Connect with us

ವೋಕ್ಸ್ ವೇಗನ್ ಕಾರಿನಲ್ಲಿ ಅಡ್ಡಾದಿಡ್ಡಿ ಚಾಲನೆ- ವಾಹನ ಸವಾರನನ್ನ ನಡುರಸ್ತೆಯಲ್ಲೇ ನಿಂದಿಸಿದ ಮಹಿಳೆ

ವೋಕ್ಸ್ ವೇಗನ್ ಕಾರಿನಲ್ಲಿ ಅಡ್ಡಾದಿಡ್ಡಿ ಚಾಲನೆ- ವಾಹನ ಸವಾರನನ್ನ ನಡುರಸ್ತೆಯಲ್ಲೇ ನಿಂದಿಸಿದ ಮಹಿಳೆ

 

ಹೈದರಾಬಾದ್: ಮಹಿಳೆಯೊಬ್ಬರು ಅಡ್ಡಾದಿಡ್ಡಿ ಕಾರ್ ಚಾಲನೆ ಮಾಡಿದ್ದಲ್ಲದೆ ವ್ಯಕ್ತಿಯನ್ನ ನಡುರಸ್ತೆಯಲ್ಲೇ ನಿಂದಿಸಿರೋ ಘಟನೆ ಬೇಗಂಪೇಟ್‍ನಲ್ಲಿ ನಡೆದಿದೆ.

ಗುರುವಾರದಂದು ಮಹಿಳೆಯೊಬ್ಬರು ವೋಕ್ಸ್ ವೇಗನ್ ಕಾರನ್ನ ಅಡ್ಡಾದಿಡ್ಡಿ ಚಲಾಯಿಸಿದ್ದಾರೆ. ರಸ್ತೆಯಲ್ಲಿ ಮನಬಂದಂತೆ  ಡ್ರೈವಿಂಗ್ ಮಾಡಿದ್ದು, ಹಲವು ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮಹಿಳೆ ದ್ವಿಚಕ್ರ ವಾಹನ ಸವಾರರೊಬ್ಬರನ್ನ  ಬಾಯಿಗೆ ಬಂದಂತೆ ನಿಂದಿಸಿದ್ದಾರೆ.

ಪ್ರತ್ಯಕ್ಷದರ್ಶಿಯೊಬ್ಬರು ಈ ಘಟನೆಯ ದೃಶ್ಯವನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಕಾರನ್ನ ಮನಬಂದಂತೆ ಚಾಲನೆ ಮಾಡಿದ ಮಹಿಳೆಯನ್ನ ಬೇಗಂಪೇಟ್‍ನಲ್ಲಿ ವ್ಯಕ್ತಿಯೊಬ್ಬರು ತಡೆದು ಪ್ರಶ್ನಿಸಿದ್ದಾರೆ. ಆದ್ರೆ ಆಕೆ ಆ ವ್ಯಕ್ತಿಯ ಮೇಲೆಯೇ ಮಹಿಳೆ ತಿರುಗಿ ಬಿದ್ದಿದ್ದು ಬಾಯಿಗೆ ಬಂದಂತೆ ಬೈದಿದ್ದಾರೆ. ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ಮಹಿಳೆಯನ್ನ ಸಮಾಧಾನ ಮಾಡಲು ಯತ್ನಿಸೋದನ್ನ ವಿಡಿಯೋದಲ್ಲಿ ಕಾಣಬಹುದು.

ಅಡ್ಡಾದಿಡ್ಡಿ ಡ್ರೈವಿಂಗ್ ಮಾಡಿದ್ದಲ್ಲದೆ ಸಂಚಾರಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಎಸ್‍ಆರ್ ನಗರ ಟ್ರಾಫಿಕ್ ಇನ್ಸ್ ಪೆಕ್ಟರ್ ನೀಡಿದ ದೂರಿನನ್ವಯ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

 

Advertisement
Advertisement