ಚಿತ್ರದುರ್ಗ: ವಿಚಾರವಾದಿಗಳು ದ್ರೋಣಾಚಾರ್ಯರಾದರೆ ನಾನೊಬ್ಬ ಏಕಲವ್ಯನೆಂದು ಬಹುಭಾಷಾ ನಟ ಪ್ರಕಾಶ ರೈ ಹೇಳಿದ್ದಾರೆ.
ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿಯಲ್ಲಿ ನಡೆಯುತ್ತಿರೋ ರಾಷ್ಟ್ರೀಯ ನಾಟಕೋತ್ಸವಕ್ಕೆ ಕಂಸಾಳೆ ಬಾರಿಸುತ್ತಾ, ಆ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಮೂಲಕ ಚಾಲನೆ ನೀಡಿ ಪ್ರಕಾಶ್ ರೈ ಮಾತನಾಡಿದರು.
Advertisement
ಮುಕ್ತ ವಿಚಾರ, ಸಾಹಿತಿಗಳು ಹಾಗು ಬಸವಣ್ಣನವರಂತಹ ಹೋರಾಟಗಾರರನ್ನು ನನಗೆ ಮೊದಲು ಪರಿಚಯಿಸಿದ್ದು ಈ ರಂಗಭೂಮಿ. ನನ್ನಲ್ಲಿ ಮಾನವೀಯ ಮೌಲ್ಯಗಳನ್ನು ಸೃಷ್ಟಿಸಿ, ಇಷ್ಟೊಂದು ಎತ್ತರಕ್ಕೆ ಬೆಳೆಸುವಲ್ಲಿ ಈ ರಂಗಭೂಮಿಯ ಕೊಡುಗೆ ಅಪಾರ ಎಂದು ಸ್ಮರಿಸಿದರು.
Advertisement
ಒಂದು ಕಾಲದಲ್ಲಿ ಆಯುಧಗಳಿಗೆ ಸಾಣೆ ಹಿಡಿಯುತಿದ್ದ ಈ ಹಳ್ಳಿ ಇಂದು ರಂಗ ಕಲಾವಿದರ ಮನಸುಗಳಿಗೆ ಸಾಣೆ ಹಿಡಿಯುತ್ತಾ ಸಾಣಿಹಳ್ಳಿ ಯಾಗಿದೆ ಅಂತ ಕೂಡ ಬಣ್ಣಿಸಿದರು. ಈ ಸಮಾರಂಭದ ದಿವ್ಯಸಾನಿಧ್ಯವನ್ನು ತರಳುಬಾಳು ಶಾಖಾಮಠದ ಪಂಡಿತಾರಾದ್ಯ ಶ್ರೀಗಳು ವಹಿಸಿದ್ದೂ, ಕೇಂದ್ರ ಕೌಶಲ್ಯಭಿವೃದ್ಧಿ ಖಾತೆ ಸಚಿವ ಅನಂತ ಕುಮಾರ್ ಹೆಗ್ಡೆ,ಸಮಾಜಕಲ್ಯಾಣ ಸಚಿವ ಹೆಚ್.ಆಂಜನೇಯ, ತೋಟಗಾರಿಕಾ ಹಾಗು ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಗಣ್ಯರು ಭಾಗಿಯಾಗಿದ್ರು.