– ಸಿಎಂಗೆ ಮಾನ ಮರ್ಯಾದೆ ಇದ್ಯಾ ಎಂದು ಮಾಜಿ ಸಿಎಂ ಪ್ರಶ್ನೆ
– ಪ್ರಜ್ವಲ್ ಯಾವಾಗ ಬರ್ತಾನೆ ಅಂತಾ ಗೊತ್ತಿಲ್ಲ
ಬೆಂಗಳೂರು: ರೇವಣ್ಣ ವಿಚಾರದಲ್ಲಿ ಮಾತ್ರ ಹೋರಾಟ ಮಾಡ್ತೀನಿ. ಪ್ರಜ್ವಲ್ ರೇವಣ್ಣ ಬಗ್ಗೆ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
Advertisement
ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್ ಆರೋಪ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೆಚ್‌ಡಿಕೆ ಹಾಜರಾಗಿದ್ದರು. ಈ ವೇಳೆ ರೇವಣ್ಣ, ಪ್ರಜ್ವಲ್ ರೇವಣ್ಣ ಪ್ರಕರಣ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಐಟಿ ರಚನೆ ಆಗಿದೆ. ಗೃಹ ಸಚಿವರಿಗೆ ಪ್ರಶ್ನೆ ಮಾಡ್ತೀನಿ. ನಿಮ್ಮ ತನಿಖೆ ರೇವಣ್ಣ, ಪ್ರಜ್ವಲ್ ಮೇಲೆ ಯಾಕೆ ಟಾರ್ಗೆಟ್ ಆಗಿದೆ. ವೀಡಿಯೋ ಬಿಡುಗಡೆ ಮಾಡಿದವರನ್ನ ಯಾಕೆ ತನಿಖೆ ಮಾಡ್ತಾ ಇಲ್ಲ. ಮಹಿಳಾ ಆಯೋಗ ಕೂಡ ಪತ್ರ ಬರೆದಿದೆ. ವೀಡಿಯೋ ಲೀಕ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಅಂತ. ಆದರೆ ಇದುವರೆಗೂ ಏನು ಮಾಡಿಲ್ಲ. ಮಿಸ್ಟರ್ ಪರಮೇಶ್ವರ ಏನ್ ಮಾಡ್ತಾ ಇದ್ದಾರೆ ಎಂದು ಪ್ರಶ್ನಿಸಿದರು.
Advertisement
Advertisement
14 ವರ್ಷದ ಕೆಲಸದಲ್ಲಿ ಇದ್ದವನು ಪ್ರಜ್ವಲ್ ನಡವಳಿಕೆ ಗೊತ್ತಿದ್ರೆ ಕೆಲಸ ಬಿಡಬೇಕಿತ್ತು. ಬಂಡೆ ರಕ್ಷಣೆ ಕೊಡುತ್ತೆ ಅಂತ ಕಾರ್ತಿಕ್ ಅಂದುಕೊಂಡಿದ್ದಾನೆ. ಬಂಡೆ ಹೇಗೆ ರಕ್ಷಣೆ ಮಾಡುತ್ತೆ ಅಂತ ಕಾಯ್ತಾ ಇದ್ದಾನೆ ಎಂದು ತಿರುಗೇಟು ನೀಡಿದರು.
Advertisement
ರೇವಣ್ಣಗೆ ಮಾತ್ರ ನೋಟಿಸ್ ಕೊಟ್ಟಿದ್ದಾರೆ. ನವೀನ್, ಕಾರ್ತಿಕ್, ಶ್ರೇಯಸ್‌ಗೆ ನೋಟಿಸ್ ಕೊಟ್ಟಿಲ್ಲ. ಕುಮಾರಸ್ವಾಮಿ ಬ್ಲ್ಯಾಕ್‌ಮೇಲರ್ ಅಲ್ಲ. ಡಿಕೆ ಸಂಸ್ಕೃತಿ ಎಲ್ಲರಿಗೂ ಗೊತ್ತಾಗಿದೆ. ಡಿಕೆ, ದೇವರಾಜೇಗೌಡ ಜೊತೆ ಯಾಕಪ್ಪ ಮಾತಾನಾಡಿದೆ ನೀನು? ನಿನಗೇನಿತ್ತು ಕೆಲಸ ಡಿಕೆ? 5 ಜನ ಇಟ್ಟುಕೊಂಡಿದ್ದೀನಿ ಅಂತ ಹೇಳಿದ್ದೀಯ ನೀನು. ಮುಖ್ಯಮಂತ್ರಿಗೆ ಮಾನ ಮರ್ಯಾದೆ ಇದ್ಯಾ? ಪರಮೇಶ್ವರ ನಿಮಗೆ ಬೆನ್ನುಮೂಳೆ ಇದ್ಯಾ? ಹಿಟ್ & ರನ್ ಅಂತಾರೆ ಕುಮಾರಸ್ವಾಮಿನಾ? ಎಸ್‌ಐಟಿ ಅಧಿಕಾರಿಗಳಿಗೆ ಕ್ರೆಡಿಬಲಿಟಿ ಇದ್ಯಾ? ಯಾವ ಪ್ರಕರಣ ಕೂಡ ತಾರ್ಕಿಕವಾಗಿ ಅಂತ್ಯ ಮಾಡಿಲ್ಲ ಎಂದು ಗರಂ ಆದರು.
