ಹೈದಾರಬಾದ್: ಅಮೆರಿಕದ ಮಿಚಿಗನ್‍ನಲ್ಲಿ ನಡೆದ ಕಾರು ಅಪಘಾತದಲ್ಲಿ ಹೈದರಾಬಾದ್ ಮೂಲದ 25 ವರ್ಷದ ಟೆಕ್ಕಿ ಮೃತಪಟ್ಟಿದ್ದಾಳೆ.
ಏಲ್ಲಾ ಚರಿತಾ ರೆಡ್ಡಿ ಮೃತ ಟೆಕ್ಕಿ. ಮೂಲತಃ ಸಿಕಂದರಾಬಾದ್ ನಿವಾಸಿಯಾಗಿದ್ದು, ಅಮೆರಿಕದಲ್ಲಿ ಸಾಫ್ಟ್ ವೇರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಕ್ರೋಕರಿ ಟೌನ್‍ಶಿಪ್‍ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
Advertisement
ನಾಲ್ವರು ಪ್ರಯಾಣಿಸುತ್ತಿದ್ದ ಟೊಯೋಟಾ ಕಾರು ಅಪಘಾತಕ್ಕೀಡಾಗಿದೆ. ಈ ವೇಳೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಚರಿತಾ ರೆಡ್ಡಿಗೆ ಅಪಘಾತದಲ್ಲಿ ಗಂಭೀರವಾಗಿ ಗಾಯಗಳಾಗಿತ್ತು. ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚರಿತಾಗೆ ಬ್ರೇನ್‍ಡೆಡ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement
Advertisement
ಎರಡು ವರ್ಷಗಳ ಹಿಂದೆಯೇ ಚರಿತಾ ರೆಡ್ಡಿ ಅಗತ್ಯವಿರುವವರಿಗೆ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ಸೂಚಿಸಿ, ದಾಖಲಾತಿಗೆ ಸಹಿ ಕೂಡ ಮಾಡಿದ್ದಳು. ಹೀಗಾಗಿ ಅವಳ ಆಶಯದಂತೆ ಕುಟುಂಬವು ಅಮೆರಿಕದಲ್ಲೇ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು. ಅದರಂತೆಯೇ ವೈದ್ಯರು ಆಕೆಯ ಹೃದಯ ಮತ್ತು ಇತರ ಅಂಗಗಳನ್ನು ತೆಗೆದುಕೊಂಡಿದ್ದಾರೆ ಎಂದು ಚರಿತಾ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.
Advertisement
ಅಮೆರಿಕದಲ್ಲಿ ಸಾಫ್ಟ್ ವೇರ್ ಡೆವಲಪರ್ ಆಗಿ ಚರಿತಾ ರೆಡ್ಡಿ ಕೆಲಸ ಮಾಡುತ್ತಿದ್ದಳು. ಈಕೆ ಹೈದರಾಬಾದ್‍ನಲ್ಲಿ ಪದವಿ ಮುಗಿಸಿ ನಂತರ ಸ್ನಾತಕೋತ್ತರ ಪದವಿ ಮುಗಿಸಲು ಯುಎಸ್‍ಗೆ ತೆರಳಿದ್ದಳು. ಚರಿತಾ ಕೊನೆಯ ಬಾರಿ 2016ರಲ್ಲಿ ಹೈದರಾಬಾದ್‍ನಲ್ಲಿರುವ ತಮ್ಮ ಕುಟುಂಬಕ್ಕೆ ಭೇಟಿ ನೀಡಿದ್ದಳು.
ಅಪಘಾತದಲ್ಲಿ ಗಾಯಗೊಂಡ ಇತರ ಮೂವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಆಕೆಯ ಅಂತ್ಯಕ್ರಿಯೆ ನಡೆಸಲು ಮೃತದೇಹವನ್ನು ಹೈದರಾಬಾದ್‍ಗೆ ತರುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಹೀಗಾಗಿ ಅಮೆರಿಕದಲ್ಲಿರುವ ಚರಿತಾ ಸ್ನೇಹಿತರು ದೇಹವನ್ನು ಹೈದರಾಬಾದ್ಗೆ ರವಾನಿಸುವ ಸಲುವಾಗಿ ಹಣ ಸಂಗ್ರಹಿಸಲು ಆನ್‍ಲೈನ್ ಮೂಲಕ ಅಭಿಯಾನ ಪ್ರಾರಂಭಿಸಿದ್ದಾರೆ.