ನವದೆಹಲಿ: ಪ್ರಿಯಾಂಕಾ ಗಾಂಧಿ (Priyanka Gandhi) ವಯನಾಡಿನಿಂದ ಸ್ಪರ್ಧಿಸುತ್ತಿರುವುದು ನನಗೆ ಖುಷಿ ತಂದಿದೆ. ಅವರು ಸಂಸತ್ತಿನಲ್ಲಿ ಇರಬೇಕು ಎನ್ನುವುದು ನನ್ನ ಆಸೆ. ಜನರು ಪ್ರಿಯಾಂಕಾರನ್ನ ಆಯ್ಕೆ ಮಾಡುವ ಮೂಲಕ ಒಳ್ಳೆಯ ತೀರ್ಪು ನೀಡಲಿದ್ದಾರೆ ಎಂದು ರಾಬರ್ಟ್ ವಾದ್ರಾ (Robert Vadra) ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಸ್ಪರ್ಧೆ ಬಗ್ಗೆ ಮಾತನಾಡಿದ ಅವರು, ನಾನು ಯಾವಾಗಲೂ ಸಕ್ರಿಯ ರಾಜಕಾರಣದಲ್ಲಿರಲು ಬಯಸುತ್ತೇನೆ. ಪ್ರಿಯಾಂಕಾ ಗಾಂಧಿ ಸಂಸದರಾಗಬೇಕೆಂದು ನಾನು ಬಯಸುತ್ತೇನೆ. ಅವರು ಹೆಚ್ಚಿನ ಬಹುಮತದಿಂದ ಗೆಲ್ಲುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ಜನರ ನಿಜವಾದ ಸಮಸ್ಯೆಗಳನ್ನು ಪ್ರಸ್ತಾಪಿಸಬೇಕೆಂದು ನಾನು ಬಯಸುತ್ತೇನೆ. ಪ್ರಿಯಾಂಕಾ ಬುದ್ಧಿವಂತ ಮಹಿಳೆ. ಅವರು ನನಗಿಂತ ಮೊದಲು ಸಂಸತ್ತಿನಲ್ಲಿ ಇರಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ ಅಕ್ರಮ- 0.001 %ರಷ್ಟು ನಿರ್ಲಕ್ಷ್ಯ ಕಂಡುಬಂದ್ರೂ ಕೂಲಂಕುಷವಾಗಿ ನಿಭಾಯಿಸಬೇಕು: ಸುಪ್ರೀಂ
ಆದರೆ ನಮ್ಮ ಈ ನಿರ್ಧಾರದಿಂದ ಬಿಜೆಪಿ ನಾಯಕರು ಚಿಂತಿತರಾಗಿದ್ದಾರೆ. ಮುಂದೇನು ಮಾಡಬಹುದೆಂಬುದನ್ನು ಅರ್ಥಮಾಡಿಕೊಳ್ಳಲು ಅವರು ಒಟ್ಟಿಗೆ ಸೇರುತ್ತಿದ್ದಾರೆ. ಪ್ರಿಯಾಂಕಾ ಅವರು ಸಮಸ್ಯೆಗಳನ್ನು ಎತ್ತುತ್ತಾರೆ. ಲಡ್ಕಿ ಹೂಂ ಲಾಡ್ ಸಕ್ತಿ ಹೂಂ ಎಂಬ ಘೋಷಣೆಯನ್ನು ನೀಡಿ ಅವರು ಮಹಿಳೆಯರಿಗಾಗಿ ದೀರ್ಘಕಾಲ ಹೋರಾಡಿದವರು. ಹೀಗಾಗಿ ಬಿಜೆಪಿ ಹೆದರುತ್ತಿದೆ ಎಂದು ತಿಳಿಸಿದ್ದಾರೆ.