ಬಳ್ಳಾರಿ: ಸದಾ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡುವ ಸಚಿವ ಶ್ರೀರಾಮುಲು ಅವರು, ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಅನ್ನೋ ಆಸೆ ನನಗೂ ಇದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
Advertisement
ಗಣಿ ನಾಡು ಬಳ್ಳಾರಿಯಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕುರುಬರ ಹಾಸ್ಟೆಲ್ ಉದ್ಘಾಟನೆ ವೇಳೆಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಕುರುಬ ಸಮುದಾಯ ಹಾಗೂ ಸಿದ್ದರಾಮಯ್ಯ ವಿರೋಧಿಯಲ್ಲ. ಅವಕಾಶ ಬಂದರೆ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ನನಗೂ ಇದೆ. ನಾನು ಮುಖ್ಯಮಂತ್ರಿ ಆಗಬೇಕು ಎನ್ನುವುದನ್ನು ಸಿದ್ದರಾಮಯ್ಯ ಕೂಡಾ ಒಪ್ಪುತ್ತಾರೆ. ದೊಡ್ಡ ರಾಜಕೀಯ ವ್ಯವಸ್ಥೆಯಲ್ಲಿ ರಾಜಕೀಯ ತಂತ್ರಗಳನ್ನು ಮಾಡಲೇಬೇಕು. ಮುಂದೊಂದು ದಿನ ನಾನು ಹಾಗೂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಬರುತ್ತೇವೆ. ಹಿಂದುಳಿದ ಜಾತಿಗಳನ್ನು ಒಂದು ಮಾಡುವ ಪ್ರಯತ್ನವನ್ನು ನಾನು ಮತ್ತು ಸಿದ್ದರಾಮಯ್ಯ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Bigg Boss-ರಣರಂಗವಾದ ಬಿಗ್ ಬಾಸ್ ಮನೆ : ರೊಟ್ಟಿ ವಿಚಾರಕ್ಕೆ ಇಬ್ಬರು ಸ್ಪರ್ಧಿಗಳ ನಡುವೆ ಕಿತ್ತಾಟ
Advertisement
Advertisement
ನಾನು ಮತ್ತು ಸಿದ್ದರಾಮಯ್ಯ ಎರಡು ಪ್ರತ್ಯೇಕ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದೆವು. ನಾವಿಬ್ಬರು ಒಂದೊಂದು ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಹೇಗೆ ಎನ್ನುವುದನ್ನು ಮುಂದೊಂದು ದಿನ ಹೇಳುವೆ. ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಹೇಗೆ ಗೆದ್ದರು ಎನ್ನುವುದನ್ನು ಹೋಗಿ ಅವರನ್ನೇ ಕೇಳಿ. ಪರೋಕ್ಷವಾಗಿ ಸಿದ್ದರಾಮಯ್ಯ ಗೆಲ್ಲಲು ಶ್ರೀರಾಮುಲು ಸಹಕಾರ ನೀಡಿರುವುದಾಗಿ ತಿಳಿಸಿದ್ದಾರೆ. ನಾನು ಸಿದ್ದರಾಮಯ್ಯ ವಿರೋಧಿಯಲ್ಲ. ನೋಡುವುದಕ್ಕೆ ಮಾತ್ರ ನಾವೂ ವಿರುದ್ಧ. ನಮ್ಮ ದೋಸ್ತಿ ಬೇರೇನೆ ಇದೆ. ಒಳಗೊಳಗೆ ನಾವೂ ಎನೋ ಮಾಡಿಕೊಳ್ಳುತ್ತೇವೆ. ಅದೆಲ್ಲಾ ನಿಮಗೆ ಗೊತ್ತಾಗಲ್ಲ ಎಂದಿದ್ದಾರೆ.
Advertisement
ನಾವಿಬ್ಬರೂ ರಾಜಕಾರಣದಲ್ಲಿ ಇರಬೇಕು. ನಾವಿಬ್ಬರೂ ವಿಧಾನಸೌಧದ ಒಳಗೆ ಇರಬೇಕು. ಸಿದ್ದರಾಮಯ್ಯಗೆ ಭಗವಂತ ಆರ್ಶಿವಾದ ಮಾಡಿದರೆ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ. ಹಿಂದುಳಿದ ವರ್ಗದಿಂದ ಅವಕಾಶ ಸಿಕ್ಕರೇ ನಾನು ಮುಖ್ಯಮಂತ್ರಿ ಆಗುವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಕುರ್ಚಿ ಎರುವ ಆಸೆಯನ್ನು ಶ್ರೀರಾಮುಲು ಹೊರಹಾಕಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ತಲುಪಿದ ಚೀನಾದ ಸರ್ವೇಕ್ಷಣಾ ಹಡಗು – ಈ ನೌಕೆಯ ವಿಶೇಷತೆ ಏನು?