾತು ಕೇಳಿ ಬಂದಿತ್ತು. ಈ ಕುರಿತಂತೆ ಸೋನು ಮಾತನಾಡಿದ್ದಾರೆ. ತಮ್ಮದು ರಮ್ಯಾ ಮಾಡಿದ ಪಾತ್ರದ ರಿಪ್ಲೇಸ್ ಅಲ್ಲ. ಆ ಪಾತ್ರವೇ ಬೇರೆ, ನಾನು ಮಾಡುತ್ತಿರುವ ಪಾತ್ರವೇ ಬೇರೆ ಎಂದು ಅವರು ಹೇಳಿಕೊಂಡಿದ್ದಾರೆ.
Advertisement
Advertisement
ಮೊನ್ನೆಯಷ್ಟೇ ಸಿನಿಮಾಗೆ ಮುಹೂರ್ತವಾಗಿದೆ. ಸಿಂಪಲ್ ಆಗಿ ಆದ ಮುಹೂರ್ತ ಸಮಾರಂಭದಲ್ಲಿ ಚಿತ್ರದ ನಾಯಕ ಯೋಗಿ, ನಾಯಕಿ ಸೋನು ಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಿದ್ಲಿಂಗು ಸಿನಿಮಾದ ಕೊನೆಯಲ್ಲಿ ನಾಯಕಿ ಸಾವನ್ನಪ್ಪುತ್ತಾಳೆ. ಹಾಗಾಗಿ ಸಿದ್ಲಿಂಗು 2 ಸಿನಿಮಾದ ಕಥೆಯು ಹೇಗೆ ಶುರುವಾಗಬಹುದು ಎನ್ನುವ ಕುತೂಹಲವಿದೆ.
Advertisement
2012ರಲ್ಲಿ ಸಿದ್ಲಿಂಗು ತೆರೆಗೆ ಬಂದಿತ್ತು. ಮೊದಲ ಬಾರಿಗೆ ರಮ್ಯಾ ಜೊತೆ ಯೋಗಿ ನಟಿಸಿದ್ದರಿಂದ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಸಿನಿಮಾ ಕೂಡ ಗೆದ್ದಿತ್ತು. ಮತ್ತೆ ಹನ್ನೆರಡು ವರ್ಷಗಳ ನಂತರ ವಿಜಯ್ ಪ್ರಸಾದ್ (Vijay Prasad) ಅದೇ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಏನೆಲ್ಲ ವಿಷಯಗಳನ್ನು ಈ ಚಿತ್ರ ಹೊತ್ತು ತರಲಿದೆ ಎನ್ನುವುದನ್ನು ಕಾದು ನೋಡಬೇಕು. ಈಗಾಗಲೇ ಮೊದಲ ಹಂತದ ಶೂಟಿಂಗ್ ಕೂಡ ಮುಗಿಸಿದೆ ಚಿತ್ರತಂಡ.