ಚಿಕ್ಕಮಗಳೂರು: ದತ್ತಜಯಂತಿ (Dattajayanthi) ಹಿನ್ನೆಲೆಯಲ್ಲಿ ಶಾಸಕ ಸಿ.ಟಿ.ರವಿ (CT Ravi) ಮನೆ ಮನೆಗೆ ತೆರಳಿ ಭಿಕ್ಷಾಟನೆ ಆರಂಭಿಸಿದ್ದಾರೆ.
ಭಿಕ್ಷಾಟನೆ ಮೂಲಕ ಮಾಲಾಧಾರಿಗಳಿಂದ ಪಡಿ ಸಂಗ್ರಹ ಕಾರ್ಯ ನಡೆಯುತ್ತಿದೆ. ತೆಂಗಿನಕಾಯಿ, ಬಾಳೆಹಣ್ಣು, ಅಕ್ಕಿ, ವಿಳ್ಯೆದೆಲೆ ಅಡಿಕೆ ಹಾಗೂ ಬೆಲ್ಲವನ್ನು ಸ್ಥಳೀಯರು ನೀಡಿದ್ದಾರೆ. ನಾಳೆ ಇರುಮುಡಿ ರೂಪದಲ್ಲಿ ದತ್ತಾತ್ರೇಯ ಸ್ವಾಮಿಗೆ ಅರ್ಪಣೆ ಮಾಡಲಿದ್ದಾರೆ. ನಾಳೆ ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತಜಯಂತಿ ನಡೆಯಲಿದೆ. ಇಂದು ಮಧ್ಯಾಹ್ನ ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಖಾಕಿ ಪಡೆ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದೆ.
ಇತ್ತ ಬಿಜೆಪಿ (BJP) ನಾಯಕರ ಹೆಸರಿಗೆ ಮುಸ್ಲಿಂ (Muslim) ಹೆಸರನ್ನು ಹಾಕಿ ಟ್ವೀಟ್ ಮಾಡ್ತಿರೋ ವಿಚಾರ ಸಂಬಂಧ ಕಾಂಗ್ರೆಸ್ ಟ್ವೀಟ್ ಗೆ ಸಿ.ಟಿ ರವಿ ವ್ಯಂಗ್ಯವಾಡಿದರು. ಬಿಜೆಪಿ ನಾಯಕರ ಸ್ವಭಾವ ಹಾಗೆ ಇದ್ದರೆ ಕಾಂಗ್ರೆಸ್‍ನವರು ಖಂಡಿತಾ ಕರೆಯಲಿ. ನನ್ನ ಸ್ವಭಾವ ಕುಂಕುಮ ಕಂಡರೆ ಆಗದಿದ್ರೆ, ಕೇಸರಿ ನೋಡಿದ್ರೆ ಆಗದಿದ್ರೆ, ಮುಲ್ಲಾಗಳ ಮೇಲೆ ಪ್ರೀತಿ ಜಾಸ್ತಿ ಇದ್ರೆ ಖಂಡಿತಾ ಕರೆಯಬಹುದು. ನನ್ನ ಮುಲ್ಲಾ ಅಂತ ಕರೆಯೋಕ್ಕಾಗಲ್ಲ, ಹಿಂದೂ ಹುಲಿ ಅಂತಾನೇ ಕರೆಯಬೇಕು ಎಂದರು.
ನನ್ನ ಮುಲ್ಲಾ ಅಂತ ಕರೆದ್ರೆ ಮುಲ್ಲಾಗಳು ಒಪ್ಪಿಕೊಳ್ಳಲ್ಲ. ಸ್ವಭಾವಕ್ಕೆ ತಕ್ಕಂತೆ ಬಿರುದುಗಳು ನಮಗೆ ಬರುತ್ತದೆ. ಪರ್ಷಿಯನ್ ಭಾಷೆಯನ್ನ ಆಡಳಿತ ಭಾಷೆಯನ್ನಾಗಿ ಮಾಡಿದವನನ್ನ ಕನ್ನಡ ಪ್ರೇಮಿ ಅಂತ ಹೇಳಕ್ಕಾಗುತ್ತಾ.? ಹಾಗೆ ಹೇಳಿದ್ರೆ ಅದಕ್ಕಿಂತ ಅಪಪ್ರಚಾರ ಬೇರೆ ಏನಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ದತ್ತ ಜಯಂತಿ ಉತ್ಸವಕ್ಕೆ ಅಡ್ಡಿಪಡಿಸುವ ಹುನ್ನಾರ – ರಸ್ತೆಯುದ್ದಕ್ಕೂ ಮೊಳೆಗಳನ್ನು ಹಾಕಿದ ಕಿಡಿಗೇಡಿಗಳು
ಮುಲ್ಲಾ ಅನ್ನೋ ಹೆಸರು ಯಾರಿಗೆ ಕನೆಕ್ಟ್ ಆಗುತ್ತೆ ಅಂದ್ರೆ, ಶಾದಿ ಭಾಗ್ಯ, ದೇ ಆರ್ ಆಲ್ ಮೈ ಬ್ರದರ್ಸ್ ಅನ್ನೋರಿಗೆ ಕನೆಕ್ಟ್ ಆಗುತ್ತೆ. ಬೆಂಕಿ ಹಾಕಿದ್ರು ಕೂಡ ಅಮಾಯಕರು ಅನ್ನೋರಿಗೆ ಕನೆಕ್ಟ್ ಆಗುತ್ತೆ. ಕೇಸರಿ, ಕುಂಕುಮವನ್ನ ದೂಡಿ ಟೋಪಿಯನ್ನ ಪ್ರೀತಿಯಿಂದ ಹಾಕಿಕೊಳ್ಳುವವರಿಗೆ ಕನೆಕ್ಟ್ ಆಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೆಸರೇಳದೆ ಸಿ.ಟಿ. ರವಿ ಕುಟುಕಿದರು.