ಅಕ್ರಮ ಹಣ ಸಾಗಾಟ ಆರೋಪ – ಸಚಿವ ಜಮೀರ್‌ ಇದ್ದ ಹೋಟೆಲ್ ಮೇಲೆ ಹೈದರಾಬಾದ್‌ ಪೊಲೀಸ್‌ ದಾಳಿ!

Public TV
1 Min Read
Police Raid

ಬೆಂಗಳೂರು: ಸಚಿವ ಜಮೀರ್‌ ಅಹ್ಮದ್‌ ಖಾನ್‌ (Zameer Ahmed Khan )ಇದ್ದ ಹೋಟೆಲ್‌ ಮೇಲೆ ಹೈದರಾಬಾದ್‌ ಪೊಲೀಸರು (Hyderabad Police) ದಾಳಿ ನಡೆಸಿರುವ ಘಟನೆ ತಡರಾತ್ರಿ ನಡೆದಿದೆ.

ಅಕ್ರಮವಾಗಿ ಹಣ ಸಾಗಾಟ ಆರೋಪದ ಹಿನ್ನೆಲೆಯಲ್ಲಿ ಜಮೀರ್‌ ವಾಸ್ತವ್ಯವಿದ್ದ ಹೈದರಾಬಾದ್‌ ನಗರದ ಪಾರ್ಕ್‌ ಹಯಾತ್‌ ಹೋಟೆಲ್‌ (Park Hyatt Hotel) ಮೇಲೆ ಪೊಲೀಸರು ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದಾರೆ. ಮಧ್ಯರಾತ್ರಿ ದಾಳಿ ನಡೆಸಿ ಜಮೀರ್ ಕೊಠಡಿ ಮತ್ತು ಬೆಂಬಲಿಗರ ಕೊಠಡಿಗಳನ್ನ ಪರಿಶೀಲಿಸಿದ್ದಾರೆ.

Zameer Ahmed

ಈ ದಾಳಿ ಕುರಿತು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಸಚಿವ ಜಮೀರ್‌, ನಾನು ಉಳಿದುಕೊಂಡಿರುವ ಹೈದರಾಬಾದ್‌ ನಗರದ ಪಾರ್ಕ್‌ ಹಯಾತ್‌ ಹೋಟೆಲ್‌ ಮೇಲೆ ಪೊಲೀಸರು ದಾಳಿ ನಡೆಸಿದರು. ಆದ್ರೆ ಯಾವುದೇ ಸಾಕ್ಷ್ಯಗಳೂ ಸಿಗದೇ ಹಿಂದಿರುಗಿದರು. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದೆ. ಇದರಿಂದ ಕೇಂದ್ರ ಬಿಜೆಪಿ (BJP) ಮತ್ತು ರಾಜ್ಯದ ಬಿಆರ್‌ಎಸ್‌ (BRS) ಸರ್ಕಾರ ಹತಾಶೆಗೊಂಡಿದ್ದು, ಜಂಟಿ ರಾಜಕೀಯ ದಾಳಿ ನಡೆಸಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಉಗ್ರರ ವಿರುದ್ಧ ಎನ್‌ಕೌಂಟರ್‌ – ಕರ್ನಾಟಕ ಮೂಲದ ಕ್ಯಾಪ್ಟನ್‌ ಸೇರಿ ನಾಲ್ವರು ಯೋಧರು ಹುತಾತ್ಮ

ಈ ದಾಳಿಯು ನಮ್ಮನ್ನು ಹೆದರಿಸಿ ಹಿಮ್ಮೆಟ್ಟಿಸುವ ಕುತಂತ್ರವಾಗಿದೆ, ಇದಕ್ಕೆಲ್ಲ ನಾವು ಹೆದರಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿದವರ ಹೊರತರಲು ಕ್ಷಣಗಣನೆ – ಆರೈಕೆಗೆ ಆಸ್ಪತ್ರೆ ರೆಡಿ 

Share This Article