ಹೈದರಾಬಾದ್: ಇಲ್ಲಿನ ಟರ್ನಾಕಾದಲ್ಲಿರೋ ಸೇಕ್ರೆಡ್ ಹಾರ್ಟ್ ಶಾಲೆಯ 5 ವರ್ಷದ ಬಾಲಕನಿಗೆ ಚಡಿ ಏಟು ಕೊಟ್ಟ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯುಕೆಜಿ ಓದುತ್ತಿದ್ದ ಮೊಹಮ್ಮದ್ ಖಾಜಾ ಲತೀಫ್ ಟೀಚರ್ ಕೈಯಿಂದ ಹೊಡೆತ ತಿಂದ ಬಾಲಕ. ಶಿಕ್ಷಕಿಯನ್ನು ಕುಮುಧಿನಿ ಎಂದು ಗುರುತಿಸಲಾಗಿದ್ದು, ಸದ್ಯ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಶಾಲೆಯಲ್ಲಿ ಟೀಚರ್ ಕೈಯಿಂದ ಹೊಡೆತ ತಿಂದ ಪರಿಣಾಮ ಬಾಲಕನ ಬೆನ್ನಲ್ಲಿ ಗಾಯಗಳಾಗಿದ್ದು, ಮನೆಗೆ ಬಂದು ತನ್ನ ಪೋಷಕರ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾನೆ. ಮಗನ ದೂರನ್ನು ಆಲಿಸಿದ ಪೋಷಕರು ಶಿಕ್ಷಕಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಇನ್ಸ್ ಪೆಕ್ಟರ್ ವಿ.ಅಶೋಕ್ ರೆಡ್ಡಿ ತಿಳಿಸಿದ್ದಾರೆ.
Advertisement
Advertisement
ಬೆಳಗ್ಗೆ ತರಗತಿ ನಡೆಯುತ್ತಿದ್ದ ವೇಳೆ ಬಾಲಕ ಲತೀಫ್ ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಸಹಪಾಠಿ ಜೊತೆ ಗಲಾಟೆ ಮಾಡಿದ್ದಾನೆ. ಅಲ್ಲದೆ ಆತನಿಗೆ ಕಚ್ಚಿದ್ದಾನೆ. ಹೀಗಾಗಿ ಶಿಕ್ಷಕಿ ಕುಮುಧಿನಿ ಕೋಲಿನಿಂದ ಬಾಲಕನಿಗೆ ಹೊಡೆದಿದ್ದಾರೆ ಅಂತ ಪೊಲೀಸರು ಹೇಳಿದ್ದಾರೆ.
Advertisement
ಆದ್ರೆ ಬಾಲಕನ ವಿರುದ್ಧ ಶಿಕ್ಷಕಿಯ ಕ್ರೂರ ವರ್ತನೆಗೆ ಶಿಕ್ಷೆಯಾಗಬೇಕು ಎಂದು ಮಕ್ಕಳ ಹಕ್ಕುಗಳಿಗಾಗಿ ಕಾರ್ಯ ನಿರ್ವಹಿಸುತ್ತಿರೋ ಎನ್ ಜಿಒವೊಂದು ಪಟ್ಟು ಹಿಡಿದಿದೆ.
ಸದ್ಯ ಬಾಲಕನ ತಾಯಿ ನೀಡಿದ ದೂರಿನನ್ವಯ ಐಪಿಸಿಯ ಸೂಕ್ತ ಸೆಕ್ಷನ್‍ಗಳಡಿ ಹಾಗೂ ಬಾಲ ನ್ಯಾಯ ಕಾಯ್ದೆಯಡಿ ಶಿಕ್ಷಕಿ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
#Hyderabad: Five-year-old boy allegedly caned in school by his teacher. Case registered, accused arrested pic.twitter.com/quFOxANQCh
— ANI (@ANI) November 17, 2017