ಹೈದರಾಬಾದ್: ಬರ್ತ್‍ಡೇ ಪಾರ್ಟಿ ಮುಗಿಸಿ ಪಬ್‍ನಿಂದ ಮನೆಗೆ ಹಿಂದಿರುಗಿದ 28 ವರ್ಷದ ಯುವತಿ ಮೇಲೆ ಆಕೆಯ ಸ್ನೇಹಿತರೇ ಅತ್ಯಾಚಾರ ಎಸಗಿರುವ ಘಟನೆ ತೆಲಂಗಾಣದ ಹೈದರಾಬಾದ್‍ನಲ್ಲಿ ನಡೆದಿದೆ.
ಆರೋಪಿ ಸಂತಸ್ತೆಯನ್ನು ಬರ್ತ್‍ಡೇ ಪಾರ್ಟಿಗೆಂದು ಜುಬಿಲಿ ಹಿಲ್ಸ್‍ನ ಉನ್ನತ ಮಟ್ಟದ ಪಬ್‍ಗೆ ಆಹ್ವಾನಿಸಿದ್ದನು. ಹೀಗಾಗಿ ಕೆಲಸ ಮುಗಿಸಿ ಸಂತ್ರಸ್ತೆ ಪಬ್‍ಗೆ ಮಹಿಳೆ ಹೋಗಿದ್ದರು. ಪಾರ್ಟಿ ಬಳಿಕ ರಾತ್ರಿ 11.30ರ ಸುಮಾರಿಗೆ ಡ್ರಾಪ್ ಮಾಡುವಂತೆ ಆಕೆಯ ಮನೆಗೆ ಸ್ನೇಹಿತರು ಹೋಗಿದ್ದಾರೆ. ನಂತರ ಮಂಗಳವಾರ ಬೆಳಗಿನ ಜಾವ 4.30ರವರೆಗೂ ಮೂವರು ಹರಟೆ ಹೊಡೆದು, ಬಳಿಕ ಇಬ್ಬರು ಸ್ನೇಹಿತರು ಮನೆಯಿಂದ ಹೊರಟರು.
ಸಂತಸ್ತೆ ಕೂಡ ಬೆಳಗ್ಗೆ 5 ಗಂಟೆ ಸುಮಾರಿಗೆ ಮಲಗಿಕೊಂಡಿದ್ದರು. ಬೆಳಗ್ಗೆ 6.15ರ ಸುಮಾರಿಗೆ ಸಂತಸ್ತೆ ಖಾಸಗಿ ಭಾಗದಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿದ್ದು, ಈ ವೇಳೆ ನಿದ್ದೆ ಕಣ್ಣಿನಲ್ಲಿದ್ದ ಆಕೆಯ ಮೇಲೆ ಸ್ನೇಹಿತರಿಬ್ಬರು ಬಲವಂತವಾಗಿ ಅತ್ಯಾಚಾರವೆಸಗುತ್ತಿರುವುದನ್ನು ಕಂಡು ನೆರೆ ಹೊರೆಯವನ್ನು ಸಹಾಯಕ್ಕಾಗಿ ಕೂಗಾಡಲು ಆರಂಭಿಸಿದ್ದಾರೆ. ಈ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಬುಧವಾರ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಬಾಚುಪಲ್ಲಿ ಪೊಲೀಸರು ಆಕೆಯ ಸ್ನೇಹಿತರ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.