ಕರ್ನಾಟಕ ಟೆಲಿವಿಷನ್ ಕ್ಲಬ್ ನಲ್ಲಿ ರವಿಕಿರಣ್ ಅವ್ಯವಹಾರ ಮಾಡಿದ್ದಾರೆ ಎಂದು ಈ ಹಿಂದೆ ಕೆಲವು ಸದಸ್ಯರು ಆರೋಪಿಸಿದ್ದರು. ಈ ಕುರಿತಂತೆ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದರು. ಈ ಪ್ರಕರಣದ ಕುರಿತಂತೆ ಸ್ವತಃ ರವಿಕಿರಣ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಯಾವುದೇ ಕಾರಣಕ್ಕೂ ಅವ್ಯವಹಾರ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ರವಿಕಿರಣ್, ‘ಕಳೆದ ಡಿಸೆಂಬರ್ ಗೆ ನನ್ನ ಅವಧಿ ಮುಕ್ತಾಯವಾಗಿದೆ. ಮತ್ತೆ ಎಲೆಕ್ಷನ್ ನಡೆದಿಲ್ಲ, ಹೊಸ ಸದಸ್ಯರು ಸೇರ್ಕೊಂಡು ಕಮಿಟಿ ಮಾಡ್ಕೊಂಡಿದ್ದಾರೆ. ಆ ಮೂಲಕ ನನ್ನ ಕ್ಲಬ್ ನ ನಿಂದ ವಜಾ ಮಾಡಿದ್ದಾರೆ, ಇದು ಕಾನೂನು ಬಾಹಿರ. ನಂತರ ಕ್ಲಬ್ ನ ಹಣವನ್ನು ದುರ್ಬಳಕೆ ಮಾಡ್ಕೊಂಡಿದ್ದಾರೆ. 2003 ರಲ್ಲಿ ಕ್ಲಬ್ ಶುರುಮಾಡಿದ್ದು ನಾನು. ಕ್ಲಬ್ ನ ಸಿಬ್ಬಂದಿ ಗಳು, ಇತರೆ ಖರ್ಚು ಸೇರಿ 60 ಲಕ್ಷ ಸಾಲ ಮಾಡಿದ್ದೀನಿ. ಆ ಹಣ ವಾಪಸ್ ಕೊಡಲಿ, ಈ ಕ್ಷಣ ಕ್ಲಬ್ ಗೆ ರಾಜಿನಾಮೆ ನೀಡಿ ಹೊರ ಹೋಗ್ತಿನಿ. ಕರೋನ ಇದ್ದ ಕಾರಣ ಕಳೆದ ನಾಲ್ಕು ವರ್ಷ ದಿಂದ ಟ್ಯಾಕ್ಸ್ ಕಟ್ಟಿಲ್ಲ. ಇದು ಕ್ಲಬ್ ನ ಖಜಾಂಚಿ ಜವಾಬ್ದಾರಿ , ಅವರು ಕಟ್ಟಬೇಕು. ಕಳೆದ ಒಂದುವರೇ ವರ್ಷ ದಿಂದ ಕ್ಲಬ್ ಸಂಪೂರ್ಣ ನಿಂತು ಹೋಗಿದೆ ಎಂದಿದ್ದಾರೆ.
Advertisement
Advertisement
ಹಣ ಕಳುವಿನ ಆರೋಪದ ಬಗ್ಗೆಯೂ ಮಾತನಾಡಿದ ಅವರು, ‘6.70 ಸಾವಿರ ರೂಪಾಯಿ ನನ್ನ ಹಣ, ನಾನು ತಗೊಂಡಿದ್ದೀನಿ, ನಾನು ಕಳ್ಳ ಅಲ್ಲ. ಕ್ಲಬ್ ನ ಎಲ್ಲ ಕಡೆಗೆ ಹೊಸದಾಗಿ ಬೀಗ ಹಾಕ್ಕೊಂಡಿದ್ದಾರೆ. ನನ್ನ ಕ್ಲಬ್ ನಲ್ಲಿ ನಾನು ಕಳ್ಳತನ ಮಾಡ್ತಿನಾ? ನನ್ನ ಸಹೋದರ ಕಮಿಟಿ ಮೆಂಬರ್ ಆಗಿದ್ದವನು. ನಮ್ ಹತ್ರ ದುಡ್ಡಿರಲಿಲ್ಲ, ಹಾಗಾಗಿ ಅವನ ನಿಂತ್ಕೊಂಡು ಕಡಿಮೆ ಬೆಲೆ ಕೆಲಸ ಮಾಡಿಕೊಟ್ಟ. ನಾವು ಯಾರಿಗೂ ಕಂಟ್ರಾಕ್ಟ್ ಕೊಟ್ಟಿರಲಿಲ್ಲ. ಸದ್ಯ ಕ್ಲಬ್ ನ ಸಾಲ 4,5 ಕೋಟಿ ಸಾಲ ಇದೆ ಎಂದೂ ಅವರು ಎಲ್ಲದಕ್ಕೂ ಉತ್ತರ ನೀಡಿದ್ದಾರೆ.
