ಬೆಳಗಾವಿ: ನನಗೆ ಸಚಿವ ಸ್ಥಾನಕ್ಕಾಗಿ ರಾಜಕೀಯ ಬೆಳವಣಿಗೆಗಳು ಅನ್ನೋದು ಕಟ್ಟು ಕಥೆ. ನಾನು ನನ್ನ ಪಕ್ಷದ ಶಿಸ್ತಿನ ಸಿಪಾಯಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ಜಾರಕಿಹೊಳಿ ಮನೆಗೆ ಯಾಕೆ ಹೋಗಬಾರದು. ಪಕ್ಷದ ಮುಖಂಡರು ಇನ್ನೊಬ್ಬ ಮುಖಂಡರ ಮನೆಗೆ ಯಾಕೆ ಹೋಗಬಾರದು ಎಂದು ಪ್ರಶ್ನಿಸಿದ್ದಾರೆ.
Advertisement
ನನಗೆ ಸಚಿವ ಸ್ಥಾನಕ್ಕಾಗಿ ರಾಜಕೀಯ ಬೆಳವಣಿಗೆಗಳು ಎನ್ನುವ ವಿಷಯಕ್ಕೆ ಪ್ರತಿಕ್ರಿಯಿದ ಹೆಬ್ಬಾಳ್ಕರ್, ಜಿಲ್ಲಾ ವಿಭಜನೆ ಆಡಳಿತಕ್ಕೆ ಸಂಬಂಧಿಸಿದ್ದೇ ಹೊರತು ಯಾರನ್ನ ನಿಯಂತ್ರಿಸಲು ಅಲ್ಲ. ನಮ್ಮ ಪಕ್ಷ ಹಾಗೂ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ನನ್ನ ಹಾಗೂ ಜಾರಕಿಹೊಳಿ ಕುಟುಂಬದ ನಡುವೆ ಯಾವುದೇ ಭಿನ್ನಮತವಿಲ್ಲ. ಪಿಎಲ್‍ಡಿ ಬ್ಯಾಂಕ್ ಚುನಾವಣೆಗೆ ಸಂಬಂಧಪಟ್ಟಂತೆ ನನ್ನ ಪಿಎಲ್‍ಡಿ ಚುನಾವಣೆ ನನ್ನ ಕ್ಷೇತ್ರಕೋಸ್ಕರ ಮಾಡಿದ್ದೇ ಹೊರತಾಗಿ ಯಾರೋನೋ ಮೆಚ್ಚಿಸೋಕೆ, ಪ್ರತಿಷ್ಠೆಗಾಗಿ ಮಾಡಲಿಲ್ಲ. ನನಗೆ ಸಚಿವ ಸ್ಥಾನ ಬೇಕು ಅಂತಾ ಇಲ್ಲ, ಪಕ್ಷ ಯಾವುದೇ ಹುದ್ದೆ ಕೊಟ್ಟರು ನಿಭಾಯಿಸುತ್ತೇನೆ ಎಂದರು.
Advertisement
ಎಲ್ಲರ ಒಮ್ಮತದಿಂದ ಪಿಎಲ್‍ಡಿ ಬ್ಯಾಂಕ್ ನ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ. ನನ್ನ ವಿರುದ್ಧದ ವೈಯಕ್ತಿಕ ಟೀಕೆಗಳಿಗೆ ನಾನು ಉತ್ತರ ಕೊಡಲ್ಲ. ಭಗವಂತ ಎಲ್ಲವನ್ನು ನೋಡಿಕೊಳ್ಳುತ್ತಾನೆ. ಚುನಾವಣೆಯಲ್ಲಿ ಯಾರ ಗೆಲುವು ಇಲ್ಲ. ಸೋಲು ಇಲ್ಲ. ಪಕ್ಷದ ಮುಖಂಡರ ಸಮ್ಮುಖದಲ್ಲಿ ಎಲ್ಲವೂ ಸುಖಾಂತ್ಯವಾಗಿದೆ. ಜಾರಕಿಹೊಳಿ ಸಹೋದರರೊಂದಿಗೆ ಪಕ್ಷದ ವರಿಷ್ಠರು ಮಾತನಾಡಿದ್ದಾರೆ. ನನ್ನ ಕ್ಷೇತ್ರಕ್ಕೆ ಗೆಲುವು ಆಗಿದೆ ಎಂದು ಸಂತೋಷ ಹಂಚಿಕೊಂಡಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv