ಹೈದರಾಬಾದ್: ವಿವಾಹೇತರ ಸಂಬಂಧ ಹೊಂದಿದ್ದ ಅರ್ಚಕ (Priest) ರೊಬ್ಬರು ತನ್ನ ಪ್ರೇಯಸಿಯನ್ನು ಕೊಂದು ಮ್ಯಾನ್‌ಹೋಲ್ (Manhole) ಗೆ ಎಸೆದಿರುವ ಘಟನೆ ಹೈದರಾಬಾದ್ ಬಳಿಯ ಸರೂರ್‌ನಗರದಲ್ಲಿ ನಡೆದಿದೆ. ಆರೋಪಿಯನ್ನುಆರೋಪಿಯನ್ನು ಅರ್ಚಕ ಅಯ್ಯಗಾರಿ ಸಾಯಿಕೃಷ್ಣ ಎಂದು ಗುರುತಿಸಲಾಗಿದ್ದು ಪೊಲೀಸರು ಬಂಧಿಸಿದ್ದಾರೆ.
ಮೃತಳನ್ನು ಕುರುಗಂಟಿ ಅಪ್ಸರಾ (Kuruganti Apsara) ಎಂದು ಗುರುತಿಸಲಾಗಿದೆ. ಅಪ್ಸರಾ ಜೊತೆಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿದ್ದ ಅರ್ಚಕ ಅಯ್ಯಗಾರಿ ಸಾಯಿಕೃಷ್ಣ (Ayyagari Saikrishna) ವಿವಾಹೇತರ ಸಂಬಂಧ ಹೊಂದಿದ್ದರು. ಯುವತಿ ಮದುವೆಯಾಗುವಂತೆ ಒತ್ತಡ ಹಾಕಿದ ಹಿನ್ನೆಲೆ ತಾನು ಆಕೆಯನ್ನು ಹತ್ಯೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಹತ್ಯೆ ಮಾಡಿ ಪೊಲೀಸರಿಗೆ ದೂರು: ಅಪ್ಸರಾಳನ್ನ ಹತ್ಯೆ ಮಾಡಿದ್ದ ಅರ್ಚಕ ಅಯ್ಯಗಾರಿ ಸಾಯಿಕೃಷ್ಣ ಪೊಲೀಸರಿಗೆ ದೂರು ನೀಡಿದ್ದ, ತನ್ನ ಸೋದರ ಸೊಸೆ ಅಪ್ಸರಾ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದ. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಸಾಯಿಕೃಷ್ಣ ಮೇಲೆಯೇ ಅನುಮಾನ ಬಂದಿದೆ.
ಸಾಯಿಕೃಷ್ಣ ಕರೆಸಿ ಪೊಲೀಸರು ವಿಚಾರಣೆ ನಡೆಸಿದಾಗ ಹತ್ಯೆ ಮಾಡಿರುವುದಾಗಿ ತಪ್ಲೊಪ್ಪಿಕೊಂಡಿದ್ದಾನೆ. ಆರೋಪಿ ಸಾಯಿಕೃಷ್ಣ ಶಂಶಾಬಾದ್‌ನಲ್ಲಿ ಅಪ್ಸರಾಳನ್ನು ಕೊಂದು, ಸರೂರ್ ನಗರಕ್ಕೆ ಸಾಗಿಸುವ ಮೊದಲು ಶವವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿದ್ದನು. ಬಳಿಕ ತಾನು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ದೇವಸ್ಥಾನದ ಸಮೀಪವಿರುವ ಎಂಆರ್‌ಒ ಕಚೇರಿಯ ಹಿಂಭಾಗದ ಮ್ಯಾನ್‌ಹೋಲ್‌ಗೆ ಶವವನ್ನು ಎಸೆದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಸಾಯಿಕೃಷ್ಣ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಮದ್ವೆ ಖುಷಿಯಲ್ಲಿ ಊರಿಗೆ ಬರ್ತಿದ್ದ ಯೋಧ ರೈಲಿನಿಂದ ಕಾಲು ಜಾರಿ ಬಿದ್ದು ದುರ್ಮರಣ