ಹುಬ್ಬಳ್ಳಿ: ಧಾರವಾಡ ಲೋಕಸಭಾ ಅಭ್ಯರ್ಥಿ (Loksabha Candidate) ನಾನೇ ಎಂದು ಸಂಸದ ಪ್ರಹ್ಲಾದ್ ಜೋಶಿಯವರು ಘೋಷಿಸಿಕೊಳ್ಳುವ ಮೂಲಕ ಮಾಜಿ ಸಿಎಂ ಜಗದೀಶ್ ಶೆಟ್ಟರ್‍ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಶೆಟ್ಟರ್ ಘರ್ ವಾಪ್ಸಿ ಬೆನ್ನಲ್ಲೇ ಬಿಜೆಪಿಯಲ್ಲಿ (BJP) ಬಣ ರಾಜಕೀಯ ಆರಂಭವಾಗಿದೆ. ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಈಗಾಗಲೇ ಚುನಾವಣೆಗೆ ತಯಾರಿ ನಡಸಿದ್ದೇನೆ. ಜೋಶಿನೇ ಅಭ್ಯರ್ಥಿ ಮತ್ತೆ ಇನ್ನೇನು ಎಂದರು.
Advertisement
Advertisement
Advertisement
ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಅರವಿಂದ್ ಬೆಲ್ಲದ್ (Arvind Bellad), ಜೋಶಿ ಅವರೇ ನಮ್ಮ ನಾಯಕರು ಸುಮ್ಮನೆ ಏನೇನೋ ಹೇಳಬೇಡಿ ಅಂದ್ರು. ಬಳಿಕ ಮಾತು ಮುಂದುವರಿಸಿದ ಜೋಶಿ, ಶಾಸಕರು, ನಗರ ಘಟಕ ಅಧ್ಯಕ್ಷರು, ಕಾರ್ಯಕರ್ತರು ಚುನಾವಣೆ ಸಿದ್ಧತೆಯಲ್ಲಿದ್ದಾರೆ. ಯಾಕೋ ರಾಷ್ಟ್ರೀಯ ಅಧ್ಯಕ್ಷ ಅಂತ ಹೇಳುತ್ತಿದ್ದಾರೆ. ಪುಣ್ಯಕ್ಕೆ ರಾಷ್ಟ್ರಪತಿ ಆಗುತ್ತಾರೆ ಅಂದಿಲ್ಲ, ಜೋಶಿ ರಾಷ್ಟ್ರಪತಿ ಆಗುತ್ತಾರೆ, ಶೆಟ್ಟರ್ ಅಭ್ಯರ್ಥಿ ಆಗುತ್ತಾರೆ ಅಂತ ಹೇಳುತ್ತಿಲ್ಲ ಅಂದ್ರು. ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿಯಾಗಬೇಕು ಅನ್ನೋದನ್ನ ಶಾಮನೂರು ಸೂಕ್ಷ್ಮವಾಗಿ ಹೇಳಿದ್ದಾರೆ: ಸಿ.ಟಿ ರವಿ
Advertisement
ಶೆಟ್ಟರ್ ಪಕ್ಷಕ್ಕೆ ವಾಪಸ್ ಆಗಿದ್ದು ಸಂತೋಷ, ಒಳ್ಳೆಯದು. ಶೆಟ್ಟರ್ ಬಂದಿದ್ದು ಸಂತೋಷ ತಂದಿದೆ. ಈ ಭಾಗದಲ್ಲಿ ಎಲ್ಲರೂ ಒಂದುಗೂಡಿ ಪಕ್ಷ ಬಲವರ್ಧನೆ ಮಾಡುತ್ತೇವೆ. ನನ್ನದು ಯಾವುದೇ ವಿರೋಧ ಇಲ್ಲ ನಾನು ಆರು ತಿಂಗಳ ಹಿಂದೆ ಶೆಟ್ಟರ್ ವಾಪಸ್ ಬರ್ತಾರೆ ಅಂತ ಹೇಳಿದ್ದೆ. ನಾನು ಇದನ್ನು ಯಾವುದೇ ವ್ಯಂಗ್ಯದಿಂದ ಹೇಳುತ್ತಿಲ್ಲ ಸಹೃದಯದಿಂದ ಹೇಳುತ್ತಿದ್ದೇನೆ. ಶೆಟ್ಟರ್ ಆಗಮನ ವಿಚಾರದಲ್ಲಿ ಸ್ಥಳೀಯ ನಾಯಕರನ್ನು ನಿರ್ಲಕ್ಷ್ಯ ಮಾಡಿಲ್ಲ ಅವರ ಗಮನಕ್ಕೆ ತಂದಿದ್ದೇನೆ ಎಂದರು.
ನಮಗೆ ಲಿಂಗಾಯತ ಸೇರಿದಂತೆ ಎಲ್ಲಾ ಸಮುದಾಯ ಬೇಕು. ಲಕ್ಷ್ಮಣ ಸವದಿಯಲ್ಲಿ ಬಿಜೆಪಿಯ ವೈಚಾರಿಕ ರಕ್ತವಿದೆ. ಅವರು ವಾಪಸ್ ಪಕ್ಷಕ್ಕೆ ಬಂದ್ರೆ ಸಂತೋಷ. ಬೆಂಗಳೂರಿನಲ್ಲಿ ಶೆಟ್ಟರ್ ಜೊತೆಗೆ ಮಾತನಾಡಿಸಿರುವೆ ವೆಲ್‍ಕಮ್ ಬ್ಯಾಕ್ ಅಂತ ಹೇಳಿದ್ದೇನೆ. ಆದರೆ ವೈಯಕ್ತಿಕವಾಗಿ ಮಾತನಾಡಿಲ್ಲ ಅವರು ಹುಬ್ಬಳ್ಳಿಗೆ ಬರಲಿ ಮಾತನಾಡುವೆ. ಗಾಲಿ ಜನಾರ್ದನ ರೆಡ್ಡಿ ಯಾವಾಗ ಬೇಕಾದರೂ ಪಕ್ಷಕ್ಕೆ ಬರಬಹುದು ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.