ಹೈದರಾಬಾದ್: ತೆಲಂಗಾಣದ (Telangana) ರಾಜಧಾನಿ ಹೈದ್ರಬಾದ್ (Hyderabad) ರಸ್ತೆಗಳಲ್ಲಿ ಶೀಘ್ರದಲ್ಲಿಯೇ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ (Electric Double Decker) ಬಸ್‍ಗಳು ಸಂಚರಿಸಲಿದೆ.
ಹೈದರಾಬಾದ್‍ಗೆ ಡಬಲ್ ಡೆಕ್ಕರ್ ಬಸ್‍ಗಳನ್ನು ತರಬೇಕೆಂದು ಬಹು ದಿನಗಳಿಂದ ಬೇಡಿಕೆ ಇತ್ತು. ಈ ಬಗ್ಗೆ ನಗರಾಭಿವೃದ್ಧಿ ಸಚಿವ (Urban Development Minister) ಕೆ.ಟಿ. ರಾಮರಾವ್ (KTR) (ಕೆಟಿಆರ್)ಗೆ ಡಬಲ್ ಡೆಕ್ಕರ್ ಬಸ್‍ಗಳನ್ನು ಮರಳಿ ತರುವಂತೆ ನೆಟ್ಟಿಗರು ಮನವಿ ಮಾಡುತ್ತಿದ್ದಾರೆ. ಕೆಟಿಆರ್ ಅವರು ಕೂಡ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‍ಗಳನ್ನು ವಾಪಸ್ ತರುವುದಾಗಿ ಹೇಳಿದ್ದು, ಶೀಘ್ರದಲ್ಲೇ ಭರವಸೆ ಈಡೇರಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಚಿಕ್ಕಮಗಳೂರು, ಉಡುಪಿಯಲ್ಲಿ ಡೇಂಜರ್ ಸೇತುವೆ – ನಿರ್ವಹಣೆ ಇಲ್ಲದೇ ಬೀಳುವ ಸ್ಥಿತಿ
Advertisement
Advertisement
ನಗರದ ಮೂರು ವಿವಿಧ ಮಾರ್ಗಗಳಲ್ಲಿ ಹತ್ತು ಎಲೆಕ್ಟ್ರಾನಿಕ್ ಡಬಲ್ ಡೆಕ್ಕರ್ ಬಸ್‍ಗಳು ಓಡಾಡಲಿದ್ದು, ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್‍ಆರ್‌ಟಿಸಿ) ಇನ್ನೊಂದು ವಾರದಲ್ಲಿ ಇದಕ್ಕಾಗಿ ಟೆಂಡರ್ ಆಹ್ವಾನಿಸಲಿದೆ. ಇದನ್ನೂ ಓದಿ: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು – ಬಸ್ ಚಾಲಕನಿಗೆ ಸಾರ್ವಜನಿಕರಿಂದ ಥಳಿತ
Advertisement
Advertisement
ಇ-ಡಬಲ್ ಡೆಕ್ಕರ್ ಬಸ್‍ಗಳನ್ನು ಯಾವ ಮಾರ್ಗದಲ್ಲಿ ಓಡಿಸಬೇಕು ಎಂಬುದರ ಕುರಿತು ಆರ್‌ಟಿಸಿ ಅಧಿಕಾರಿಗಳು ಈಗಾಗಲೇ ಅಧ್ಯಯನ ನಡೆಸಿದ್ದಾರೆ. ಮೇಲ್ಸೇತುವೆಗಳಿಲ್ಲದ ಮಾರ್ಗಗಳಲ್ಲಿ ಬಸ್‍ಗಳು ಓಡುವ ಸಾಧ್ಯತೆಯಿದೆ. ಸದ್ಯಕ್ಕೆ ಮೂರು ಮಾರ್ಗಗಳಲ್ಲಿ ಓಡಾಡಲು ನಿರ್ಧಾರಗೊಳಿಸಲಾಗಿದೆ.