– ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್ ವೈರಲ್
ಹೈದರಾಬಾದ್: ಎರಡು ರೈಲು ಮುಖಾಮುಖಿ ಡಿಕ್ಕಿಯಾಗಿ 12 ಮಂದಿ ಗಾಯಗೊಂಡ ಘಟನೆ ಸೋಮವಾರ ನಡೆದಿದ್ದು, ಇದೀಗ ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಿನ್ನೆ ಹೈದರಾಬಾದ್ ನ ಕಚೆಗುಡ ರೈಲು ನಿಲ್ದಾಣದಲ್ಲಿ ಕರ್ನೂಲ್ ಕಡೆಯಿಂದ ಬರುತ್ತಿದ್ದ ಹುಂಡ್ರಿ ಇಂಟರ್ಸಿಟಿ ಹಾಗೂ ಹೈದರಾಬಾದಿನ ಎಂಎಂಟಿಎಸ್(ಮಲ್ಟ್ ಮೊಡಲ್ ಟ್ರಾನ್ಸ್ ಪೋರ್ಟ್ ಸಿಸ್ಟಮ್) ಮಧ್ಯೆ ಅಪಘಾತ ಸಂಭವಿಸಿತ್ತು. ಈ ದೃಶ್ಯ, ನಿಲ್ದಾಣದಲ್ಲಿರುವ ಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಸಾಕಷ್ಟು ಕಮೆಂಟ್ ಗಳು ಬರುತ್ತಿದೆ.
Advertisement
Advertisement
ವಿಡಿಯೋದಲ್ಲೇನಿದೆ?
ರೈಲುಗಳೆರಡೂ ಮುಖಾಮುಖಿಯಾಗಿ ಬಂದು ಡಿಕ್ಕಿಯಾಗುತ್ತವೆ. ಡಿಕ್ಕಿಯ ರಭಸಕ್ಕೆ ಸಿಸಿಟಿವಿ ಕಡೆಯಿದ್ದ ಎಂಎಂಟಿಎಸ್ ರೈಲಿನ ಹಿಂದಿನ ಬೋಗಿ ಟ್ರ್ಯಾಕ್ ತಪ್ಪುತ್ತದೆ. ಅಲ್ಲದೆ ರೈಲುಗಳೆರಡು ಡಿಕ್ಕಿಯಾಗುತ್ತಿದ್ದಂತೆಯೇ ಪ್ರಯಾಣಿಕನೊಬ್ಬ ಹಿಂದೆ ಮುಂದೆ ನೋಡದೇ ರೈಲಿನಿಂದ ತಕ್ಷಣ ಜಿಗಿದು ಎದ್ನೋ ಬಿದ್ನೋ ಎಂದು ಓಡೋಡಿ ಬಂದು ಕಾಂಪೌಂಡ್ ಏರಿ ಕುಳಿತುಕೊಳ್ಳುತ್ತಾನೆ. ಈತನ ಬೆನ್ನ ಹಿಂದೆಯೇ ಹಲವು ಮಂದಿ ಪ್ರಯಾಣಿಕರು ಕೂಡ ಓಡೋಡಿ ಬರುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.
Advertisement
#WATCH: CCTV footage of the collision between Lingampalli-Falaknuma train & Kurnool City-Secunderabad Hundry Express at Kacheguda railway station, earlier today. 12 people were injured in the accident. pic.twitter.com/AaDz3Q8lnK
— ANI (@ANI) November 11, 2019
Advertisement
ಇಷ್ಟು ಮಾತ್ರವಲ್ಲದೆ ಕೆಲವರು ರೈಲ್ವೇ ಸಚಿವ ಪಿಯೂಷ್ ಗೋಯಲ್ ವಿರುದ್ಧ ಕಿಡಿಕಾರಿದ್ದಾರೆ. ಮತ್ತೆ ಕೆಲವರು ಘಟನೆಯ ಬಗ್ಗೆ ಮರುಕ ವ್ಯಕ್ತ ಪಡಿಸಿದ್ದಾರೆ. ಒಟ್ಟಾರೆಯಾಗಿ ಇಡೀ ಘಟನೆಯ ದೃಶ್ಯ ನೋಡಿದ ಜಾಲತಾಣಿಗರು ಮಿಶ್ರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಆಗಿದ್ದು ಏನು?
ಕರ್ನೂಲ್ ನಿಂದ್ ರೈಲು ಕಾಚಿಗುಡ ರೈಲ್ವೇ ನಿಲ್ದಾಣದಲ್ಲಿ ಬಂದು ನಿಂತಿತ್ತು. ಈ ವೇಳೆ ಲಿಂಗಂಪಳ್ಳಿಯಿಂದ ಬಂದ ಎಂಎಂಟಿಎಸ್ ರೈಲು ಚಾಲಕನಿಗೆ ಸರಿಯಾದ ಸಿಗ್ನಲ್ ಸಿಗದ ಪರಿಣಾಮ ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಒಂದು ರೈಲಿನ ಚಾಲಕ ಸೇರಿ ಸುಮಾರು 12 ಮಂದಿಗೆ ಗಾಯಗಳಾಗಿತ್ತು. ಗಾಯಗೊಂಡವರನ್ನು ಕೂಡಲೇ ಹತ್ತಿರದ ಒಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದರಲ್ಲಿ ಇಬ್ಬರು ಡಿಸ್ಚಾರ್ಜ್ ಕೂಡ ಆಗಿದ್ದರು.
Hyderabad: Two trains have collided at Kacheguda Railway Station. Rescue operations underway. #Telangana https://t.co/mQ87UDdGa4 pic.twitter.com/Vmkw2iUTsq
— ANI (@ANI) November 11, 2019