– ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಫಸ್ಟ್ ರಿಯಾಕ್ಷನ್
ಪಾಟ್ನಾ: ನಮ್ಮ ಪಕ್ಷದ ನಾಯಕರ ಅಪೇಕ್ಷೆಯಂತೆ ರಾಜೀನಾಮೆ (Resignation) ಸಲ್ಲಿಸಿದ್ದೇನೆ ಎಂದು ಜೆಡಿಯು ಪಕ್ಷದ ಮುಖ್ಯಸ್ಥ ಹಾಗೂ ಬಿಹಾರದ ನಿರ್ಗಮಿತ ಸಿಎಂ ನಿತೀಶ್ ಕುಮಾರ್ (Nitish Kumar) ಹೇಳಿದ್ದಾರೆ.
Advertisement
ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ ಬಳಿಕ ಬಿಹಾರದ (Bihar) ಪಾಟ್ನಾದಲ್ಲಿ (Patna) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. INDIA ಒಕ್ಕೂಟದಿಂದಲೂ ಹೊರಗೆ ಬಂದಿದ್ದೇನೆ. ಮಹಾಘಟಬಂಧನ್‌ನಿಂದಲೂ ಆಚೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಕ್ಷಕ್ಕೆ ದುಡಿದ ಎಲ್ಲಾ ಶಾಸಕರು, ಕಾರ್ಯಕರ್ತರಿಗೂ ಅಧಿಕಾರ – ಡಿಕೆ ಶಿವಕುಮಾರ್
Advertisement
Advertisement
ಇಂಡಿಯಾ ಒಕ್ಕೂಟದಿಂದ ಹೊರಬಂದು ನಿತೀಶ್ ಕುಮಾರ್ ಎನ್‌ಡಿಎ (NDA) ತೆಕ್ಕೆಗೆ ಮರಳಿದ್ದಾರೆ. ಇನ್ನುಮುಂದೆ ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರ ಆಡಳಿತ ನಡೆಸಲಿದ್ದು, ಇಂದು ಸಂಜೆ ನಿತೀಶ್ ಕುಮಾರ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು 543 ಕ್ಷೇತ್ರಗಳಲ್ಲೂ ಗೆಲ್ಲಲಿ – ಡಿಕೆ ಶಿವಕುಮಾರ್
Advertisement
ಭಾನುವಾರ (ಜ.28) ಬೆಳಗ್ಗೆ ರಾಜಭವನಕ್ಕೆ ತೆರಳಿದ್ದ ನಿತೀಶ್ ಕುಮಾರ್, ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಮೂಲಕ ರಾಷ್ಟ್ರೀಯ ಜನತಾ ದಳ ಜೊತೆಗಿನ ಮೈತ್ರಿಯನ್ನು ಕೊನೆಗೊಳಿಸಿದ್ದಾರೆ. ಇದನ್ನೂ ಓದಿ: Breaking: ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ – ಮೈತ್ರಿ ಸರ್ಕಾರ ಪತನ