ಹೈದರಾಬಾದ್: ಇನ್‍ಸ್ಟಾಗ್ರಾಮ್‍ನಲ್ಲಿ ಹುಡುಗಿಯರಿಗೆ ವಂಚಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ 19 ವರ್ಷದ ಯುವಕನನ್ನು ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ ಮೂಲದ ಪಿ. ಅಜಯ್ ಬಂಧಿತ ಆರೋಪಿ. ಹಲವಾರು ಹೆಸರಿನಲ್ಲಿ ಇನ್‍ಸ್ಟಾಗ್ರಾಮ್ ಖಾತೆಯನ್ನು ಕ್ರಿಯೆಟ್ ಮಾಡಿ ಅಮಾಯಕ ಹೆಣ್ಣುಮಕ್ಕಳಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ನಂತರ ಹುಡುಗಿಯರೊಂದಿಗೆ ಸ್ನೇಹ ಬೆಳೆಸಿ ತಮ್ಮ ನಗ್ನ ಫೋಟೋ ಮತ್ತು ವೀಡಿಯೋಗಳನ್ನು ಹಂಚಿಕೊಳ್ಳುವಂತೆ ವಿನಂತಿಸಿ ಹುಡುಗಿಯರನ್ನು ಬಲೆಗೆ ಹಾಕಿಕೊಳ್ಳುತ್ತಿದ್ದ. ಬಳಿಕ ಆತನ ಮಾತನ್ನು ಕೇಳದೇ ಇರುವ ಹುಡುಗಿಯರಿಗೆ ತಮ್ಮ ಖಾಸಗಿ ಫೋಟೋವನ್ನು ಸೋಶಿಯಲ್ ಮೀಡಿಯಾ ಫ್ಲಾಟ್‍ಫಾರ್ಮ್‍ನಲ್ಲಿ ಅಪ್‍ಲೋಡ್ ಮಾಡುವುದಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ಇದನ್ನೂ ಓದಿ: ಮತಾಂತರ ಕಾಯ್ದೆ ವಿಧಾನಸಭೆಯಲ್ಲಿ ಪಾಸ್: ಕಟೀಲ್ ಸ್ವಾಗತ
Advertisement
Advertisement
ಹೀಗೆ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಈತನ ಕಿರುಕುಳ ಸಹಿಸಲಾಗದೇ ಅಪ್ರಾಪ್ತ ಬಾಲಕಿಯೊಬ್ಬಳು ನವೆಂಬರ್ 29ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಅಲ್ಲದೇ ಆರೋಪಿ ವಿವಿಧ ಇನ್‍ಸ್ಟಾಗ್ರಾಮ್ ಖಾತೆಗಳಿಂದ ತನಗೆ ಮೆಸೇಜ್‍ಗಳನ್ನು ಕಳುಹಿಸುತ್ತಿದ್ದ. ಜೊತೆಗೆ ಆರೋಪಿಯ ಸ್ನೇಹಿತ ರಫಿ ಪಾಶಾ ಇನ್‍ಸ್ಟಾಗ್ರಾಮ್ ಖಾತೆಯಿಂದಲೂ ಮೆಸೇಜ್ ಕಳುಹಿಸಿ ಹಣ ನೀಡುವಂತೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ಹೀಗಾಗಿ ಭಯಗೊಂಡ ಬಾಲಕಿ ಆರೋಪಿಗೆ ಕೊಂಚ ಹಣವನ್ನು ನೀಡಿದ್ದಾಳೆ. ಆದರೂ ಆರೋಪಿ ಮತ್ತೆ ಹಣ ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಈ ಘಟನೆ ಸಂಬಂಧ ತನಿಖೆ ನಡೆಸಿದ ಪೊಲೀಸರು 19 ವರ್ಷದ ಆರೋಪಿ ವಿವಿಧ ಹೆಸರಿನಲ್ಲಿ ಇನ್‍ಸ್ಟಾಗ್ರಾಮ್ ನಕಲಿ ಖಾತೆಯನ್ನು ತೆರೆದು ಅಪ್ರಾಪ್ತ ಬಾಲಕಿಯರಿಗೆ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಅವರು ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ನಂತರ ಮೊದಲಿಗೆ ಕ್ಯಾಶುಯಲ್ ಆಗಿ ಚಾಟಿಂಗ್ ಮಾಡುತ್ತಾ ನಂತರ ಸ್ನೇಹ ಬೆಳೆಸಿ ಲೈಂಗಿಕ ವಿಚಾರದ ಬಗ್ಗೆ ಮಾತನಾಡಿ ಹುಡುಗಿಯರ ಖಾಸಗಿ ಫೋಟೋವನ್ನು ಸಂಗ್ರಹಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಆಫ್ಘನ್ ಮಹಿಳೆಯರ ಶಿಕ್ಷಣ ಬಗ್ಗೆ ಮಾತನಾಡಿ ಟ್ರೋಲ್‍ಗೆ ಒಳಗಾದ ಪಾಕ್ ಪ್ರಧಾನಿ
ಸೋಶಿಯಲ್ ಮೀಡಿಯಾದಲ್ಲಿ ಅಪರಿಚಿತರು ಕಳುಹಿಸುವ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸದಂತೆ ಮಕ್ಕಳಿಗೆ ತಿಳಿಸುವಂತೆ ಪೋಷಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.