ಪುಷ್ಪ ಸಿನಿಮಾದ ಮೂಲಕ ಸಾಕಷ್ಟು ಹೆಸರು ಮಾಡಿರುವ ತೆಲುಗು ಚಿತ್ರೋದ್ಯಮದ ನಟಿ, ನಿರೂಪಕಿ ಅನಸೂಯ ಭಾರದ್ವಾಜ್ (Anasuya Bhardwaj) ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಈ ಹಿಂದೆ ತಮಗೂ ರಾಜಕೀಯಕ್ಕೂ (Politics) ಆಗಲ್ಲ ಅಂದಿದ್ದವರು. ದಿಢೀರ್ ಅಂತ ನನಗೆ ರಾಜಕೀಯಕ್ಕೆ ಬರಲು ಇಷ್ಟವಿದೆ ಎಂದಿದ್ದಾರೆ. ಅವರ ಈ ಮಾತು ನಾನಾ ಅನುಮಾನಗಳಿಗೆ ಎಡೆಮಾಡಿದೆ.
Advertisement
ಕೆಲವು ನಟಿಯರನ್ನು ನಟ ಪವನ್ ಕಲ್ಯಾಣ್ (Pawan Kalyan) ಸಂಪರ್ಕಿಸಿದ್ದು, ಮುಂದಿನ ಆಂಧ್ರದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಹೇಳಿದ್ದಾರಂತೆ. ಅಲ್ಲದೇ, ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ ಎಂದು ಆಶ್ವಾಸನೆ ಕೂಡ ನೀಡಿದ್ದಾರಂತೆ. ಅನಸೂಯ ಅವರನ್ನೂ ಪವನ್ ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಅನಸೂಯ ತಮ್ಮ ರಾಜಕೀಯ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
Advertisement
Advertisement
ನಾನಾ ಕಾರಣಗಳಿಂದ ಅನಸೂಯ ಸುದ್ದಿ ಆಗುತ್ತಲೇ ಇರುತ್ತಾರೆ. ಅತೀ ಹೆಚ್ಚು ಟ್ರೋಲ್ ಆಗುವ ವ್ಯಕ್ತಿಗಳ ಸಾಲಿನಲ್ಲಿ ಸದಾ ಕಾಣಿಸಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕುತ್ತಾ, ತಮ್ಮ ಹಿಂಬಾಲಕರಿಗೆ ಮನರಂಜನೆ ನೀಡುವ ಅನಸೂಯ, ಕೆಲವು ವಿಷಯಗಳಿಗೆ ತುಂಬಾ ಕಟ್ಟುನಿಟ್ಟು. ಅದರಲ್ಲೂ ಅಪಮಾನ ಮಾಡುವಂತಹ ಪದ ಬಳಕೆ ಮಾಡಿದರೆ, ಅವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಈ ನಟಿ.
Advertisement
ಸೋಷಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಮಾಡುವ ಫೋಟೋಗಳಿಗೆ ಕೆಲ ದಿನಗಳಿಂದ ನೆಗೆಟಿವ್ ಕಾಮೆಂಟ್ ಬರುತ್ತಿವೆ. ಅದರಲ್ಲೂ ಕೆಲವರು ‘ಆಂಟಿ’ (Aunty) ಎಂದು ಕರೆಯುತ್ತಿದ್ದಾರೆ. ಈ ಆಂಟಿ ಪದಕ್ಕೆ ಅವರು ಗರಂ ಆಗಿದ್ದಾರೆ. ಈ ಪದವನ್ನು ಹೇಳುವುದರ ಹಿಂದಿನ ಉದ್ದೇಶದ ಬಗ್ಗೆ ಅವರು ಮಾತನಾಡಿದ್ದಾರೆ. ಈ ರೀತಿಯಲ್ಲಿ ಕರೆದರೆ ಕೇಸ್ ದಾಖಲಿಸುವುದಾಗಿಯೂ ತಿಳಿಸಿದ್ದಾರೆ.
ಕೆಲವರಂತೂ ಈ ರೀತಿ ಹೇಳಿದ ಮೇಲೆ ಇನ್ನೂ ಜಾಸ್ತಿ ಕೀಟಲೆ ಮಾಡುತ್ತಿದ್ದಾರೆ. ಬೇಕು ಅಂತಾನೇ ಅನಸೂಯ ಅವರ ಫೋಟೋಗಳನ್ನು ಹುಡುಕಿ, ಹುಡುಕಿ ಫೋಟೋಗಳು ಆಂಟಿ ಎಂದು ಬರೆದು ಪೋಸ್ಟ್ ಮಾಡುತ್ತಿದ್ದಾರೆ. ಈ ಎಲ್ಲ ನಡೆಯನ್ನೂ ತಾವು ಗಂಭೀರವಾಗಿ ತಗೆದುಕೊಳ್ಳುವುದಾಗಿ ಅನಸೂಯ ಬರೆದುಕೊಂಡಿದ್ದಾರೆ. ಇಂತಹ ಕಾರಣಗಳಿಂದಾಗಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ನಟಿಗೆ ಪವನ್ ಗಾಳ ಹಾಕಿದ್ದಾರೆ.