ಪುನೀತ್ ರಾಜ್ ಕುಮಾರ್ ನಿಧನಾ ನಂತರ ಅವರ ಹೆಸರಿನಲ್ಲಿ ಏನೆಲ್ಲ ಕೆಲಸಗಳು ನಡೆಯುತ್ತಿವೆ. ಸಿನಿಮಾಗಳ ಟ್ರೇಲರ್, ಟೀಸರ್, ಚಿತ್ರಗಳ ಬಿಡುಗಡೆಯಲ್ಲೂ ಪುನೀತ್ ಹೆಸರು ಮತ್ತು ಫೋಟೋ ಬಳಕೆ ಆಗುತ್ತಿದೆ. ಆದರೆ, ‘ಮಾರಕಾಸ್ತ್ರ’ ಸಿನಿಮಾದ ನಾಯಕ ಆನಂದ್ ಆರ್ಯ ಮಾತ್ರ ಇದಕ್ಕೆ ತದ್ವಿರುದ್ಧ. ಯಾವುದೇ ಕಾರಣಕ್ಕೂ ಪುನೀತ್ ಅವರ ಹೆಸರನ್ನು ಬಳಕೆ ಮಾಡಲು ಅವರು ಇಷ್ಟಪಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ : ವಿವಾದ ಇಲ್ಲದೇ ಸಿನಿಮಾ ರಿಲೀಸ್ ಮಾಡಲ್ಲವಾ ಸಂಜಯ್ ಲೀಲಾ ಬನ್ಸಾಲಿ? : ಗಂಗೂಬಾಯಿ ಮೇಲೆ ಮತ್ತೊಂದು ಕೇಸ್
“ನಾನು ಥೇಟ್ ಪುನೀತ್ ರಾಜ್ ಕುಮಾರ್ ರೀತಿಯಲ್ಲೇ ಕಾಣುತ್ತೇನೆ, ಹಾಗೆಯೇ ಹಾವಭಾವ ಕೂಡ ಇದೆ. ಅವರಂತೆಯೇ ಡೈಲಾಗ್ ಹೇಳುತ್ತೇನೆ ಎಂದು ಅನೇಕರು ಹೇಳಿದ್ದಾರೆ. ಆದರೆ, ನನಗೆ ಹಾಗೆ ಅನಿಸುವುದಿಲ್ಲ. ಪುನೀತ್ ಅವರನ್ನು ಆದರ್ಶವಾಗಿ ತಗೆದುಕೊಳ್ಳುತ್ತೇನೆಯೇ ವಿನಃ ಅವರ ಹೆಸರನ್ನು ಎಲ್ಲಿಯೂ ದುರ್ಬಳಕೆ ಮಾಡಿಕೊಳ್ಳಲಾರೆ” ಎಂದಿದ್ದಾರೆ. ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ವಿಜೇತೆ ಮಲಯಾಳಂ ನಟಿ ಲಲಿತಾ ಇನ್ನಿಲ್ಲ
ಇತ್ತೀಚೆಗಷ್ಟೇ ಆನಂದ್ ಆರ್ಯ ನಟನೆಯ ‘ಮಾರಕಾಸ್ತ್ರ’ ಸಿನಿಮಾದ ಮುಹೂರ್ತ ಸಮಾರಂಭ ನಡೆಯಿತು. ಅಲ್ಲಿಯೂ ಅನೇಕರು ನೀವು ಪುನೀತ್ ಅವರ ಹಾಗೆಯೇ ಕಾಣುತ್ತೀರಿ ಎಂದಾಗ, ನಕ್ಕು ಸುಮ್ಮನಾದರು ಆನಂದ್ ಆರ್ಯ. ಇದು ಇವರ ನಟನೆಯ ಎರಡನೇ ಸಿನಿಮಾ. ಗುರುಮೂರ್ತಿ ಸುನಾಮಿ ನಿರ್ದೇಶನದಲ್ಲಿ ಮಾರಕಾಸ್ತ್ರ ಸಿನಿಮಾ ಮೂಡಿ ಬರುತ್ತಿದ್ದು, ಮಾರ್ಚ್ ನಿಂದ ಶೂಟಿಂಗ್ ಶುರುವಾಗಲಿದೆ. ಇದನ್ನೂ ಓದಿ : ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ
ದೇಶಪ್ರೇಮ ಮತ್ತು ಲೇಖನಿಗೆ ಅದೆಷ್ಟು ಶಕ್ತಿ ಇದೆ ಎಂದು ತೋರಿಸುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಿದ್ದಾರಂತೆ ನಿರ್ದೇಶಕರು. ಮಾಧುರ್ಯ ನಾಯಕಿಯಾಗಿ ನಟಿಸುತ್ತಿದ್ದರೆ, ನಟರಾಜ್ ಚಿತ್ರದ ನಿರ್ಮಾಪಕರು.