ಉಡುಪಿ: ಕರಾವಳಿ ಜನರ ಇಚ್ಛೆಯಿಂದ ನನಗೆ ಆನಂದವಾಗಿದೆ. ರಾಜಕೀಯದ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ, ಗೊಂದಲದಲ್ಲಿದ್ದೇನೆ ಎಂದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮುತಾಲಿಕ್ ಕರಾವಳಿಗೆ ಬರಬೇಕು ಎಂಬ ಒತ್ತಾಯದ ಕುರಿತು ಮಾತನಾಡಿದ ಅವರು, ಹಿಂದುತ್ವದ ಆದರ್ಶ ನಿರ್ಮಾಣ ಆಗಿರುವುದೇ ಕರಾವಳಿಯಲ್ಲಿ. ಇಡೀ ರಾಜ್ಯಕ್ಕೆ ಮಾದರಿಯಾದ ಆರ್.ಎಸ್.ಎಸ್ (RSS) ಕಾರ್ಯಕ್ರಮ ಜಾರಿಯಾಗಿದ್ದು ಕರಾವಳಿಯಲ್ಲಿ. ಇಲ್ಲಿ ನಡೆದ ಹಿಂದೂ ಸಮಾಜೋತ್ಸವಗಳು ದೇಶಕ್ಕೆ ಮಾದರಿ ಎಂದು ಹೇಳಿದರು.
Advertisement
ಕರಾವಳಿಯಲ್ಲಿ ಹಿಂದುತ್ವಕ್ಕೆ ಸ್ವಲ್ಪ ಏಟಾಗಿದೆ. ನನಗೆ ಕರಾವಳಿಗರು ಪ್ರೀತಿ ವಿಶ್ವಾಸ ನೀಡುತ್ತಾ ಬಂದಿದ್ದಾರೆ. ಜನರ ಈ ತುಡಿತಕ್ಕೆ ನಾವು ಬದ್ಧರಾಗಿದ್ದೇವೆ. ಸಮಾಜದಲ್ಲಿ ಈಗ ಹಿಂದುತ್ವದ ಹಸಿವಿದೆ ಆಕರ್ಷಣೆಯಿದೆ. ಹಿಂದುತ್ವಕ್ಕೆ ಒಬ್ಬ ನಾಯಕ ಬೇಕಾಗಿದ್ದಾನೆ ಎಂದು ಹೇಳಿದರು. ಇದನ್ನೂ ಓದಿ: ಚುನಾವಣೆಗೆ ಸ್ಪರ್ಧಿಸುವಂತೆ ಮುತಾಲಿಕ್‍ಗೆ ಮನವಿ: ಉಡುಪಿಯಲ್ಲಿ ಕಾದಿದ್ಯಾ ಗುರು-ಶಿಷ್ಯನ ಹಣಾಹಣಿ?
Advertisement
Advertisement
ಪ್ರಖರ ಹಿಂದೂವಾದಿ ಎಂಬ ಕಾರಣಕ್ಕೆ ನಾನು ರಾಜಕೀಯ (Politics) ಪ್ರವೇಶ ಮಾಡಬೇಕೆಂಬ ಒತ್ತಾಯವಿದೆ. ಕರ್ನಾಟಕದಲ್ಲಿ ಯೋಗಿ ಮಾದರಿಯ ಆಡಳಿತಕ್ಕಾಗಿ ನೀವು ಸ್ಪರ್ಧಿಸಿ ಎನ್ನುತ್ತಿದ್ದಾರೆ. ಜನರ ಈ ತುಡಿತಕ್ಕೆ ನಾವು ಬದ್ಧರಾಗಿದ್ದೇವೆ. ರಾಜಕೀಯ ವ್ಯವಸ್ಥೆ ಅಷ್ಟೊಂದು ಸುಲಭವಾಗಿಲ್ಲ ಎಂದು ತಿಳಿಸಿದರು.
Advertisement
ಇಲ್ಲಿಯವರೆಗೆ ಚುನಾವಣೆ (Election) ಬೇಡ ಬೇಡ ಎನ್ನುತ್ತಿದ್ದೆ. ಇನ್ನೂ ನಾನು ಯಾವುದೇ ನಿರ್ಧಾರ ಮಾಡಿಲ್ಲ. ಜನಸಾಮಾನ್ಯರ ಇಚ್ಛೆ ಮುತಾಲಿಕ್ ಸ್ಪರ್ಧಿಸಲೇಬೇಕು ಅಂತಿದ್ದಾರೆ. ಉತ್ತರ ಪ್ರದೇಶ ಮಾದರಿ ಪ್ರಮೋದ್ ಮುತಾಲಿಕ್ ರಿಂದ ಸಾಧ್ಯ ಎನ್ನುತ್ತಿದ್ದಾರೆ ಎಂದು ಅವರು ನುಡಿದರು.