ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (Hyundai Motar Inida Limited) ತನ್ನ ಬಹುನಿರೀಕ್ಷಿತ ಹ್ಯುಂಡೈ ಎಕ್ಸ್‌ಟರ್ (Hyundai Exter) ಮೈಕ್ರೋ ಎಸ್‌ಯುವಿ (Micro SUV) ಕಾರನ್ನು ಇಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಈ ಹೊಸ ಕಾರಿನ ಬೆಲೆ ರೂ. 5,99,990 ಗಳಿಂದ ಆರಂಭವಾಗುತ್ತದೆ.
ಎಕ್ಸ್‌ಟರ್ ಕಾರು ಪ್ಯಾರಾಮೆಟ್ರಿಕ್ ಫ್ರಂಟ್ ಗ್ರಿಲ್, ಹೆಚ್ ಆಕಾರದ LED ಡಿಆರ್‌ಎಲ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳು, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ದಪ್ಪವಾದ ಬಾಡಿ ಕ್ಲಾಡಿಂಗ್, ಮುಂಭಾಗ ಮತ್ತು ಹಿಂಭಾಗ ಫಾಕ್ಸ್ ಸ್ಕಿಡ್ ಪ್ಲೇಟ್‌ಗಳು ಮತ್ತು ರೂಫ್ ರೈಲ್‌ಗಳನ್ನು ಎಕ್ಸ್‌ಟರ್ ಹೊಂದಿದೆ. ಎಕ್ಸ್‌ಟರ್ ಆರು ಬಣ್ಣಗಳಲ್ಲಿ ಲಭ್ಯವಿದ್ದು, ಡ್ಯುಯಲ್-ಟೋನ್ ಮಾದರಿಗೆ ಮೂರು ಬಣ್ಣಗಳ ಆಯ್ಕೆಯನ್ನು ನೀಡಲಾಗಿದೆ.
ಎಕ್ಸ್‌ಟರ್ ಕಾರಿನಲ್ಲಿ ಸಿಂಗಲ್ ಪೇನ್ ಸನ್ ರೂಫ್, ಕಂಪನಿಯಿಂದಲೇ ಅಳವಡಿಸಲಾದ ಡ್ಯುಯಲ್ ಡ್ಯಾಶ್ ಕ್ಯಾಮ್ (ಮುಂಭಾಗ ಮತ್ತು ಹಿಂಭಾಗ) ದೊರೆಯಲಿದೆ. ಇದು ಈ ಸೆಗ್ಮೆಂಟ್ ಕಾರುಗಳಲ್ಲೇ ಮೊದಲು. ಇದನ್ನೂ ಓದಿ: ಟ್ವಿಟ್ಟರ್‌ಗೆ ಠಕ್ಕರ್ ಕೊಡಲು ಬಿಡುಗಡೆಯಾಯ್ತು ‘ಥ್ರೆಡ್ಸ್’ – 4 ಗಂಟೆಯಲ್ಲಿ 50 ಲಕ್ಷ ಸೈನ್ ಅಪ್
ಇನ್ನು ಒಳಾಂಗಣ ವಿನ್ಯಾಸದ ಬಗ್ಗೆ ಹೇಳುವುದಾದರೆ, ಡ್ಯಾಶ್‌ಬೋರ್ಡ್ ವಿನ್ಯಾಸ ಗ್ರ್ಯಾನ್ಡ್ i೧೦ ನಿಯೋಸ್ ಕಾರಿನಿಂದ ಎರವಲು ಪಡೆಯಲಾಗಿದ್ದು ಸಂಪೂರ್ಣ ಕಪ್ಪು ಬಣ್ಣವನ್ನು ಹೊಂದಿದೆ. 8 ಇಂಚ್ ಟಚ್ ಸ್ಕ್ರೀನ್, ಸ್ವಯಂಚಾಲಿತ ಹವಾನಿಯಂತ್ರಣ ವ್ಯವಸ್ಥೆ, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ವಯರ್ಲೆಸ್ ಚಾರ್ಜಿಂಗ್, ಕನೆಕ್ಟೆಡ್ ಕಾರ್ ತಂತ್ರಜ್ಞಾನವನ್ನು ಎಕ್ಸ್‌ಟರ್ ಒಳಗೊಂಡಿದೆ.
ಎಕ್ಸ್‌ಟರ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5 ಸ್ಪೀಡ್ ಮ್ಯಾನ್ಯುಯಲ್, ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹಾಗೂ ಸಿಎನ್‌ಜಿ ಮಾದರಿಗಳಲ್ಲಿ ಲಭ್ಯವಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ 81.86BHP ಪವರ್ ಹಾಗೂ 113.8 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದ್ದರೆ, ಸಿಎನ್‌ಜಿ ಮಾದರಿಯು 68 BHP ಪವರ್ ಹಾಗೂ 95.2 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇದನ್ನೂ ಓದಿ: 3 ಟ್ರಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿದ ಆಪಲ್
ಎಕ್ಸ್‌ಟರ್ ಪೆಟ್ರೋಲ್ ಮಾದರಿಯು ಮ್ಯಾನ್ಯುಯಲ್ ಟ್ರಾನ್ಸ್‌ಮಿಶನ್‌ನಲ್ಲಿ 19.4 ಕಿ.ಮೀ ಮೈಲೇಜ್, AMT ಮಾದರಿಯಲ್ಲಿ19.2 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಎಕ್ಸ್‌ಟರ್ CNG ಮಾದರಿಯು ಬರೋಬ್ಬರಿ 27.1 ಕಿ.ಮೀ ಮೈಲೇಜ್ ನೀಡುತ್ತದೆಯಂತೆ.
ಇನ್ನು ಸುರಕ್ಷತೆ ವಿಷಯಕ್ಕೆ ಬಂದರೆ ಈ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು, ESC, ಹಿಲ್ ಅಸಿಸ್ಟ್ ಕಂಟ್ರೋಲ್, ABS ಜೊತೆಗೆ EBD, ಹಿಂಭಾಗ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಕ್ಯಾಮೆರಾ, ISOFIX ಆ್ಯಂಕರೇಜ್ ಇವೆ.
ಹ್ಯುಂಡೈ ಎಕ್ಸ್‌ಟರ್ ಕಾರಿನ ಬೆಲೆ 5.99 ಲಕ್ಷದಿಂದ 10.09 ಲಕ್ಷದವರೆಗೆ ಇದೆ. ಈ ಹೊಸ ಕಾರು ಟಾಟಾ ಪಂಚ್, ಸಿಟ್ರಿಯಾನ್ ಸಿ3 ಮತ್ತು ಮಾರುತಿ ಇಗ್ನಿಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.
Web Stories