ನವದೆಹಲಿ: ನಾನು ಚೀನಾದ ಪ್ರಜೆ, ನಾನು ಭಯೋತ್ಪಾದಕನಲ್ಲ ಎಂದು ಹುವಾವೇ ಟೆಲಿಕಮ್ಯುನಿಕೇಶನ್ಸ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಲಿ ಕ್ಸಿಯಾಂಗ್‌ವೇ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಹುವಾವೇ ಸಿಇಒ ಆದಾಯ ತೆರಿಗೆ ಇಲಾಖೆಯ ಜಾಮೀನು ಅರ್ಜಿಗೆ ಪ್ರತಿಕ್ರಿಯೆಯಾಗಿ ನಾನು ಚೀನಾದ ಪ್ರಜೆ, ಭಯೋತ್ಪಾದಕನಲ್ಲ ಎಂದು ತಿಳಿಸಿದ್ದಾರೆ ಹಾಗೂ ಚೀನಾಗೆ ಮರಳಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
- Advertisement3
ಜಾಮೀನು ಅರ್ಜಿಯನ್ನು ತಿರಸ್ಕರಿಸುವಂತೆ ಆದಾಯ ತೆರಿಗೆ ಇಲಾಖೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಲಿ ಅವರ ವಕೀಲ ವಿಜಯ್ ಅಗರ್ವಾಲ್ ಕಕ್ಷಿದಾರರ ಪರವಾಗಿ ಈ ಹೇಳಿಕೆಯನ್ನು ನೀಡಿದ್ದಾರೆ. ಇದನ್ನೂ ಓದಿ: 75ನೇ ಸ್ವಾತಂತ್ರ್ಯಕ್ಕೆ ಬಾಹ್ಯಾಕಾಶದಿಂದಲೂ ಬಂತು ಶುಭ ಹಾರೈಕೆ
- Advertisement
ಚೀನಾದ ಟೆಲಿಕಾಂ ಕಂಪನಿಯ ಭಾರತೀಯ ಶಾಖೆಗಳ ಮೇಲೆ ಕಳೆದ ಕೆಲವು ತಿಂಗಳುಗಳ ಹಿಂದೆ ಐಟಿ ಇಲಾಖೆ ರೇಡ್ ನಡೆಸಿತ್ತು. ಅದರ ತನಿಖೆ ಇನ್ನೂ ನಡೆಯುತ್ತಿದ್ದು, ಲಿ ಅವರು ತಮ್ಮ ತಾಯ್ನಾಡು ಚೀನಾಗೆ ಮರಳಿದರೆ, ಅವರನ್ನು ವಿಚಾರಣೆಗಾಗಿ ವಾಪಸ್ ಕರೆತರುವುದು ಭಾರತಕ್ಕೆ ಅತ್ಯಂತ ಕಷ್ಟವಾಗಬಹುದು ಎಂದು ಐಟಿ ಇಲಾಖೆ ನ್ಯಾಯಾಲಯಕ್ಕೆ ತಿಳಿಸಿದೆ.
ಐಟಿ ಇಲಾಖೆ ಲಿ ವಿರುದ್ಧ ಹೊರಡಿಸಿರುವ ಲುಕೌಟ್ ನೋಟಿಸ್ ರದ್ದುಗೊಳಿಸುವಂತೆ ವಕೀಲರು ಮನವಿ ಮಾಡಿದ್ದಾರೆ. ಆದರೆ ಲುಕೌಟ್ ನೋಟಿಸ್ ರದ್ದು ಮಾಡದಂತೆ ಐಟಿ ಆಕ್ಷೇಪಣೆ ಸಲ್ಲಿಕೆ ಮಾಡಿದೆ. ಇದನ್ನೂ ಓದಿ: ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗೆ ಇನ್ಮುಂದೆ ಒಂದೇ ಚಾರ್ಜರ್?