ಹೈದರಾಬಾದ್: ಹೆಂಡತಿಯ ಜೊತೆಗೆ ನಡೆಸಿದ ಲೈಂಗಿಕ ಕ್ರಿಯೆಯನ್ನು ಆಕೆಗೆ ಗೊತ್ತಿಲ್ಲದಂತೆ ಪಾರ್ನ್ ಸೈಟ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿದ್ದ 33 ವರ್ಷದ ಮಾಜಿ ಸಾಫ್ಟ್ ವೇರ್ ಉದ್ಯೋಗಿಯೊಬ್ಬನನ್ನು ಹೈದರಾಬಾದ್‍ನಲ್ಲಿ ಬಂಧಿಸಲಾಗಿದೆ.
ನಗರದ ಜೀಡಿಮೆಟ್ಲಾದ ನಿವಾಸಿಯಾಗಿರೋ ಬಂಧಿತ ಆರೋಪಿ ತನ್ನ ಬೆಡ್‍ರೂಮಿನಲ್ಲಿಟ್ಟಿದ್ದ ಲ್ಯಾಪ್‍ಟಾಪ್‍ನ ವೆಬ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ವೀಡಿಯೋಗಳನ್ನು ಹಣಕ್ಕಾಗಿ ಪಾರ್ನ್ ಸೈಟ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿದ್ದ ಎಂದು ಆರೋಪಿಸಲಾಗಿದೆ.
Advertisement
ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಪತ್ನಿಗೆ ಕಳೆದ ನವೆಂಬರ್‍ನಲ್ಲಿ ಕೇರಳದಲ್ಲಿರುವ ಸ್ನೇಹಿತರೊಬ್ಬರು ಹೇಳಿದಾಗ ತನ್ನ ಖಾಸಗಿ ವಿಡಿಯೋಗಳು ಪಾರ್ನ್ ಸೈಟ್‍ನಲ್ಲಿದ್ದ ಬಗ್ಗೆ ಗೊತ್ತಾಗಿದೆ ಎಂದು ಸೈಬರ್ ಕ್ರೈಂ ಎಸಿಪಿ ಎಸ್. ಜಯರಾಮ್ ತಿಳಿಸಿದ್ದಾರೆ.
Advertisement
ನಂತರ ಮಹಿಳೆ ನೀಡಿದ ದೂರಿನನ್ವಯ ಪೊಲೀಸರು ಐಪಿಸಿ ಸೆಕ್ಷನ್ 509 ಹಾಗೂ ಐಟಿ ಕಾಯ್ದೆಯ ಸೂಕ್ತ ಸೆಕ್ಷನ್‍ಗಳಡಿ ಕೇಸ್ ದಾಖಲಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದಾಗ ಈ ಕೃತ್ಯದ ಹಿಂದಿರುವುದು ಮಹಿಳೆಯ ಗಂಡ ಎನ್ನುವುದು ಗೊತ್ತಾಗಿದೆ. ಏಪ್ರಿಲ್ 7 ರಂದು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Advertisement
ಪೊಲೀಸರು ವಿಡಿಯೋ ಲಿಂಕ್‍ನ ಐಪಿ ವಿಳಾಸವನ್ನ ಕೇರಳದ ತಿರುಚಿಯಲ್ಲಿ ಟ್ರೇಸ್ ಮಾಡಿದ್ದರು. ನಂತರ ಆ ಐಪಿ ವಿಳಾಸದ ಮಾಲೀಕನಿಗೆ ನೋಟಿಸ್ ನೀಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮಾಲೀಕ, ಬೇರೊಂದು ವೆಬ್‍ಸೈಟ್ ನಲ್ಲಿ ವಿಡಿಯೋ ಡೌನ್‍ಲೋಡ್ ಮಾಡಿಕೊಂಡು ಅದನ್ನೇ ಪ್ರಸಾರ ಮಾಡಿದ್ದಾಗಿ ಹೇಳಿದ್ದನೆಂದು ಜಯರಾಮ್ ತಿಳಿಸಿದ್ದಾರೆ.
Advertisement
ಪೊಲೀಸರು ಹೇಳುವ ಪ್ರಕಾರ ಆರೋಪಿ ತನ್ನ ಹೆಂಡತಿಗೆ ತಿಳಿಯದಂತೆ ಲ್ಯಾಪ್‍ಟಾಪನ್ನು ಬೆಡ್‍ರೂಮಿನಲ್ಲಿರಿಸಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ಎನ್ನಲಾಗಿದೆ. ಈತ ಲ್ಯಾಪ್‍ಟಾಪ್‍ನಲ್ಲಿ ಸಿನಿಮಾ ಪ್ಲೇ ಮಾಡುತ್ತಿದ್ದರಿಂದ ಹೆಂಡತಿಗೆ ಇದರ ಬಗ್ಗೆ ಗೊತ್ತಾಗುತ್ತಿರಲಿಲ್ಲ. ಈತ ಪಾರ್ನ್ ವೆಬ್‍ಸೈಟ್‍ವೊಂದರ ಸದಸ್ಯನಾಗಿದ್ದು, ವಿಡಿಯೋ ಪೋಸ್ಟ್ ಮಾಡುವುದಕ್ಕೆ ಈತನಿಗೆ ಹಣ ಸಿಗುತ್ತಿತ್ತು. ಈ ಸೈಟ್‍ನಲ್ಲಿ ಸುಮಾರು 3 ಸಾವಿರ ಸದಸ್ಯರಿದ್ದಾರೆಂದು ವರದಿಯಾಗಿದೆ. ಅಲ್ಲದೆ ಆರೋಪಿ ಲೈಂಗಿಕ ಕ್ರಿಯೆಗಾಗಿ ಮಹಿಳೆಯರಿಗೆ ಪುರಷರನ್ನ ಸಪ್ಲೈ ಮಾಡೋ 3 ವೆಬ್‍ಸೈಟ್ ಗಳಲ್ಲಿ ನೊಂದಾಯಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಈತನ ಮೊಬೈಲ್ ಹಾಗೂ ಲ್ಯಾಪ್‍ಟಾಪ್ ಪರಿಶೀಲಿಸಿದ್ದು, ಇದಕ್ಕೆ ಪೂರಕವಾದ ಸಾಕ್ಷಿಗಳು ಸಿಕ್ಕಿವೆ. ಹಾಗೂ ಬ್ಯಾಂಕ್ ಅಕೌಂಟ್ ಕೂಡ ಪರಿಶೀಲಿಸಲಾಗಿದ್ದು ತಾಂತ್ರಿಕ ಸಾಕ್ಷಿಗಳು ಸಿಕ್ಕಿವೆ ಎಂದು ಎಸಿಪಿ ಜಯರಾಮ್ ತಿಳಿಸಿದ್ದಾರೆ.