ನಾನು ಮೊದಲು ಹಿಂದೂಸ್ತಾನಿ, ಆಮೇಲೆ ಮುಸ್ಲಿಂ: ಜಮೀರ್ ಅಹ್ಮದ್

Public TV
2 Min Read
zameer ahmed khan

– ನಾವು ಅನ್ನದಾತರ ಆಸ್ತಿ ಮುಟ್ಟೋಕೆ ಸಾಧ್ಯನಾ?

ಹುಬ್ಬಳ್ಳಿ: ಮುಜರಾಯಿ ವಕ್ಫ್ ಎರಡೂ ಒಂದೇ. ನಾವು ಅಲ್ಲಾ ಅಂತೀವಿ, ನೀವು ದೇವರು ಅಂತೀರಿ. ಅಲ್ಲಾ ನಮ್ಮ ನಂಬಿಕೆ, ಜೋಶಿ ಏನಾದರೂ ಹೇಳಲಿ. ನಾನು ಮೊದಲು ಹಿಂದೂಸ್ತಾನಿ. ಆಮೇಲೆ ಮುಸ್ಲಿಂ ಎಂದು ಹುಬ್ಬಳ್ಳಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಆಸ್ತಿಗೆ ನಾವು ನೋಟಿಸ್ ಕೊಟ್ಟಿದ್ದೇವೆ. ಬೇರೆಯವರ ಆಸ್ತಿ ತೆಗೆದುಕೊಳ್ಳಲು ನಾವು ಯಾರು? ರೈತರು ಅನ್ನದಾತರು, ನಾವು ಅವರ ಆಸ್ತಿ ಮುಟ್ಟೋದಕ್ಕೆ ಸಾಧ್ಯನಾ? ವಕ್ಫ್ ಆಸ್ತಿ 1.12 ಲಕ್ಷ ಎಕರೆ ಇದೆ. ನಮ್ಮ ಬಳಿ ದಾಖಲೆ ಇದೆ. ಮುಜರಾಯಿ ವಕ್ಫ್ ಎರಡೂ ಒಂದೇ ಆಗಿದೆ. ನಾವು ಅಲ್ಲಾ ಅಂತೀವಿ, ನೀವು ದೇವರು ಅಂತೀರಿ ಎಂದು ಹೇಳಿದರು. ಇದನ್ನೂ ಓದಿ: ಮೀಸಲು ಪಡೆಯ ಹೆಡ್‌ಕಾನ್‌ಸ್ಟೇಬಲ್ ಹೃದಯಾಘಾತದಿಂದ ಸಾವು

ಬಿಜೆಪಿಯವರು (BJP) ಈ ತರಹ ರಾಜಕಾರಣ ಮಾಡಬಾರದು. ರಾಜಕೀಯಕ್ಕೆ ಬಂದು ಜಾತಿ ಮಾಡಿದ್ರೆ ಅವರು ನಾಲಾಯಕ್. ನಾವು ಜಾತಿ ನೋಡಿದ್ರೆ ನಿರ್ನಾಮ ಆಗುತ್ತೇವೆ. ಬಿಜೆಪಿಯವರ ಕಾಲದಲ್ಲಿ ನೋಟಿಸ್ ಕೊಟ್ಟಿದ್ದಾರೆ. ನಾನು ಅದಕ್ಕೆ ದಾಖಲೆ ಕೊಡುತ್ತೇನೆ. ಇದಕ್ಕೆ ಮಾನ್ಯ ಯತ್ನಾಳ್ ಏನು ಹೇಳುತ್ತಾರೆ? ಮುಜರಾಯಿ ಇಲಾಖೆ ಆಸ್ತಿ ಕೂಡಾ ಒತ್ತುವರಿ ಆಗಿದೆ. ಅದನ್ನು ಉಳಿಸೋಣ ನಡೀರಿ. ನನಗೆ ಹಿಂದೂ ಬ್ರದರ್ಸ್ ಮತ ಕೊಟ್ಟಿದ್ದಾರೆ. ನನಗೆ ಎಲ್ಲ ಸಮಾಜ ಒಂದೇ. ಎಲ್ಲ ಸಮಾಜವನ್ನು ಜೊತೆಗೆ ತೆಗೆದುಕೊಂಡು ಹೋಗುವವರೇ ರಾಜಕಾರಣಿ ಎಂದರು. ಇದನ್ನೂ ಓದಿ: ತುಮಕೂರು| ಅಂತಾರಾಜ್ಯ ಕಳ್ಳನ ಬಂಧನ – 42 ಬೈಕ್ ಜಪ್ತಿ
ವಿಜಯಪುರ ಜಿಲ್ಲೆಯಲ್ಲಿ 1200 ಎಕರೆ ಇಲ್ಲವೇ ಇಲ್ಲ. ಇರೋದು ಕೇವಲ 12 ಎಕರೆ. ಅಲ್ಲಿ 11 ಎಕರೆ ಸ್ಮಶಾನ ಇದೆ. ನಾವು ಒಂದಿಂಚೂ ಜಾಗ ತೆಗೆದುಕೊಂಡಿಲ್ಲ. ನಮಗೆ 1.12 ಲಕ್ಷ ಎಕರೆ ದಾನ ಮಾಡಿದ್ದಾರೆ. ನಾನು 11 ಜಿಲ್ಲೆಯಲ್ಲಿ ವಕ್ಫ್ ಅದಾಲತ್ ಮಾಡಿದ್ದೇನೆ. ಅಧಿಕಾರಿಗಳ ಸಭೆ ಮಾಡಿದ್ದೇನೆ. ವಿಜಯಪುರ ಜಿಲ್ಲೆಯಲ್ಲಿ ಸಭೆ ಮಾಡಿದಾಗ ಯತ್ನಾಳ್‌ಗೆ ಆಹ್ವಾನ ಕೊಟ್ಟಿದ್ದೆವು. ರೈತರಿಗೆ ಅನ್ಯಾಯ ಆದ್ರೆ ಯತ್ನಾಳ್ ಯಾಕೆ ಸಭೆಗೆ ಬರಲಿಲ್ಲ? ರೈತರ ಆಸ್ತಿ ತೆಗೆದುಕೊಳ್ಳಲು ಸಾಧ್ಯನಾ? ಅಧಿಕಾರಿಗಳು ಅಷ್ಟು ಸುಲಭವಾಗಿ ಮಾಡ್ತಾರಾ? ರೈತರ ಆಸ್ತಿಯನ್ನು ಮುಟ್ಟೋಕೆ ಆಗಿಲ್ಲ. ಇದೊಂದು ರಾಜಕೀಯ ಪಿತೂರಿ ಎಂದು ಹರಿಹಾಯ್ದರು. ಇದನ್ನೂ ಓದಿ: ಬೆಂಗಳೂರಿನ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲೂ ರಾಜಕೀಯ – ಜಯನಗರಕ್ಕಿಲ್ಲ ಫಂಡ್; ಆಕ್ರೋಶ

Share This Article