ಚಿಕ್ಕಬಳ್ಳಾಪುರ: ನಾನು ಹಿಂದೂ ಧರ್ಮದಲ್ಲಿ ಅರ್ಜಿ ಹಾಕ್ಕೊಂಡು ಹುಟ್ಟಿಲ್ಲ, ಇತ್ತ ಕುರುಬ ಜಾತಿಯಲ್ಲಿ ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ನಮ್ಮ ಅಪ್ಪ-ಅಮ್ಮ ಕುರುಬರಾಗಿದ್ದರಿಂದ ಕುರುಬ ಜಾತಿಯಲ್ಲಿ ಹುಟ್ಟಿದೀನಿ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ, ಶಾಸಕ ಸುಬ್ಬಾರೆಡ್ಡಿಯವರಿಗೆ ಜಾತಿ-ಧರ್ಮದ ಬೇಧವಿಲ್ಲ. ಹಿಂದೂ ಧರ್ಮದವರಿಗೆ ಸಾಮೂಹಿಕ ವಿವಾಹಗಳನ್ನ ಆಯೋಜನೆ ಮಾಡುವ ರೀತಿಯೇ ಮುಸ್ಲಿಂ ಸಮುದಾಯದವರಿಗೂ ಸಾಮೂಹಿಕ ವಿವಾಹಗಳನ್ನ ಆಯೋಜನೆ ಮಾಡ್ತಾರೆ. ನಮಗೆ ಧರ್ಮ, ಜಾತಿ, ಯಾವುದು ಇಲ್ಲ, ಆಕಸ್ಮಿಕವಾಗಿ ಹುಟ್ಟಿದ್ದೇವೆ. ನಾವೇನು ಅರ್ಜಿ ಹಾಕಿಕೊಂಡು ಇಂತಿಂತಹ ಧರ್ಮದಲ್ಲಿ ಹುಟ್ಟಿದ್ದೀವಾ ಅಂತಾ ಪ್ರಶ್ನೆ ಮಾಡಿದರು.
Advertisement
Advertisement
ಪ್ರತಿಯೊಂದು ಮಗು ಕೂಡ ಹುಟ್ಟುವಾಗ ವಿಶ್ವ ಮಾನವನಾಗಿ ಹುಟ್ಟುತ್ತದೆ. ಬೆಳೆಯುತ್ತಾ ಅಲ್ಪ ಮಾನವರಾಗಬೇಡಿ. ಎಲ್ಲರೂ ಮಾನವರಾಗಿ ಬಾಳಬೇಕು ಮತ್ತು ಸಮಾಜಕ್ಕೆ ಓಳ್ಳೆಯ ಕೆಲಸ ಮಾಡಬೇಕು ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ರು.
Advertisement
ನಾನೇ ನಿಜವಾದ ರೈತನ ಮಗ: ಮಾಜಿ ಸಿಎಂ ಗಳಾದ ಕುಮಾರಸ್ವಾಮಿ-ಯಡಿಯೂರಪ್ಪ ಇಬ್ಬರೂ ರೈತನ ಮಗ ಅಂತ ಪೈಪೋಟಿಗೆ ಬಿದ್ದಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನಾವು ಕೆಸಿ ವ್ಯಾಲಿ, ಹೆಬ್ಬಾಳ ವ್ಯಾಲಿ, ಎತ್ತಿನಹೊಳೆ ಯೋಜನೆ ಜಾರಿ ಮಾಡುತ್ತಿದ್ದೇವೆ. ಈ ಹಿಂದೆ ಯಾವ ಸರ್ಕಾರಗಳು ಈ ಕೆಲಸವನ್ನು ಮಾಡಲಿಲ್ಲ. ಆದ್ರೆ ತಾವು ರೈತರ ಮಕ್ಕಳು ಅಂತ ಮಾತಾಡ್ತಾರೆ ಅಂತ ವ್ಯಂಗ್ಯವಾಡಿದ್ರು. ನಾನು ಮಣ್ಣಿನ ಮಗ ಅಂತ ಒಬ್ರು, ನಾನು ನಿಜವಾದ ರೈತನ ಮಗ ಅಂತ ಮತ್ತೊಬ್ರು ಪೈಪೋಟಿಗೆ ಬಿದ್ದಿದ್ದಾರೆ. ಆದ್ರೆ ನಾನೇ ನಿಜವಾದ ರೈತನ ಮಗ ಅಂತಾ ಸಿಎಂ ಅಂದ್ರು.
Advertisement
Was delighted to attend the mass wedding in Bagepalli, Chikkabalapur Distirct. My blessings to all the newly wed couples. pic.twitter.com/E3KiJPknbV
— Siddaramaiah (@siddaramaiah) January 21, 2018
ಮಾನ್ಯ ಮುಖ್ಯಮಂತ್ರಿ @siddaramaiah ಅವರು ಬಾಗೇಪಲ್ಲಿಯ ಗಡಿದಿಂ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದರು. pic.twitter.com/cerIcrmvDV
— CM of Karnataka (@CMofKarnataka) January 21, 2018