ನಾನು ಕೂಡ ರಾಮಮಂದಿರ ನಿರ್ಮಾಣಕ್ಕೆ 10 ಲಕ್ಷ ಕೊಟ್ಟಿದ್ದೆ: ಬಿಜೆಪಿಗೆ ಲಕ್ಷ್ಮಣ ಸವದಿ ಟಾಂಗ್‌

Public TV
2 Min Read
Agnipath Project PM Narendra Modi Laxman Savadi BJP 1

ಬೆಂಗಳೂರು: ನಾನು ಕೂಡ ರಾಮಮಂದಿರ (Ram Mandir) ನಿರ್ಮಾಣಕ್ಕೆ 10 ಲಕ್ಷ ರೂ. ಕೊಟ್ಟಿದ್ದೇನೆ ಎಂದು ಬಿಜೆಪಿಗೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (Laxman Savadi) ಟಾಂಗ್‌ ಕೊಟ್ಟಿದ್ದಾರೆ.‌

ಹುಬ್ಬಳ್ಳಿಯಲ್ಲಿ (Hubballi) ಕರಸೇವಕರ ಬಂಧನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಭಾವನಾತ್ಮಕ ವಿಚಾರಗಳನ್ನ ಮುಂದಿಟ್ಟುಕೊಂಡು ಅದಕ್ಕೆ ಬಣ್ಣ ಕಟ್ಟಿ ರಾಜಕೀಯ ಮಾಡ್ತಾರೆ. ಈಗಾಗಲೇ ಗೃಹ ಸಚಿವರು ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈಗ ಇದಕ್ಕೆ ರಾಜಕೀಯ ಬಣ್ಣ ಬಳಿಯೋದು ಬೇಡ. ಹಳೆ ಕೇಸ್ ಆಗಿರುವುದರಿಂದ ಕ್ಲೋಸ್ ಮಾಡಬೇಕು ಅಂತಾ ಅದರ ಪ್ರಕ್ರಿಯೆ ಆಗ್ತಿದೆ. ಬಿಜೆಪಿ ಅವರಿಗೆ ಕೆಲಸ ಇಲ್ಲ. ಭಾವನಾತ್ಮಕ ವಿಚಾರ ತೆಗೆದುಕೊಂಡು ಸೃಷ್ಟಿ ಮಾಡಿ, ಬಣ್ಣ ಕಟ್ಟಿ ಈ ರೀತಿ ಮಾಡ್ತಾರೆ. ಇದರಿಂದ ಬಿಜೆಪಿ ಅವರಿಗೆ ಲಾಭ ಇಲ್ಲ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಮನ ಹೆಸರು ಇಟ್ಟುಕೊಂಡಿರೋ ಸಿದ್ದರಾಮಯ್ಯಗೆ ಒಳ್ಳೆಯದಾಗಲಿ: ಮಂತ್ರಾಲಯ ಶ್ರೀ

ram mandir 1

ಜನರಿಗೆ ಸಾಕಷ್ಟು ಸಮಸ್ಯೆ ಇದೆ. ಜನರಿಗೆ ಪರಿಹಾರ ಕೊಡಿಸೋದ್ರಲ್ಲಿ ಬಿಜೆಪಿ ಅವರು ಕೆಲಸ ಮಾಡಲಿ. ಭಾವನಾತ್ಮಕ ವಿಚಾರದಲ್ಲಿ ಹೊಟ್ಟೆ ತುಂಬೊಲ್ಲ. ಜನರ ಸಮಸ್ಯೆ ಬಗ್ಗೆ ಬಿಜೆಪಿ ಅವರು ಕೆಲಸ ಮಾಡಲಿ. ಪಕ್ಷವಾಗಿ ಜನರ ಪರ ಕೆಲಸ ಮಾಡಲಿ. ಅದನ್ನ ಮಾಡಿದ್ರೆ ಮುಂದೆ ಬಿಜೆಪಿ ಅವರಿಗೆ ಒಳ್ಳೆ ಅವಕಾಶ ಎಂದು ಹೇಳಿದ್ದಾರೆ.

ರಾಮಮಂದಿರ ಉದ್ಘಾಟನೆಗೆ ಸಿಎಂ, ಸಚಿವರಿಗೆ ಆಹ್ವಾನ ನೀಡದ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿದ ಅವರು, ರಾಮಮಂದಿರಕ್ಕೆ ಹಣ ಸಂಗ್ರಹ ಮಾಡುವಾಗ ಎಲ್ಲರೂ ನೆನಪು ಆದ್ರು. ರಾಮಮಂದಿರ ರೆಡಿ ಆದ ಮೇಲೆ ಯಾರ ನೆನಪು ಕೂಡ ಬರೊಲ್ಲ. ನಾನು ಕೂಡಾ ರಾಮಮಂದಿರ ನಿರ್ಮಾಣಕ್ಕೆ 10 ಲಕ್ಷ ರೂ. ಕೊಟ್ಟಿದ್ದೇನೆ. ಸ್ಥಳೀಯ RSS ನಾಯಕರು ಹಣ ತೆಗೆದುಕೊಂಡು ಹೋಗಿದ್ದರು. ಆದರೆ ಈಗ ಯಾವುದಕ್ಕೂ ಆಹ್ವಾನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಮ ಮಂದಿರ ಕಟ್ಟಿದ್ದಕ್ಕೆ ಸೇಡು, ಮುಸ್ಲಿಮರ ಓಲೈಕೆಗಾಗಿ ಕರಸೇವಕರ ಬಂಧನ: ಸೂಲಿಬೆಲೆ ಕಿಡಿ

ಬಿಜೆಪಿಯಲ್ಲಿ ಇತ್ತೀಚೆಗೆ ಒನ್ ಮ್ಯಾನ್ ಆರ್ಮಿ ರೀತಿ ಆಗಿದೆ. ರಾಮಮಂದಿರಕ್ಕಾಗಿ ರಥಯಾತ್ರೆ ಮಾಡಿದ್ರು ಅಡ್ವಾಣಿ.‌ ಆದರೆ ಅವರೇ ರಾಮಮಂದಿರ ಉದ್ಘಾಟನೆಗೆ ಬರಬಾರದು ಅಂತಾ ಸಂದೇಶ ಕೊಡೋದು ಎಷ್ಟು ಸರಿ. ರಾಮಮಂದಿರ ಆಗೋಕೆ ಅಡ್ವಾಣಿ ಕಾರಣ. ಅವರು ಬರದಾರದು ಅಂದರೆ ಬಿಜೆಪಿ ಅವರಿಗೆ ಎಲ್ಲಿ ನೈತಿಕತೆ ಇದೆ? ಬಿಜೆಪಿ ಅವರು ಮೊದಲು ಹಿಂದೂ ಹಿಂದೂ.. ಅಧಿಕಾರ ಬಂದ ಮೇಲೆ ನಾವು ಮುಂದು, ನೀವು ಹಿಂದೆ ಅಂತಾರೆ. ಅಡ್ವಾಣಿ ಅವರನ್ನೇ ಬರಬೇಡಿ ಅಂದರೆ ಸಿಎಂಗೆ ಆಹ್ವಾನ ಕೊಡದೇ ಇರುವ ವಿಷಯ ದೊಡ್ಡದಲ್ಲ ಎಂದು ಕಾಲೆಳೆದಿದ್ದಾರೆ.

Share This Article