ಹೈದರಾಬಾದ್: ದಿನನಿತ್ಯ ರಸ್ತೆಯಲ್ಲಿ ನಿಂತು ಬಳಲುವ ಟ್ರಾಫಿಕ್ ಪೊಲೀಸರು ಆಗಾಗ ಮಾನವೀಯತೆ ಮೂಲಕ ಸುದ್ದಿ ಆಗುತ್ತಲೇ ಇರುತ್ತಾರೆ.
ಭಾನುವಾರ ಹೈದರಾಬಾದ್ ಟ್ರಾಫಿಕ್ ಪೊಲೀಸ್ ಒಬ್ಬರು ಬೀದಿ ಬದಿಯಲ್ಲಿದ್ದ ಅನಾಥ ವೃದ್ಧೆಗೆ ಕೈಯಾರೆ ಪೂರಿ ತಿನ್ನಿಸಿದ್ದಾರೆ. ಸದ್ಯಕ್ಕೆ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ರಾಫಿಕ್ ಪೊಲೀಸ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Advertisement
ಕುಕಟ್ಪಳ್ಳಿಯ ಟ್ರಾಫಿಕ್ ಪೇದೆ ಬಿ.ಗೋಪಾಲ್, ಅನಾಥ ವೃದ್ಧೆಗೆ ಊಟ ಮಾಡಿಸಿದವರು. ಕುಕಟ್ಪಳ್ಳಿಯ ಜೆಎನ್ ಟಿಯು ಬಳಿ ಸೇವೆ ಸಲ್ಲಿಸುತ್ತಿರುವ ವೇಳೆ ಪಕ್ಕದ ರಸ್ತೆ ಬಳಿ ವೃದ್ಧೆ ಕುಳಿತುಕೊಂಡಿರುವುದು ಕಂಡಿದೆ. ಕೂಡಲೇ ಬಿ.ಗೋಪಾಲ್ ಅಲ್ಲಿಗೆ ಹೋಗಿ ವೃದ್ಧೆಯನ್ನು ವಿಚಾರಿಸಿದ್ದಾರೆ. ನಂತರ ವೃದ್ಧೆ ಹಸಿವಿನಿಂದ ಬಳಲುತ್ತಿರುವುದು ಗೊತ್ತಾಗಿದೆ.
Advertisement
Advertisement
ಗೋಪಾಲ್ ತಕ್ಷಣ ಕೂಡಲೇ ಹೋಟೆಲ್ ನಿಂದ ಪೂರಿ ಪಾರ್ಸಲ್ ತಂದು ತಮ್ಮ ಕೈಯಾರೆ ತಿನ್ನಿಸಿದ್ದಾರೆ. ಅನಾಥ ವೃದ್ಧೆಗೆ ಪೂರಿ ತಿನ್ನಿಸುತ್ತಿರುವ ಫೋಟೋವನ್ನು ಸಾರ್ವಜನಿಕರು ತೆಗೆದು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ.
Advertisement
ಸದ್ಯಕ್ಕೆ ಆ ಫೋಟೋ ವೈರಲ್ ಆಗಿದ್ದು, ಟ್ರಾಫಿಕ್ ಪೇದೆ ಗೋಪಾಲ್ ಕಾರ್ಯಕ್ಕೆ ಪ್ರಶಂಸೆಗಳ ಸುರಿಮಳೆ ಹರಿದು ಬರುತ್ತಿವೆ.