ಚಿಕ್ಕೋಡಿ: ನನ್ನ ಹತ್ತಿರನೂ ಪೆನ್‌ಡ್ರೈವ್ (Pendrive) ಇದ್ದು ಬಿಡುಗಡೆಗಾಗಿ ಸಂದರ್ಭಕ್ಕೆ ಕಾಯುತ್ತಿದ್ದೇನೆ ಎಂದು ಶಾಸಕ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಲಕ್ಷ್ಮಣ ಸವದಿ, ನನ್ನ ಹತ್ತಿರ ಪೆನ್‌ಡ್ರೈವ್ ಇದ್ದಾವೆ. ಸಂದರ್ಭ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಪೆನ್‌ಡ್ರೈವ್ ವಿಚಾರಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರೈತರ ದ್ರೋಹಿ ಯಾರಾದ್ರೂ ಇದ್ರೆ ಅದು ಸಿದ್ದರಾಮಯ್ಯ – ಈಶ್ವರಪ್ಪ ಕಿಡಿ
ನಾನು ಮಾಧ್ಯಮದಲ್ಲಿ ಹೆಚ್‌ಡಿಕೆ ಮಾತನ್ನು ನೋಡಿದ್ದೇನೆ. ತುಂಬಾ ಜನರ ಕಡೆ ಪೆನ್‌ಡ್ರೈವ್ ಇದ್ದಾವೆ. ನನ್ನ ಹತ್ತಿರ ಒಂದು ಪೆನ್‌ಡ್ರೈವ್ ಇದೆ, ಕಾಲಾನುಸಾರ ಬಿಡುಗಡೆ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ. ವಿರೋಧ ಪಕ್ಷ ಇದೆಯೆಂದು ತೋರಿಸಲು ಆ ರೀತಿ ಕುಮಾರಸ್ವಾಮಿ ಮಾತನಾಡಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಕೊಕಟನೂರು ಗ್ರಾಮದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಗೃಹ ಸಚಿವರ ಜನ್ಮದಿನಕ್ಕೆ ನಾಟಿ ಹಸುವಿನ ಉಡುಗೊರೆ
Web Stories