Advertisement
ನಿರ್ಮಾಪಕ ಹಾಗೂ ನಟ ರವಿಕಿರಣ್ (Ravikiran) ಮೇಲೆ ಗಂಭೀರ ಆರೋಪ ಕೇಳಿ ಬಂದಿತ್ತು. ಕರ್ನಾಟಕ ಟೆಲಿವಿಷ್ ಕ್ಲಬ್ (Television Club) ನಲ್ಲಿ ಹಣ ದುರುಪಯೋಗ ಮತ್ತು ಅಕ್ರಮ ಸೇರಿದಂತೆ ನಾನಾ ಆರೋಪಗಳನ್ನು ಸಂಘದ ಸದಸ್ಯರು ಮತ್ತು ಕಲಾವಿದರು ಮಾಡಿದ್ದರು. ಜೊತೆಗೆ ಸುಬ್ರಮಣ್ಯಪುರ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದರು. ಕಳೆದ 20 ವರ್ಷದಿಂದ ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರಿಗಾಗಿ ಕ್ಲಬ್ ಇದೆ. ಆನಂತರ ಅದು ಉತ್ತರ ಹಳ್ಳಿ ಬಳಿ ಕರ್ನಾಟಕ ಟೆಲಿವಿಷನ್ ಕ್ಲಬ್ ಸರ್ಕಾರದ ಅನುದಾನದಲ್ಲಿ ಕೊಟ್ಟ ಜಾಗದಲ್ಲಿ ನಿರ್ಮಾಣಗೊಂಡಿದೆ. ಜೊತೆಗೆ ಸರ್ಕಾರವೇ 3 ಕೋಟಿಗೂ ಅಧಿಕ ಹಣ ಸಹ ಕ್ಲಬ್ ಗಾಗಿ ನೀಡಿದೆ. ಈ ಕ್ಲಬ್ ನಲ್ಲಿ ಸಾವಿರಾರು ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರು ಇದ್ದಾರೆ. ಕ್ಲಬ್ ಆರಂಭದಿಂದ ಈವರೆಗೂ ರವಿಕಿರಣ್ ಕಾರ್ಯದರ್ಶಿಯಾಗಿದ್ದಾರೆ. ಕ್ಲಬ್ ನಿರ್ಮಾಣವನ್ನು ಕಾಂಟ್ರಾಕ್ಟ್ ನೀಡದೆ ಸಹೋದರನಿಗೆ ನೀಡಿ ಅವ್ಯವಹಾರ ಮಾಡಿದ್ದಾರೆಂದು ಆರೋಪ ಮಾಡಲಾಗುತ್ತಿದೆ. ಜೊತೆಗೆ ಕ್ಲಬ್ ಗೆ ಸಂಬಂಧಿಸಿದ ಜಿಎಸ್ ಟಿ, ಬಿಬಿಎಂಪಿ ಟ್ಯಾಕ್ಸ್ ಸೇರಿದಂತೆ ಹಲವು ತೆರಿಗೆಗಳ ಪಾವತಿ ಮಾಡಿಲ್ಲ ಎನ್ನುವ ಗಂಭೀರ ಆರೋಪವೂ ಅವರ ಮೇಲಿದೆ. ಹಣವನ್ನು ಪಾವತಿ ಮಾಡದೇ ಅದರ ಹೆಸರಲ್ಲಿ ಕ್ಲಬ್ ಸದಸ್ಯರಿಂದ ವಸೂಲಿ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಈ ವಿಚಾರದ ಚರ್ಚೆ ಹೆಚ್ಚಾದಾಗ ರವಿಕಿರಣ್ ಅವರ ಸದಸ್ಯತ್ವವನ್ನು ಸಸ್ಪೆಂಡ್ ಮಾಡಲಾಗಿತ್ತು. ಕ್ಲಬ್ ಗೆ ಬರದಂತೆ ಆದೇಶ ಇದ್ದರೂ ಸಹ ಬಂದು ಕ್ಲಬ್ ನಲ್ಲಿದ್ದ 6 ಲಕ್ಷ ಹಣ ರವಿಕಿರಣ್ ತೆಗೆದುಕೊಂಡು ಹೋಗಿದ್ದಾರೆಂದು ಗಂಭೀರ ಆರೋಪ ಮಾಡಲಾಗಿತ್ತು. ಜೊತೆಗೆ ಕ್ಲಬ್ ನಲ್ಲಿ ಅನುಮತಿ ಇಲ್ಲದಿದ್ದರೂ ಬಂದಿದ್ದಾರೆ ಎಂದು ಪ್ರಶ್ನೆ ಮಾಡಿದಾಗ ಗಲಾಟೆಯಾಗಿ ಠಾಣೆಗೆ ಬಂದು ದೂರು ನೀಡಿದ್ದರು ಕೆಲ ಕಲಾವಿದರು.