ಹೈದರಾಬಾದ್: ಇಲ್ಲಿನ ಗಣೇಶ ದೇವಸ್ಥಾನದ 12 ಕೆಜಿಯ ಲಡ್ಡು ಪ್ರಸಾದ ದಾಖಲೆಯ 45 ಲಕ್ಷ ರೂ.ಗೆ ಹರಾಜಾಗಿದೆ.
12 ಕೆಜಿ ತೂಕದ ಲಡ್ಡು ಪ್ರಸಿದ್ಧ ಬಾಳಾಪುರ ಗಣೇಶ ಲಡ್ಡುಗಿಂತಲೂ ದುಪ್ಪಟ್ಟು ಬೆಲೆಗೆ ಹರಾಜಾಗಿದೆ. ಕಳೆದ ಒಂದು ದಿನದ ಹಿಂದೆ ಬಳ್ಳಾಪುರದ ಲಡ್ಡು 24.60 ಲಕ್ಷಕ್ಕೆ ಹರಾಜಾಗಿತ್ತು. ಇದನ್ನೂ ಓದಿ: ದಿನಾಂಕದಿಂದಲೂ ಮೆಸೇಜ್ಗಳನ್ನು ಹುಡುಕುವ ಫೀಚರ್ ತರಲಿದೆಯಂತೆ ವಾಟ್ಸಪ್
Advertisement
A laddoo for Rs 44,99,999 from #Hyderabad Alwal Maragatham #LaksmiGanapathy was bought by couple Venkat Rao & Geethapriya… It's a tradition to auction laddoo made for Ganeshji as Prasad & whoever wins is believed to get God's special blessing #CostliestLaddoo @ndtv @ndtvindia pic.twitter.com/IWAzpBJgwF
— Uma Sudhir (@umasudhir) September 10, 2022
Advertisement
ಮರಕಥಾ ಶ್ರೀ ಲಕ್ಷ್ಮೀ ಗಣಪತಿ ಉತ್ಸವದ ಲಡ್ಡು 44,99,999ರೂ.ಗೆ ಹರಾಜಾಗಿದೆ. ಇದು ಹೈದರಾಬಾದ್ ಮತ್ತು ಸಿಕಂದರಾಬಾದ್ ಅವಳಿ ನಗರಗಳಲ್ಲಿ ಮಾತ್ರವಲ್ಲದೇ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲೂ ಅತಿಹೆಚ್ಚು ಬಿಡ್ ಮಾಡಲಾಗಿದೆ.
Advertisement
ಗಣೇಶನಿಗೆ ಮಾಡಿದ ಲಡ್ಡೂಗಳನ್ನು ಪ್ರಸಾದವಾಗಿ ಹರಾಜು ಹಾಕುವುದು ಇಲ್ಲಿನ ಸಂಪ್ರದಾಯವಾಗಿದೆ. ಅಲ್ಲದೇ ಲಡ್ಡು ಪಡೆದವರು ದೇವರ ವಿಶೇಷ ಆಶೀರ್ವಾದಕ್ಕೆ ಪಾತ್ರರಾಗಿರುತ್ತಾರೆ ಎಂದು ನಂಬಲಾಗಿದೆ. ಲಡ್ಡೂ ಅವರಿಗೆ ಅದೃಷ್ಟ, ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನೂ ಕರುಣಿಸುತ್ತಾರೆ ಎಂದು ನಂಬುತ್ತಾರೆ. ಇದನ್ನೂ ಓದಿ: ಕ್ರಾಂತಿಕಾರಿ ಸಾಧು ಎಂದೇ ಹೆಸರಾಗಿದ್ದ ಸ್ವಾಮಿ ಸ್ವರೂಪಾನಂದ ಸರಸ್ವತಿ ನಿಧನ
Advertisement
ಒಂದು ದಿನದ ಹಿಂದೆಯಷ್ಟೇ ಬಾಳಾಪುರದ ಲಡ್ಡೂವನ್ನು ಸ್ಥಳೀಯ ರೈತ ವಿ.ಲಕ್ಷ್ಮರೆಡ್ಡಿ ಅವರು 24.60 ಲಕ್ಷಕ್ಕೆ ಖರೀದಿಸಿದ್ದರು. ಈ ಬೆನ್ನಲ್ಲೇ ಕಣಜಿಗುಡ ಮರಕಟದ ಶ್ರೀ ಲಕ್ಷ್ಮೀ ಗಣಪತಿ ಲಡ್ಡೂವನ್ನು ಗೀತಪ್ರಿಯ ಮತ್ತು ವೆಂಕಟರಾವ್ ದಂಪತಿ 44,99,999 ರೂ.ಗೆ ಬಿಡ್ ಮಾಡಿ ಖರೀದಿಸಿದ್ದಾರೆ.
ಹರಾಜಿನಿಂದ ಬಂದ ಹಣವನ್ನು ಬಾಲಾಪುರದ ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಸಮಿತಿಯ ಸದಸ್ಯರೂ ಆಗಿರುವ ಲಕ್ಷ್ಮರೆಡ್ಡಿ ಹೇಳಿದ್ದಾರೆ.