ಮಂಗಳೂರು: ರಾಜ್ಯ ಚುನಾವಣೆಯಲ್ಲಿ ಈ ಬಾರಿಯೂ ಹಿಂದೂ(Hindu) ಅಸ್ತ್ರವೇ ಪ್ರಬಲವಾಗಿ ಪ್ರಯೋಗ ಆಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗುತ್ತಿವೆ. ಬಿಜೆಪಿಯ ಭದ್ರಕೋಟೆ-ವೋಟ್ ಬೆಲ್ಟ್ ಎಂದೇ ಬಿಂಬಿತವಾಗಿರುವ ಕರಾವಳಿಯಲ್ಲಿ ಸಿದ್ದರಾಮಯ್ಯ(Siddaramaiah) ಧರ್ಮಾಸ್ತ್ರವನ್ನೇ ತಿರುಗುಬಾಣ ಮಾಡಿಕೊಳ್ಳಲು ಯತ್ನಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರಾ(Vasanth Bangera) ಜೀವನ ಚರಿತ್ರೆ ಪುಸ್ತಕ ಬಿಡುಗಡೆ, ಕಬಡ್ಡಿ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಿ.ಟಿ.ರವಿಗಿಂತ(CT Ravi) ಹೆಚ್ಚಿನ ಹಿಂದೂ ನಾನು. ಆದರೆ, ಇನ್ನೊಂದು ಧರ್ಮ ದ್ವೇಷಿಸುವ ಸಿ.ಟಿ.ರವಿಯಂಥ ಹಿಂದೂ ಅಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಕನಸಿನಲ್ಲೂ ಯೋಚನೆ ಮಾಡಿರಲಿಲ್ಲ: ನಿಖಿಲ್ ಕುಮಾರಸ್ವಾಮಿ
Advertisement
ಇದೇ ವೇಳೆ ಕರಾಟೆಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಶುಭ ಹಾರೈಸಿದೆ.
ಮಾಜಿ ಶಾಸಕರಾದ ವೈ.ಎಸ್.ವಿ. ದತ್ತ, ಪುಸ್ತಕದ ಲೇಖಕರಾದ ಅರವಿಂದ ಚೊಕ್ಕಾಡಿ ಮತ್ತಿತರ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.
2/2 pic.twitter.com/pFsu3KRd8s
— Siddaramaiah (@siddaramaiah) December 17, 2022
Advertisement
ಸಂವಿಧಾನದ ಬಗ್ಗೆ ಗೌರವ ಇಲ್ಲದೇ ಇದ್ದರೆ ಅಂಥವರು ರಾಜಕಾರಣಿ ಆಗಬಾರದು. ಎಲ್ಲ ಧರ್ಮವನ್ನು ಗೌರವಿಸಬೇಕು. ಭಾರತ ದೇಶ ಯಾವುದೋ ಒಂದು ಧರ್ಮ, ಜಾತಿಯ ದೇಶ ಅಲ್ಲ. ನಾವು ಭಾರತೀಯರು ಎನ್ನುವುದು ತಲೆಯಲ್ಲಿ ಇರಬೇಕು. ಇದನ್ನ ಪ್ರಸ್ತಾಪಿಸಿದ್ರೆ ಸಿ.ಟಿ. ರವಿಯಂಥ ಮತಾಂಧ ನನಗೆ ಮುಸಲ್ಮಾನರ ಹೆಸರನ್ನ ಇಡುತ್ತಾನೆ. ನನ್ನ ತಂದೆ ತಾಯಿ ನನಗೆ ಸಿದ್ದರಾಮಯ್ಯ ಅಂಥ ಹೆಸರಿಟ್ಟಿದ್ದಾರೆ. ಸಿದ್ರಾಮುಲ್ಲಾ ಖಾನ್ ಎಂದು ಹೇಳಲು ಇವನ್ಯಾವ ಗಿರಾಕಿ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಮಹಾತ್ಮ ಗಾಂಧೀಜಿ ಕೊಂದವರಿಂದ ಪಾಠ ಕಲಿಯಬೇಕಾ? ನಾಥೂರಾಮ್ ಗೋಡ್ಸೆಗೆ ಗುಡಿ ಕಟ್ಟಿಸಿ ಪೂಜೆ ಮಾಡುತ್ತಾರೆ. ಯುವಕರಲ್ಲಿ ಜಾತಿ ಧರ್ಮದ ಡೇಂಜರ್ ಅಫೀಮ್ ಹುಟ್ಟು ಹಾಕಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಜಕೀಯ ಜಗ್ಗಾಟದಲ್ಲಿ ಕೋಮುವಾದಿ ಬಿಜೆಪಿ ಸೋಲಿಸಬೇಕು. ಇಲ್ಲದೇ ಇದ್ದರೆ ಈ ರಾಜ್ಯ ಮತ್ತು ದೇಶಕ್ಕೆ ಯಾವುದೇ ಭವಿಷ್ಯ ಇಲ್ಲ ಅಂತ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.