ಸಿದ್ದರಾಮಯ್ಯ, ಕೆಂಪಯ್ಯ ಇಟ್ಟುಕೊಂಡು ನನ್ನ ಅರೆಸ್ಟ್ ಮಾಡಬೇಕು ಅಂತ ನಿಂತಿದ್ರು. ಒಂದು ದಿನ ಆದ್ರೂ ಅರೆಸ್ಟ್ ಮಾಡ್ಬೇಕು ಅಂತ ನಿಂತಿದ್ರು. ವಕೀಲರು ವಿಚಾರಣೆ ಹೋಗ್ಬೇಡಿ ಅಂದ್ರು ಅವತ್ತು ಹೋಗಿಲ್ಲ. 2,900 ಪ್ರಕರಣ ಅಂದಿದ್ದಾರೆ. ಇದೂವರೆಗೂ ಯಾವುದೇ ಕೇಸ್ ಆಗಿಲ್ಲ. ಎಷ್ಟು ಜನ ಬಂದಿದ್ದಾರೆ ಗೊತ್ತಿಲ್ವಾ? ಸಂತ್ರಸ್ತೆಯನ್ನು ಇನ್ನೂ ಮಹಜರು ಮಾಡಿದ್ದಾರಾ? ತೋಟದ ಮನೆಯಲ್ಲಿ ಅಲ್ಲೇ ಹಿಡಿದ್ರಾ. ಹುಣಸೂರಿನಲ್ಲಿ ಸಂತ್ರಸ್ತೆ ಸಿಕ್ಕಿದ್ದು ಸಂಬಂಧಿಕರ ಮನೆಯಲ್ಲಿ. ಪವಿತ್ರ ಅವರ ಮನೆಯಿಂದ ಕರೆದುಕೊಂಡು ಬಂದಿದ್ದಾರೆ ಎಂದರು.
12 ಜನರನ್ನು ಕುಮಾರಕೃಪದಲ್ಲಿ ಇಟ್ಟಿದ್ದಾರೆ. ಅವರನ್ನು ನಿಧಾನವಾಗಿ ಬಿಡ್ತಾರೆ. ಅನುಕಂಪ ಇವಾಗ ತೋರಿಸ್ತಾ ಇದ್ದೀರಿ. ಸಿಡಿ ಬಿಡುವಾಗ ಮುಖ ತೋರಿಸಿದ್ದೀರಿ. ಈಗ ಯಾಕೆ ಅನುಕಂಪ ನಿಮ್ಮ ಯೋಗ್ಯತೆಗೆ ಎಂದು ಕಿಡಿಕಾರಿದರು.
3:30 ಕ್ಕೆ ಒಕ್ಕಲಿಗರ ಮಂತ್ರಿಗಳು ಪತ್ರಿಕಾಗೋಷ್ಠಿ ಮಾಡ್ತಾರಂತೆ. ರೇವಣ್ಣ ವಿಚಾರದಲ್ಲಿ ಮಾತ್ರ ಹೋರಾಟ ಮಾಡ್ತೀನಿ. ಪ್ರಜ್ವಲ್ ರೇವಣ್ಣ ಬಗ್ಗೆ ಅಲ್ಲ. ರೇವಣ್ಣ ಅವರ ಪರವಾಗಿ ಶಾಸಕಾಂಗ ಪಕ್ಷದ ನಾಯಕನಾಗಿ ಹೋರಾಟ ಮಾಡ್ತೀನಿ. ಸಂಬಂಧಿ ಆಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಜ್ವಲ್ ರೇವಣ್ಣ ಯಾವಾಗ ಬರ್ತಾರೆ ಅಂತ ಗೊತ್ತಿಲ್ಲ. ನೀವು ತೋರಿಸಿದ್ದಷ್ಟೇ ನಮಗೆ ಗೊತ್ತು. ಅದನ್ನು ಹೊರತುಪಡಿಸಿ ಬೇರೆ ಏನು ಗೊತ್ತಿಲ್ಲ. 15 ತಾರೀಖು ಬರ್ತಾನೆ ಅಂತ ಹೇಳಿದ್ದಾರೆ, ಬರ್ತಾನಾ ನೋಡೋಣ. ಒಕ್ಕಲಿಗ ನಾಯಕರ ಪತ್ರಿಕಾಗೋಷ್ಠಿ ಮಾಡಲಿ. ನಾಳೆ ಅದರ ಬಗ್ಗೆ ಉತ್ತರ ಕೊಡ್ತೀನಿ ಎಂದರು.