ಹೈದರಾಬಾದ್: ಟ್ರಾಫಿಕ್ ಪೊಲೀಸ್ ಒಬ್ಬರು ಕಾಲಿಗೆ ಪ್ಲಾಸ್ಟರ್ ಸುತ್ತಿಕೊಂಡಿದ್ದ ವ್ಯಕ್ತಿಯನ್ನು ಜಲಾವೃತಗೊಂಡ ರಸ್ತೆ ದಾಟಿಸಿ ಮಾನವೀಯತೆ ಮೆರೆದಿದ್ದಾರೆ.
ಹೈದರಾಬಾದ್‍ನಲ್ಲಿ ಕಳೆದ ಶುಕ್ರವಾರ ಭಾರೀ ಮಳೆಯಾಗಿದೆ. ಪರಿಣಾಮ ನಗರದ ಎಲ್.ಬಿ ನಗರದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ರಸ್ತೆ ಮಲೆ ಮೊನಕಾಲುದ್ದ ನೀರು ನಿಂತಿದೆ. ಹೀಗಾಗಿ ವಾಹನ ಸಂಚಾರ ಸವಾರರು ಪರದಾಡುವಂತಾಗಿದೆ. ಇತ್ತ ಪಾದಚಾರಿಗಳ ಸಮಸ್ಯೆ ಹೇಳದಂತಾಗಿದೆ.
Advertisement
#WATCH Hyderabad: A traffic police inspector, A Nagamallu carried a man who had a plastered foot, on his back across a waterlogged road in LB Nagar, yesterday. #Telangana pic.twitter.com/xYDw5sCPi4
— ANI (@ANI) August 31, 2019
Advertisement
ಎಲ್.ಬಿ.ನಗರದ ರಸ್ತೆಯ ಮೇಲೆ ನಿಂತಿದ್ದ ನೀರನ್ನು ಕಂಡು ಕಾಲಿಗೆ ಪ್ಲಾಸ್ಟರ್ ಸುತ್ತಿಕೊಂಡಿದ್ದ ವ್ಯಕ್ತಿ ಕಂಗಾಲಾಗಿದ್ದರು. ಈ ವೇಳೆ ಅವರ ನೆರವಿಗೆ ನಿಂತ ಟ್ರಾಫಿಕ್ ಪೊಲೀಸ್ ಎ ನಾಗಮಲ್ಲು, ತಮ್ಮ ಹೆಗಲ ಮೇಲೆ ವ್ಯಕ್ತಿಯನ್ನು ಹೊತ್ತು ರಸ್ತೆ ದಾಟಿಸಿದ್ದಾರೆ.
Advertisement
ಸ್ಥಳದಲ್ಲಿ ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಮಾನವೀಯತೆ ಮೆರೆದ ಟ್ರಾಫಿಕ್ ಪೊಲೀಸ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.