ಹೈದರಾಬಾದ್: 10ನೇ ತರಗತಿ ವಿದ್ಯಾರ್ಥಿನಿ ಬೇರೆ ಬಾಲಕರ ಜೊತೆಗೆ ಮಾತನಾಡುತ್ತಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ತೆಲಂಗಾಣ ಸಂಗ ರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಮಹಾರಾಷ್ಟ್ರದ ನ್ಯಾಂಡೆಡ್ ನಗರದ ಎಂಜಿನಿಯರಿಂಗ್ ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿ ಅರವಿಂದ್ (20) ಕೊಲೆ ಮಾಡಿದ ಆರೋಪಿ. ಕೆಲವು ದಿನಗಳಿಂದ ಆಕೆಯನ್ನು ಅರವಿಂದ್ ಚುಡಾಯಿಸುತ್ತಿದ್ದ ಎಂದು ವರದಿಯಾಗಿದೆ.
Advertisement
ಗುರುವಾರ ಚಾಕು ಹಿಡಿದು ಅರವಿಂದ್ ವಿದ್ಯಾರ್ಥಿನಿ ಮನೆಗೆ ಬಂದಿದ್ದನು. ಕೆಲ ಹೊತ್ತು ಆಕೆಯೊಂದಿಗೆ ಮಾತಿನ ಚಕಮಕಿ ನಡೆಸಿ, ಬಳಿಕ ಆಕೆಯ ಕತ್ತಿಗೆ ಚಾಕು ಹಾಕಿದ್ದಾನೆ. ವಿದ್ಯಾರ್ಥಿನಿ ಕಿರುಚಿದ್ದ ಧ್ವನಿ ಕೇಳಿದ ಸ್ಥಳೀಯರು ಬರುತ್ತಿದ್ದಂತೆ, ಆಕೆಯು ರಕ್ತಸ್ರಾವದಿಂದ ಕೆಳಗೆ ಬಿದ್ದಿದ್ದಾಳೆ. ತಕ್ಷಣವೇ ಕುಕ್ಕಟಪಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
Advertisement
ಆರೋಪಿ ಅರವಿಂದ್‍ನನ್ನು ಸ್ಥಳೀಯರು ಥಳಿಸಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿದ್ಯಾರ್ಥಿನಿ ಬೇರೆ ಬಾಲಕರ ಜೊತೆ ಮಾತನಾಡುತ್ತಿದ್ದಳು, ಇದರಿಂದ ಕೊಪಗೊಂಡು ನಾನು ಕೊಲೆ ಮಾಡಿದ್ದೇನೆ ಎಂದು ತನಿಖೆಯ ವೇಳೆ ಅರವಿಂದ್ ಒಪ್ಪಿಕೊಂಡಿದ್ದಾನೆ ಎಂದು ತನಿಖಾಧಿಕಾರಿ ಸತೀಶ್ ರೆಡ್ಡಿ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv