ಹೈದರಾಬಾದ್: ತೆಲಂಗಾಣದ ರಾಜಧಾನಿಯಲ್ಲಿರುವ ಪ್ರಸಿದ್ಧ ನಿಜಾಮ್ ಮ್ಯೂಸಿಯಂ ಸಂಗ್ರಹಾಲಯದಲ್ಲಿ ಸಿನಿಮೀಯಾ ಶೈಲಿಯಲ್ಲಿ ಕಳ್ಳರು 2 ಕೆಜಿ ಚಿನ್ನದ ಟಿಫಿನ್ ಬಾಕ್ಸ್ ಸೇರಿದಂತೆ ಹಲವು ವಸ್ತುಗಳನ್ನು ಎಗರಿಸಿದ್ದಾರೆ.
ದೇಶದಲ್ಲೇ ಪ್ರಸಿದ್ಧ ಹಾಗೂ ಅತಿ ಭದ್ರತೆ ಹೊಂದಿರುವ ನಿಜಾಮಾ ಮ್ಯೂಸಿಯಂನಲ್ಲಿ ಎರಡು ದಶಕಗಳಿಗೂ ಹಳೆಯದಾದ 2 ಕೆಜಿ ತೂಕದ ಚಿನ್ನದ ಟಿಫಿನ್ ಬಾಕ್ಸ್, ಟೀ ಕಪ್, ಸಾಸರ್ ಹಾಗೂ ಸ್ಪೂನ್‍ಗಳನ್ನು ಕಳ್ಳರು ಸಿನಿಮಾ ಶೈಲಿಯಲ್ಲಿ ಎಗರಸಿ ಪರಾರಿಯಾಗಿದ್ದಾರೆ.
Advertisement
Advertisement
ಕಳ್ಳತನವಾಗಿದ್ದು ಹೇಗೆ?
ದರೋಡೆಕೋರರು ಭಾನುವಾರ ತಡರಾತ್ರಿ ಮೊದಲನೇ ಮಹಡಿಯಲ್ಲಿರುವ ಕಬ್ಬಿಣದ ಸರಳು ಮತ್ತು ವೆಂಟಿಲೇಟರ್ ಗಳನ್ನು ಮುರಿದು ಹಗ್ಗದ ಮೂಲಕ ಟಿಫಿನ್ ಬಾಕ್ಸ್ ಇರುವ ಕೊಠಡಿಗೆ ಬಂದಿದ್ದಾರೆ. ಮಾಣಿಕ್ಯ, ವಜ್ರ ಮತ್ತು ಪಚ್ಚೆಗಳಿಂದ ಅಲಂಕರಿಸಲಾಗಿದ್ದ ಟಿಫಿನ್ ಬಾಕ್ಸ್ ಸೇರಿದಂತೆ ಇತರೆ ಚಿನ್ನದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಸೋಮವಾರ ಎಂದಿನಂತೆ ಕೊಠಡಿಯನ್ನು ಪರೀಕ್ಷಿಸಿದ ಸೆಕ್ಯೂರಿಟಿ ಸಿಬ್ಬಂದಿಗಳು ಕಳ್ಳತನವಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Advertisement
ಕೂಡಲೇ ಸ್ಥಳಕ್ಕೆ ಮೀರ್ ಚೌಕ್ ಪೊಲೀಸ್ ಠಾಣಾ ಅಧಿಕಾರಿಗಳು ಆಗಮಿಸಿದ್ದಾರೆ. ಈ ವೇಳೆ ಸ್ಥಳವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿ, ಸಿಸಿಟಿವಿಯ ದೃಶ್ಯಾವಳಿಗಳನ್ನು ಪರೀಕ್ಷಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಸಂಗ್ರಾಹಲಯದ ಸಿಬ್ಬಂದಿಗಳೇ ಕಳ್ಳತನದಲ್ಲಿ ಭಾಗಿಯಾಗಿರುವುದರ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
Advertisement
Hyderabad: A tiffin box, saucer, cup & spoon made of gold were stolen from Nizam Museum (HEH Nizam's Museum) in Mir Chowk Police Station limits yesterday. A case has been registered, investigation is underway and search for the culprits is underway. pic.twitter.com/wz0ivkhzNL
— ANI (@ANI) September 4, 2018
ಹೈದರಾಬಾದಿನ ಕೊನೆಯ ನಿಜಾಮ 7 ನೇ ಮೀರ್ ಒಸ್ಮಾನ್ ಅಲಿ ಖಾನ್ ಅಸಫ್ ಜಾ 1936 ರಲ್ಲಿ ತನ್ನ ಬೆಳ್ಳಿ ಮಹೋತ್ಸವದ ಜ್ಞಾಪಕಾರ್ಥವಾಗಿ ಈ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿದ್ದನು. ಈ ಮ್ಯೂಸಿಯಂನಲ್ಲಿ ಹೈದರಾಬಾದಿನ ನಿಜಾಮರಿಗೆ ಸೇರಿದ ಪ್ರಮುಖ ಕಾಣಿಕೆಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=dN3WLhctcCE