ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ನಾಯಿ (Dog) ಮರಿ ಹೋಲಿಕೆ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಎಚ್ಚರಿಕೆ ಮತ್ತು ಚಾಣಾಕ್ಷ ನಡೆ ಪ್ರದರ್ಶಿಸಿದ್ದಾರೆ. ಯಾವುದೇ ಸಿಟ್ಟು ಸೆಡವು ತೋರದೇ ಸಿದ್ದರಾಮಯ್ಯ ಹೇಳಿಕೆಗೆ ಸೈಲೆಂಟಾಗಿಯೇ ಸಿಎಂ ಟಕ್ಕರ್ ನೀಡಿದ್ದಾರೆ.
Advertisement
ಬಳ್ಳಾರಿಯಲ್ಲಿ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ನಾಯಿ ನಿಯತ್ತಿನ ಪ್ರಾಣಿ ಅಂತ ಸಿದ್ದರಾಮಯ್ಯರಿಗೆ ಗೊತ್ತಿಲ್ಲ. ನಾಯಿಯಂತೆ ನಾನು ನಿಯತ್ತಿನ ಮನುಷ್ಯ, ನಿಯತ್ತಾಗಿದ್ದೀನಿ. ಚುನಾವಣೆಯಲ್ಲಿ ಜನ ಅವರಿಗೆ ತಕ್ಕ ಪಾಠ ಕಲಿಸ್ತಾರೆ ಅಂತ ಸಾಫ್ಟ್ ಆಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಡ್ಯಾಮೇಜ್ ಹೇಳಿಕೆಗೆ ಸಿಎಂ ಎಚ್ಚರಿಕೆ ನಡೆ ತೋರಿದ್ದಾರೆ. ಅಗ್ರೆಸ್ಸಿವ್ ಅಟ್ಯಾಕ್ ಬದಲು ಸಾಫ್ಟ್ ಅಟ್ಯಾಕ್ ಮೂಲಕ ಚಾಣಾಕ್ಷ ನಡೆ ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅತಿಯಾದ ಹೇಳಿಕೆಗಳೇ ಕಾಂಗ್ರೆಸ್‌ಗೆ ದುಬಾರಿಯೋ? ಲಾಭವೋ!
Advertisement
Advertisement
ಬಿಜೆಪಿಯ ಜನ ಸಂಕಲ್ಪ ಸಮಾವೇಶಗಳಲ್ಲಿ, ಜಿಲ್ಲಾ ಪ್ರವಾಸಗಳ ಸಂದರ್ಭಗಳಲ್ಲಿ ಧಮ್, ತಾಕತ್ ಇದೆಯಾ ಅಂತ ಕಾಂಗ್ರೆಸ್ ನಾಯಕರ ವಿರುದ್ಧ ಸಿಎಂ ಬೊಮ್ಮಾಯಿ ಗುಡುಗುತ್ತಿದ್ದರು. ಆದ್ರೆ ಆ ರೀತಿಯ ತೀವ್ರ ಮಾತಿನ ಸಮರವನ್ನು ಸಿಎಂ ಅವರು ಈಗ ಮಾಡದೇ ಅಚ್ಚರಿ ಹುಟ್ಟಿಸಿದ್ದಾರೆ. ಈಗ ಸಿದ್ದರಾಮಯ್ಯ ಅವರ ಕೆರಳಿಸೋ ಹೇಳಿಕೆಗೆ ಮಾತ್ರ ತಣ್ಣನೆ ದನಿಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದರ ಹಿಂದೆ ಸಿದ್ದರಾಮಯ್ಯ ದೆಸೆಯಿಂದ ಸಿಕ್ಕಿರೋ ಅನುಕಂಪವನ್ನೇ ಬಂಡವಾಳ ಮಾಡಿಕೊಳ್ಳುವ, ಸಿದ್ದರಾಮಯ್ಯ ಹೇಳಿಕೆಯನ್ನೇ ಅಸ್ತ್ರ ಮಾಡಿಕೊಳ್ಳುವ ಉದ್ದೇಶ ಇದೆ ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಜಾತಿ ಸಮೀಕರಣದ ಬಹುದೊಡ್ಡ ಚಕ್ರವ್ಯೂಹ – ನಡ್ಡಾ ಯಾತ್ರೆಯಲ್ಲಿ 2 ದಿನ 5 ಸಮುದಾಯಗಳೇ ಟಾರ್ಗೆಟ್!
Advertisement
ಮೋದಿಯವರ ಎದುರು ಬೊಮ್ಮಾಯಿ ನಾಯಿ ಮರಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಿಜೆಪಿಯೊಳಗೂ ಸಾಕಷ್ಟು ಕೋಲಾಹಲ ಸೃಷ್ಟಿಸಿದೆ. ಇದೀಗ ಸಿದ್ದರಾಮಯ್ಯರ ಈ ಹೇಳಿಕೆಯೇ ಬಿಜೆಪಿಗೆ ಅನುಕೂಲಕರ ವಾತಾವರಣ ಸೃಷ್ಟಿಮಾಡಿಕೊಡುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ. ಸಿದ್ದರಾಮಯ್ಯ ಅವರ ಡ್ಯಾಮೇಜಿಂಗ್ ಹೇಳಿಕೆಯನ್ನೇ ವರವಾಗಿ ಮಾಡಿಕೊಳ್ಳಲು ಕಮಲ ಪಡೆ ಮುಂದಾಗಿದೆ. ಮುಖ್ಯವಾಗಿ ಸಿದ್ದರಾಮಯ್ಯ ಹೇಳಿಕೆಯಿಂದ ಬಿಜೆಪಿ ನಾಯಕರು ಒಟ್ಟಾಗಿ ಒಬ್ಬರ ಮೇಲೆ ಒಬ್ಬರು ಸಿದ್ದು ಮೇಲೆ ಸವಾರಿ ಮಾಡಲಾರಂಭಿಸಿದ್ದಾರೆ. ಆ ಮೂಲಕ ಬಿಜೆಪಿಯಲ್ಲಿ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡ್ತಿದ್ದಾರೆ. ಚುನಾವಣೆ ಸಮೀಪ ಸಿದ್ದರಾಮಯ್ಯಗೆ ಹಾಗೂ ಕಾಂಗ್ರೆಸ್‍ಗೆ ಇಕ್ಕಟ್ಟು, ಮುಜುಗರ ಉಂಟು ಮಾಡಲು ಬಿಜೆಪಿ ತಂತ್ರ ಹೆಣೆಯಲು ಮುಂದಾಗಿದೆ. ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿ ಖಂಡಿಸುವ ಮೂಲಕ ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ರೂಪಿಸಲು ಬಿಜೆಪಿ ಪ್ಲಾನ್ ರೂಪಿಸಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k