ಕೋಲಾರ: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಅಧಿಕಾರಿಗಳ ಎದುರು ತಾಲೂಕು ಪಂಚಾಯತ್ ಇಓ (EO) ವೆಂಕಟೇಶಪ್ಪ ಹೈಡ್ರಾಮಾ ನಡೆಸಿದ ಘಟನೆ ನಡೆದಿದೆ.
ಜಿಲ್ಲೆಯ ಬಂಗಾರಪೇಟೆಯಲ್ಲಿ (Bangarapete) ಲೋಕಾಯುಕ್ತ ಅಧಿಕಾರಿಗಳು ವೆಂಕಟೇಶಪ್ಪ ಅವರ ಮನೆ ಸೇರಿದಂತೆ 5 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು. ಈ ವೇಳೆ ಇಓ ವೆಂಕಟೇಶಪ್ಪ ಮನೆಯಲ್ಲಿ ಇಲ್ಲದೆ ಕರ್ತವ್ಯದ ಮೇರೆಗೆ ಬಾಗೇಪಲ್ಲಿಗೆ ಹೋಗಿದ್ದರು. ದಾಳಿ ವಿಚಾರ ತಿಳಿಯುತ್ತಿದ್ದಂತೆ ಇಓ ವೆಂಕಟೇಶಪ್ಪ ಬಂಗಾರಪೇಟೆಯ ಮನೆಗೆ ಬಂದಿದ್ದು, ಈ ವೇಳೆ ಅಧಿಕಾರಿಗಳ ಮುಂದೆ ಬಿದ್ದು ಅಯ್ಯಯ್ಯೋ, ಅಯ್ಯಯ್ಯೋ ಎಂದು ಒದ್ದಾಡಿ ಹೈಡ್ರಾಮಾ ಸೃಷ್ಟಿಸಿದ್ದಾರೆ.
Advertisement
Advertisement
ವೆಂಕಟೇಶಪ್ಪ ಈಗಾಗಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು, ದಾಳಿಗೆ ಬಂದಿದ್ದ ಅಧಿಕಾರಿಗಳೇ ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ದಾಳಿ ಮುಂದುವರಿಸಿದ್ದು ದಾಖಲೆ ಪರಿಶೀಲನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತೊಡಗಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ 3 ಕಡೆ ಹಾಗೂ ಮುಳಬಾಗಿಲು ತಾಲೂಕಿನ ತಿಪ್ಪದೊಡ್ಡಿಯಲ್ಲಿ 2 ಕಡೆ ಸೇರಿದಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ ಅವರಿಗೆ ಸೇರಿದ ಒಟ್ಟು 5 ಕಡೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಇದನ್ನೂ ಓದಿ: ನಾಲ್ವರಲ್ಲಿ ಯಾರ ಕೈ ಹಿಡಿಯಲಿದೆ ರಾಯಬಾಗ ಮೀಸಲು ಕ್ಷೇತ್ರದ ಜನತೆ
Advertisement
ಬಂಗಾರಪೇಟೆಯಲ್ಲಿ ಇಓ ಆಗಿ ಕಾರ್ಯನಿರ್ವಹಿಸಿದ್ದ ವೆಂಕಟೇಶಪ್ಪ ಕಳೆದ 2 ದಿನದ ಹಿಂದಷ್ಟೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಗೆ ವರ್ಗಾವಣೆಗೊಂಡಿದ್ದರು. ಅಲ್ಲದೆ ಗ್ರಾಪಂ ಕಾರ್ಯದರ್ಶಿಯಾಗಿ, ಪಿಡಿಓ ಆಗಿ ಕಾರ್ಯನಿರ್ವಹಿಸಿದ್ದ ವೆಂಟೇಶಪ್ಪ, ಬಂಗಾರಪೇಟೆ ತಾಲೂಕು ಕಚೇರಿಯಲ್ಲಿ ಇಓ ಆಗಿ 8 ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಿದ್ದರು.
Advertisement
ವೆಂಕಟೇಶಪ್ಪ ಬಂಗಾರಪೇಟೆಯಲ್ಲಿ 3 ನಿವೇಶನ, ಅಂಗಡಿ ಸೇರಿದಂತೆ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಲೋಕಾಯುಕ್ತ ಎಸ್ಪಿ ಉಮೇಶ್ ಅವರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಇದನ್ನೂ ಓದಿ: ರೆಡ್ಡಿ ಕುಟುಂಬಗಳ ನಡುವಿನ ಕಾಳಗಕ್ಕೆ ಸಾಕ್ಷಿಯಾಗಲಿದೆಯಾ ಬಳ್ಳಾರಿ ನಗರ ಕ್ಷೇತ್ರ?