ಯಾದಗಿರಿ: ಅತ್ಯಾಚಾರಿಗಳಿಗೆ ಹೈದರಾಬಾದ್ ನಲ್ಲಿ ಸಜ್ಜನ ಸರ್ ನೀಡಿದಂತಹ ಮದ್ದು ನೀಡಬೇಕು ಎಂದು ಪರೋಕ್ಷವಾಗಿ ಅತ್ಯಾಚಾರಿಗಳನ್ನ ಎನ್ ಕೌಂಟರ್ ಮಾಡಬೇಕು ಎಂದು ಶಹಾಪೂರ ಗ್ಯಾಂಗ್ ರೇಪ್ ಪ್ರಕರಣಕ್ಕೆ ಶಾಸಕ ರಾಜೂಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀಡಿಯೋ ನೋಡಿ ನಾವು ಮನುಷ್ಯತ್ವದಲ್ಲಿ ಇದ್ದಿವೋ, ರಾಕ್ಷಸರು ಅಂತ ಇದ್ದಿವೋ ಅಂತ ಗೊತ್ತಾಗುತ್ತಿಲ್ಲ. ಮೃಗಗಳು ಸಹ ಈ ರೀತಿ ನಡೆದುಕೊಳ್ಳಲ್ಲ, ಎಲ್ಲಾ ಅಧಿಕಾರಿಗಳು ಹಾಗೂ ಗೃಹ ಸಚಿವರ ಜೊತೆ ಮಾತನಾಡಿದ್ದೇನೆ ಎಂದರು.
ಹೈದರಾಬಾದ್ ನಲ್ಲಿ ಸಜ್ಜನ್ ಸರ್ ನೀಡಿದ ಔಷಧಿಯೊಂದೇ ಮದ್ದು. ನಾನೊಬ್ಬ ಶಾಸಕನಾಗಿ, ಮಾಜಿ ಸಚಿವನಾಗಿ ಈ ಮಾತನ್ನ ಹೇಳಬಾರದು. ಆದರೆ ಅನಿವಾರ್ಯವಾಗಿ ಹೇಳಬೇಕಾಗುತ್ತೆ. ಯಾಕಂದ್ರೆ ದುಷ್ಟರಿಗೆ ಭಯ ಇಲ್ಲದಂತಾಗತ್ತೆ. ಹೆಣ್ಣು ಮಕ್ಕಳಂದ್ರೆ ತಾವು ಮಾಡಿದ್ದೆ ಆಟ ಅಂತ ತಿಳಿದಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಉಪನಾಯಕನ ಪಟ್ಟದಿಂದ ಕೆಳಗಿಳಿಸಿ – ರೋಹಿತ್ ಬಗ್ಗೆ ಕೊಹ್ಲಿ ಮಾತು
ಆರೋಪಿಗಳು ನಿರ್ಭಯವಾಗಿ ನಾವೇ ಮಾಡಿದ್ದು ಅಂತ ಹೇಳ್ತಿದ್ದಾರೆ.ಇದನ್ನೆಲ್ಲ ನೋಡಿದ್ರೆ ನಮ್ಮ ವೈಫಲ್ಯ ಕಾಣಿಸತ್ತೆ. ರಾಜಕಾರಣಿಗಳು, ಮಾಧ್ಯಮಗಳು ಇನ್ನಿತರ ಯಾವುದೇ ಪ್ರಭಾವ ಬೀರುವ ಮುಂಚೆ ಪೊಲೀಸರ ಪ್ರಭಾವ ಬೀರಬೇಕು. ಯಾರ ಯಾವ ರೀತಿ ಇರಬೇಕೊ ಹಾಗೆ ಇದ್ರೆನೆ ಭಯ ಇರುತ್ತೆ. ಇನ್ಸ್ ಪೆಕ್ಟರ್ ಇನ್ಸ್ ಪೆಕ್ಟರ್ ಆಗಿನೇ ಇರಬೇಕಾಗುತ್ತೆ. ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲಂದ್ರೆ ಕಷ್ಟ ಆಗತ್ತೆ. ಇದು ನಮ್ಮೆಲ್ಲರ ತಲೆ ತಗ್ಗಿಸುವ ವಿಚಾರ ಅಂತ ವಿಷಾದ ವ್ಯಕ್ತಪಡಿಸಿದರು. ಇದನ್ನೂ ಓದಿ: ನನ್ನ ಮಗ ಗೂಂಡಾ ಅಲ್ಲ, ತಪ್ಪು ಸಾಬೀತಾದರೆ ಕ್ರಮ ಕೈಗೊಳ್ಳಲಿ: ಮಾನಪ್ಪ ವಜ್ಜಲ್