ಹೈದರಾಬಾದ್: ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಪಲ್ಟಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ಹೊರವಲಯದ ಶಂಶಾಬಾದ್ ರಸ್ತೆಯಲ್ಲಿ ನಡೆದಿದೆ.
ಅನನ್ಯ ಗೋಯಲ್ ಮೃತ ದುರ್ದೈವಿ. ಈಕೆ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅನನ್ಯ ತನ್ನ ಇಬ್ಬರು ಸ್ನೇಹಿತರ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ ಶಾಂಶಬಾದ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.
Advertisement
Advertisement
ಮಂಗಳವಾರದಂದು ಅನನ್ಯ ಮತ್ತು ಸ್ನೇಹಿತರಾದ ನಿಖಿತಾ ಹಾಗೂ ಜತಿನ್ ಪೆದ್ದ ಅಂಬೆರ್ಪೇಟ್ನಿಂದ ಶಾದ್ನಗರಕ್ಕೆ ಪ್ರಯಾಣಿಸುತ್ತಿದ್ದರು. ಜತಿನ್ ಕಾರು ಓಡಿಸುತ್ತಿದ್ದ. ನಿಖಿತಾ ಮತ್ತು ಜತಿನ್ ಸೀಟ್ಬೆಲ್ಟ್ ಧರಿಸಿದ್ದರು. ಆದರೆ ಅನನ್ಯ ಹಿಂದಿನ ಸೀಟ್ನಲ್ಲಿ ಕುಳಿತಿದ್ದಳು. ಮುಂಜಾನೆ ಸುಮಾರು 3 ಗಂಟೆಯಲ್ಲಿ ಒಂದು ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿಡೈವರ್ ಗೆ ಡಿಕ್ಕಿ ಹೊಡೆದು, ಪಲ್ಟಿಯಾಗಿ ಇನ್ನೊಂದು ರಸ್ತೆಗೆ ಹೋಗಿ ಬಿದ್ದಿದೆ ಎಂದು ಶಾಂಶಬಾದ್ನ ಡಿಸಿಪಿ ಹೇಳಿದ್ದಾರೆ.
Advertisement
ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಅನನ್ಯ ಬದುಕುಳಿಯಲಿಲ್ಲ. ನಿಖಿತಾ ಮತ್ತು ಜತಿನ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಅನನ್ಯ ಮೂಲತಃ ಉತ್ತರ ಪ್ರದೇಶದವಳಾಗಿದ್ದು, ಈ ಘಟನೆ ಕುರಿತು ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.