ಹೈಪರ್‌ಲೂಪ್ ಪರೀಕ್ಷಾರ್ಥ ಹಳಿ ಪೂರ್ಣ – ಭಾರತದಲ್ಲಿ ಕ್ಷಿಪ್ರ ಸಾರಿಗೆ ಕ್ರಾಂತಿಗೆ ಬಲ

Public TV
1 Min Read
Hyperloop Test Track

ನವದೆಹಲಿ: ಭವಿಷ್ಯದ ಸಾರಿಗೆ ಎಂದೇ ಬಿಂಬಿತವಾದ ಹೈಪರ್‌ಲೂಪ್ ಪ್ರಯಾಣಕ್ಕೆ ಯೋಜನೆಗಳು ನಡೆಯುತ್ತಿದ್ದು, ಈ ನಡುವೆ ಐಐಟಿ ಮದ್ರಾಸ್ ದೇಶದ ಮೊದಲ ಹೈಪರ್‌ಲೂಪ್ ಪರೀಕ್ಷಾ ಹಳಿಯನ್ನು (Hyperloop test track) ಅನಾವರಣಗೊಳಿಸಿದೆ.

422 ಮೀ. ಉದ್ದದ ಹೈಪರ್‌ಲೂಪ್ ಪರೀಕ್ಷಾ ಹಳಿಯ ಸಾಧನೆಯನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ನಲ್ಲಿ ಹಂಚಿಕೊಂಡಿದ್ದು, ಪರೀಕ್ಷಾರ್ಥ ಹಳಿ ಪೂರ್ಣಗೊಂಡಿರುವುದಾಗಿ ಘೋಷಿಸಿದ್ದಾರೆ.ಇದನ್ನೂ ಓದಿ: ಅರಣ್ಯ ಇಲಾಖೆಯ ಮುನ್ನೆಚ್ಚರಿಕೆ ಪಾಲಿಸಲು ಸಚಿವರ ಮನವಿ; ಆನೆ ದಾಳಿಯಿಂದ ಸಾವು – ಈಶ್ವರ ಖಂಡ್ರೆ ಶೋಕ

ರೈಲ್ವೇ ಸಚಿವಾಲಯದ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾದ ಈ ಅತ್ಯಾಧುನಿಕ ತಂತ್ರಜ್ಞಾನ ಎಲ್&ಟಿ ಕನ್ಸ್ಟ್ರಕ್ಷನ್, ಆರ್ಸೆಲರ್ ಮಿತ್ತಲ್ ಮತ್ತು ಹಿಂಡಾಲ್ಕೊ ಇಂಡಸ್ಟ್ರೀಸ್ ಸೇರಿದಂತೆ ಪ್ರಮುಖ ಕೈಗಾರಿಕಾ ಸಂಸ್ಥೆಗಳಿಂದ ಬೆಂಬಲವನ್ನು ಪಡೆದುಕೊಂಡಿದೆ. ಈ ಮೂಲಕ ಪರೀಕ್ಷಾ ಟ್ರ‍್ಯಾಕ್ ನಿರ್ಮಾಣ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ.

ಪ್ರತಿ ಗಂಟೆಗೆ 1,000-1,200 ಕಿ.ಮೀ ವೇಗದಲ್ಲಿ ಪ್ರಯಾಣಿಸಬಹುದಾದ ಈ ತಂತ್ರಜ್ಞಾನ ಭಾರತದಲ್ಲಿ ಪ್ರಯಾಣದ ಸಮಯ ಕಡಿಮೆ ಮಾಡಲಿದೆ. ದೆಹಲಿ-ಜೈಪುರ ನಡುವಿನ ಪ್ರಯಾಣ ಕೇವಲ 30 ನಿಮಿಷವಾಗಲಿದ್ದು, ಚೆನ್ನೈ ಮತ್ತು ಬೆಂಗಳೂರು ನಡುವೆ ಹೈಪರ್‌ಲೂಪ್ ಕಾರಿಡಾರ್ ರಚಿಸಲು ಈ ತಂತ್ರಜ್ಞಾನವನ್ನು ವಿಸ್ತರಿಸುವ ಬಗ್ಗೆ ಮಹತ್ವಾಕಾಂಕ್ಷೆಯ ಯೋಜನೆಗಳಿವೆ. ಇದು ಕೇವಲ 15 ನಿಮಿಷಗಳಲ್ಲಿ 350 ಕಿ.ಮೀ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

410 ಮೀ. ಉದ್ದದ ಈ ಟೆಸ್ಟ್ ಟ್ರ‍್ಯಾಕ್‌ನ ಮೂಲಕ, ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಲಾಗಿದೆ. ಹೈಪರ್‌ಲೂಪ್ ತಂತ್ರಜ್ಞಾನದ ಯಶಸ್ವಿ ಅನುಷ್ಠಾನವು ಭಾರತದ ಸಾರಿಗೆ ಮೂಲಸೌಕರ್ಯದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ. ಅತೀ ವೇಗದ, ಪರಿಣಾಮಕಾರಿ ಮತ್ತು ಸುಸ್ಥಿರ ಪ್ರಯಾಣ ಆಯ್ಕೆಗಳನ್ನು ನೀಡುತ್ತದೆ.ಇದನ್ನೂ ಓದಿ: ದಿಕ್ಕು ತಪ್ಪಿಸುವ ವೈದ್ಯಕೀಯ ಜಾಹೀರಾತು – ಕರ್ನಾಟಕ ಸೇರಿ ಇತರೆ ರಾಜ್ಯಗಳ ವಿರುದ್ಧ ಸುಪ್ರೀಂ ಕಿಡಿ

Share This Article