ರಾಯ್ಪುರ: ನನಗೀಗ 52 ವಯಸ್ಸು. ಆದರೆ ನನಗೆ ಸ್ವಂತ ಮನೆಯೇ ಇಲ್ಲ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
ರಾಯ್ಪುರದಲ್ಲಿ (Raipur) ನಡೆದ ಕಾಂಗ್ರೆಸ್‌ನ 85ನೇ ಸಂಪುಟ ಸಭೆಯಲ್ಲಿ ಮಾತನಾಡಿದ ಅವರು, ಮನೆಯಲ್ಲಿ ವಿಚಿತ್ರ ಪರಿಸ್ಥಿತಿ ಇತ್ತು. ನಾನು ಅಮ್ಮನ ಬಳಿಗೆ ಹೋಗಿ ಏನಾಯಿತು ಎಂದು ಕೇಳಿದೆ. ಅದಕ್ಕೆ ಅವರು, ನಾವು ಮನೆಯಿಂದ ಹೊರಡುತ್ತಿದ್ದೇವೆ ಎಂದರು. ಇದು ನನ್ನ ಮನೆ ಅಲ್ಲವೇ ಎಂದು ನಾನು ಕೇಳಿದೆ. ಆಗ ಅಮ್ಮ, ಇದು ನಮ್ಮ ಮನೆ ಅಲ್ಲ, ಸರ್ಕಾರದ್ದು ಎಂದರು ಎಂದು ರಾಹುಲ್ ಸನ್ನಿವೇಶವನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೆಲ ತಿಂಗಳು ಜೈಲಲ್ಲಿದ್ರೂ I Don’t Care- ವಿಚಾರಣೆಗೆ ಸಿಬಿಐ ಕಚೇರಿ ತಲುಪಿದ ಸಿಸೋಡಿಯಾ
Advertisement
Advertisement
ಹಾಗಾದರೆ ನಾವು ಎಲ್ಲಿಗೆ ಹೋಗೋದು ಎಂದು ನಾನು ಕೇಳಿದೆ. ಅದಕ್ಕೆ ಅಮ್ಮ, ಗೊತ್ತಿಲ್ಲ ಎಂದರು. ನನಗೆ ಈಗ 52 ವರ್ಷ ವಯಸ್ಸು. ಇನ್ನೂ ನನಗೆ ಮನೆ ಇಲ್ಲ ಎಂದು ತಿಳಿಸಿದ್ದಾರೆ.
Advertisement
Advertisement
ನಾನು ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದಾಗ, ನನ್ನ ಜವಾಬ್ದಾರಿ ಏನು ಎಂದು ಪ್ರಶ್ನಿಸಿಕೊಂಡಿದ್ದೆ. ಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಜನರಿಗೆ ನಾನಿದ್ದ ಕಚೇರಿ ಮನೆಯಂತೆಯೇ ಭಾಸವಾಗಬೇಕು ಎಂದುಕೊಂಡಿದ್ದೆ. ಯಾತ್ರೆಯೇ ನಮ್ಮ ಮನೆಯಾಗಿತ್ತು. ಈ ಮನೆಯ ಬಾಗಿಲು ಎಲ್ಲರಿಗೂ ತೆರೆದಿತ್ತು. ಶ್ರೀಮಂತರು, ಬಡವರು, ಪ್ರಾಣಿಗಳು ಎಲ್ಲರಿಗೂ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಉಗ್ರರ ಗುಂಡಿನ ದಾಳಿಗೆ ಕಾಶ್ಮೀರಿ ಪಂಡಿತ್ ಸಾವು
ಯಾತ್ರೆ ಒಂದು ಪುಟ್ಟ ಐಡಿಯಾ ಆಗಿತ್ತು. ಆದರೆ ನಂತರ ನಾನು ಅದರ ಆಳವನ್ನು ಅರ್ಥಮಾಡಿಕೊಂಡಿದ್ದೇನೆ. ಯಾತ್ರೆ ಮನೆಯಾದ ದಿನ ಯಾತ್ರೆಯೇ ಬದಲಾಯಿತು. ಜನರು ನನ್ನೊಂದಿಗೆ ರಾಜಕೀಯದ ಬಗ್ಗೆ ಮಾತನಾಡಲಿಲ್ಲ. ಕೊನೆಗೆ ನಮ್ಮ ಪುಟ್ಟ ಮನೆ ಕಾಶ್ಮೀರಕ್ಕೆ ಬಂದಾಗ, ನಾನು ನನ್ನ ಮನೆಗೆ ಬಂದೆ ಎನಿಸಿತು ಎಂದು ತಿಳಿಸಿದ್ದಾರೆ.