ಮಂಡ್ಯ: ಚುನಾವಣೆಗೆ ನಿಲ್ಲಬಾರದು ಅಂದುಕೊಂಡಿದ್ದೆ, ಆದ್ರೆ ಪ್ರಧಾನಿ ನರೇಂದ್ರ ಮೋದಿ ಅವರ ದುರಹಂಕಾರದ ಮಾತು ಕೇಳಿ ಲೋಕಸಭಾ ಚುನಾವಣೆಗೆ ಕಣಕ್ಕಿಳಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಗುಡುಗಿದ್ದಾರೆ.
ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ದುರಹಂಕಾರ ಇರುವ ವ್ಯಕ್ತಿ ಪ್ರಧಾನ ಮಂತ್ರಿ ಆಗಿದ್ದಾರೆ. ಈ ವಯಸ್ಸಿನಲ್ಲಿ ಚುನಾವಣೆಗೆ ಹೋಗಬಾರದು ಅಂದುಕೊಂಡಿದ್ದ ನಾನು ಮೋದಿ ಅವರ ದುರಹಂಕಾರದ ಮಾತು ಕೇಳಿ ನನಗೆ ಇನ್ನೂ ಪಾರ್ಲಿಮೆಂಟ್‍ನಲ್ಲಿ ಹೋರಾಡುವ ಶಕ್ತಿ ಇದೆ ಅಂತ ತಿರ್ಮಾನಿಸಿ ಚುನಾವಣೆಗೆ ನಿಂತೆ. ಮಾಜಿ ಸಿಎಂ ಸಿದ್ದರಾಮಯ್ಯಗೆ ನಡೆ ಹೋಗೋಣ ಎಂದೆ. ಕಳೆದ ಮೂರ್ನಾಲ್ಕು ದಿನದಿಂದ ನಾನು ಸಿದ್ದರಾಮಯ್ಯ ಎಲ್ಲಾ ಕಡೆ ಓಡಾಡುತ್ತಾ ಇದ್ದೇವೆ ಅಂತ ತಿಳಿಸಿದರು.
Advertisement
Advertisement
ಬಿಜೆಪಿ ಅವರು ಕಾಂಗ್ರೆಸ್ ಮುಕ್ತ ಭಾರತ ಮಾಡ್ತೀನಿ ಅಂತಾರೆ. ಹೀಗಾದರೆ ನಮ್ಮಂತ ಸಣ್ಣ ಸಣ್ಣ ಪಾರ್ಟಿ ಉಳಿಯಲು ಸಾಧ್ಯವೇ? ಆದ್ದರಿಂದ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎಲ್ಲರನ್ನೂ ಜೊತೆಗೂಡಿಸಿದ್ದಾರೆ ಎಂದು ಮಹಾಮೈತ್ರಿಯ ಬಗ್ಗೆ ಮಾತನಾಡಿದರು. ಬಳಿಕ ಪಾರ್ಲಿಮೆಂಟ್‍ನಲ್ಲಿ ಒಂದು ದಿನ ರೈತರ ಬಗ್ಗೆ ಮಾತನಾಡದ ಮೋದಿ ಚುನಾವಣೆ ಸಂದರ್ಭದಲ್ಲಿ 6 ಸಾವಿರ ಘೋಷಿಸಿದ್ದಾರೆ. 6 ಸಾವಿರದಲ್ಲಿ ಏನು ಸಿಗುತ್ತೆ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.