ಬೆಂಗಳೂರು: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಯಾರನ್ನ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬುದು ಸಿಎಂ (Siddaramaiah) ಪರಮಾಧಿಕಾರ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ (R. V. Deshpande) ತಿಳಿಸಿದ್ದಾರೆ.
ಸಚಿವ ಸಂಪುಟ ಪುನರ್ ರಚನೆ (Cabinet Reshuffle) ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನ್ನಷ್ಟು ಹೆಚ್ಚು ಕಾಲ ಬೇರೆಯವರು ಸಚಿವರಾಗಿ ಇರಲಿಲ್ಲ. ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಹೀಗಾಗಿ ನಾನು ಸಚಿವ ಸ್ಥಾನದ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಸಂಪುಟದಲ್ಲಿ ಯಾರು ಇರಬೇಕು ಅಂತ ಸಿಎಂ ತೀರ್ಮಾನ ಮಾಡ್ತಾರೆ. ಅದು ಪಕ್ಷದ ಪದ್ದತಿ ಇದೆ. ಹೈಕಮಾಂಡ್ ಇದೆ. ರಾಹುಲ್ ಗಾಂಧಿ, ಪಕ್ಷದ ಅಧ್ಯಕ್ಷರು ಚರ್ಚೆ ಮಾಡಿ ನಿರ್ಧಾರ ಮಾಡ್ತಾರೆ. ನಾನು ಅದರ ಬಗ್ಗೆ ಏನು ಮಾತಾಡೊಲ್ಲ. ಅದರ ಬಗ್ಗೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಇಲ್ಲಿದೆ ನೋಡಿ ಲೋಕಾಯುಕ್ತಕ್ಕೆ ನಾನು ಸಲ್ಲಿಸಿರೋ ಅಫಿಡವಿಟ್ – ಛಲವಾದಿಗೆ ಡಿಕೆಶಿ ತಿರುಗೇಟು
ಉಪ ಲೋಕಾಯುಕ್ತರಿಂದ ಸರ್ಕಾರದ ಮೇಲೆ 63% ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರದ ಮೇಲೆ ಅ ರೀತಿ ಹೇಳೋದು ಚಿಲ್ಲರೆ ಪಾಲಿಟಿಕ್ಸ್. 40% ನಮ್ಮದು ಇತ್ತು ಈಗ 60% ನಿಮ್ಮದು ಇದೆ ಅನ್ನೋದು ಸರಿಯಲ್ಲ. ನಾನು ಯಾವತ್ತು ಮಾತಾಡಿದ್ರೆ ಜವಾಬ್ದಾರಿಯಿಂದ ಮಾತಾಡ್ತೀನಿ. ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಬೇಕಾದ್ರೆ ಯಾವುದಾದರೂ ಪುರಾವೆ ಇರಬೇಕು. ಜವಾಬ್ದಾರಿಯಿಂದ ಮಾತಾಡಬೇಕು.60%, 53% ಅಂತ ಹೇಳೋಕೆ ಏನಿದೆ ದಾಖಲೆ? ಉಪ ಲೋಕಾಯುಕ್ತರ ಹೇಳಿಕೆ ನಾನು ನೋಡಿಲ್ಲ ಎಂದರು. ಇದನ್ನೂ ಓದಿ: KIADB ಹೊಸ ಬಹುಮಹಡಿ ಕಟ್ಟಡ ಉದ್ಘಾಟಿಸಿದ ಸಿಎಂ, ಡಿಸಿಎಂ

