ಕೋಲಾರ: ಕಳೆದ ಚುನಾವಣೆಯಲ್ಲಿ ಜಯಗಳಿಸಿದ್ದ ಬಾದಾಮಿಯಲ್ಲಿ(Badami) ಸ್ಪರ್ಧೆ ಮಾಡುತ್ತಾರಾ? ಇಲ್ಲವೋ? ಎಂಬ ಪ್ರಶ್ನೆಗೆ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಪೂರ್ಣ ವಿರಾಮ ಹಾಕಿದ್ದಾರೆ. ಬಾದಾಮಿಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಕೋಲಾರದ(Kolara) ಚೌಡೇನಹಳ್ಳಿಯಲ್ಲಿರುವ ಕೃಷ್ಣ ಬೈರೇಗೌಡರ ತೋಟದ ಮನೆಯ ಆವರಣದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಸಿದ್ದರಾಮಯ್ಯ ಮಾತನಾಡಿದರು.
Advertisement
Advertisement
ಬಾದಾಮಿಯಲ್ಲಿ ನಿಲ್ಲುವುದು ರೂಲ್ಡ್ ಔಟ್. ಹೈಕಮಾಂಡ್ ವರುಣಾ(Varuna), ಕೋಲಾರ ಎಲ್ಲಿ ನಿಲ್ಲಿ ಎಂದು ಹೇಳುತ್ತದೋ ಅಲ್ಲಿ ನಿಲ್ಲುತ್ತೇನೆ. ಹೈಕಮಾಂಡ್ ಕೋಲಾರದಿಂದ ನಿಲ್ಲಿ ಅಂದರೆ ಇಲ್ಲೇ ನಾಮಪತ್ರ ಸಲ್ಲಿಸಬೇಕು ಅಲ್ವಾ ಎಂದರು. ಇದನ್ನೂ ಓದಿ: ಹಳೇ ಮೈಸೂರಿನ ಭದ್ರಕೋಟೆ ಗಟ್ಟಿ ಮಾಡಲು ಎಚ್‌ಡಿಕೆ ಪ್ಲ್ಯಾನ್
Advertisement
ಇಲ್ಲಿನ ಮುಖಂಡರುಗಳು ಒಂದು ದಿನ ನೀವು ಕೋಲಾರಕ್ಕೆ ಬರಬೇಕು ಅಂತ ಸೂಚಿಸಿದ್ದರು. ಒಂದು ಅಥವಾ ಎರಡು ದಿನ ಓಡಾಡಿದರೂ ಗೆಲ್ಲಿಸುತ್ತೇವೆ ಅಂದಿದ್ದಾರೆ. ನನಗೆ ಯಾವುದೇ ಕ್ಷೇತ್ರದಿಂದ ನಿಲ್ಲಲು ಅಂಜಿಕೆ ಇಲ್ಲ. ಬಾದಾಮಿಯವರು ಇಲ್ಲೇ ನಿಲ್ಲಬೇಕು ಎಂದು ಹೇಳುತ್ತಾರೆ. ಬಾದಾಮಿ ನನಗೆ ಸ್ವಲ್ಪ ಇರುವುದರಿಂದ ಸಮಸ್ಯೆ ಎಂದು ಹೇಳಿದರು.
Advertisement
ಶಾಸಕ ಅಂದರೆ ಜನರ ಪ್ರತಿನಿಧಿ. ಅವರ ಕಷ್ಟ ಸುಖಕ್ಕೆ ಸ್ಪಂದಿಸುವುದು ಶಾಸಕನ ಜವಾಬ್ದಾರಿ. ದೂರದಲ್ಲಿದರೆ ಹೋಗಲು ಸಾಧ್ಯವಾಗುವುದಿಲ್ಲ. ಅದಕ್ಕೆ ಹತ್ತಿರದಲ್ಲಿ ಇರುವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬ ಅಭಿಪ್ರಾಯ ಹೇಳಿದಾಗ ವರುಣಾ, ಹೆಬ್ಬಾಳ, ಬಾದಾಮಿ ಎಲ್ಲರೂ ಆಹ್ವಾನ ಕೊಟ್ಟಿದ್ದಾರೆ. ಈ ವಿಚಾರವನ್ನು ಹೈಕಮಾಂಡ್ ಜೊತೆ ಮಾತನಾಡಿದ್ದೇನೆ. ನೀವು ಹೇಳಿದ ಕ್ಷೇತ್ರವನ್ನು ನಾವು ಒಪ್ಪುತ್ತೇವೆ. ನೀವು ಆಯ್ಕೆ ಮಾಡಿ ನಮಗೆ ಬಿಟ್ಟು ಬಿಡಿ ಎಂದಿದ್ದಾರೆ. ಈ ಕಾರಣಕ್ಕೆ ಎರಡರಲ್ಲಿ ಒಂದನ್ನು ನಾನು ಮುಂದೆ ಆಯ್ಕೆ ಮಾಡಲಿದ್ದೇನೆ ಎಂದು ತಿಳಿಸಿದರು.