ಚೆನ್ನೈ: ಮಹಿಳೆಯರ ಉತ್ತಮ ಸುರಕ್ಷತೆ ಮತ್ತು ಭದ್ರತೆಗಾಗಿ, ಹೈದರಾಬಾದ್ ಪೊಲೀಸ್ ನ ‘ಶೀ’ ತಂಡವು ‘ಸಾತ್ ಸಾತ್ ಅಬ್ ಔರ್ ಭೀ ಪಾಸ್’ ಎಂಬ ಹೊಸ ಘಟಕವನ್ನು ಆರಂಭಿಸಿದ್ದು, ಇದನ್ನು ಹೈದರಾಬಾದ್ ನಗರ ಪೊಲೀಸರು ಶನಿವಾರ ಆರಂಭಿಸಿದರು.
ಹೈದರಾಬಾದ್ ಪೊಲೀಸ್ ನ ‘ಶೀ’ ತಂಡವು ನಿನ್ನೆ ತನ್ನ 7ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಇದರ ಭಾಗವಾಗಿ ಹೈದರಾಬಾದ್ ಪೊಲೀಸ್ ಕಮಿಷನರ್ ಅಂಜನಿ ಕುಮಾರ್, ಹೆಚ್ಚುವರಿ ಪೊಲೀಸ್ ಕಮಿಷನರ್ ಶಿಖಾ ಗೋಯೆಲ್ ಅವರ ಉಪಸ್ಥಿತಿಯಲ್ಲಿ ‘ಎಸ್‍ಎಎಟಿ'(ಸಾಥ್ ಅಬ್ ಔರ್ ಭಿ ಪಾಸ್) ಅನ್ನು ಉದ್ಘಾಟಿಸಲಾಯಿತು. ಇದನ್ನೂ ಓದಿ: ಸುಳ್ಳಿನ ಸ್ಪರ್ಧೆ ಕಥೆ ಹೇಳಿ ಹೆಚ್‍ಡಿಕೆ, ಸಿದ್ದುಗೆ ಟಾಂಗ್ ಕೊಟ್ಟ ಜೋಶಿ
Advertisement
Advertisement
‘ಶೀ’ ತಂಡವನ್ನು 2014ರ ಅ.24ರಂದು ಹೈದರಾಬಾದ್ ನಗರದಲ್ಲಿ ಆರಂಭಿಸಲಾಯಿತು. ಮಹಿಳೆಯರಿಗೆ ಸುರಕ್ಷೆ ಮತ್ತು ಸುರಕ್ಷಿತ ವಾತಾವರಣಕ್ಕಾಗಿ ತೆಲಂಗಾಣ ಸರ್ಕಾರದ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಈ ತಂಡಗಳನ್ನು ರಚಿಸಲಾಗಿದೆ. ‘ಶೀ’ ತಂಡ ರಚಿಸಿದ ಬಳಿಕ ಇಂದು ಅದು ಯಶಸ್ವಿಯಾಗಿದೆ. ಈ ಪರಿಕಲ್ಪನೆಯು ಇಡೀ ತೆಲಂಗಾಣದಲ್ಲಿ ಮಾತ್ರವಲ್ಲದೆ ಕೇರಳ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ಇತರ ರಾಜ್ಯಗಳಲ್ಲಿಯೂ ಸಹ ಈ ತಂಡವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
Advertisement
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಂಜನಿ ಕುಮಾರ್, ಹೈದರಾಬಾದ್ ‘ಶೀ’ ತಂಡದ ಡಿಸಿಪಿ ಶಿರೀಶ್ ರಾಘವೇಂದ್ರ ಅವರು ಪ್ರತಿ ಬುಧವಾರ ಚೇಲಾಪುರ ದಕ್ಷಿಣ ವಲಯಕ್ಕೆ ಆಗಮಿಸಬೇಕು ಎಂದು ನಾವು ನಿರ್ಧರಿಸಿದ್ದೇವೆ. ಈ ವೇಳೆ ಅಲ್ಲಿನ ಮಹಿಳೆಯರು ಮತ್ತು ಬಾಲಕಿಯರಿಗೆ ತ್ವರಿತ ಪರಿಹಾರಗಳನ್ನು ಒದಗಿಸಬೇಕು ಎಂದರು.
Advertisement
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿಅಂಶಗಳ ಪ್ರಕಾರ, ಮಹಿಳೆಯರ ಸುರಕ್ಷಣೆಗೆ ಸಂಬಂಧಿಸಿದಂತೆ ಹೈದರಾಬಾದ್ ಭಾರತದ ಸುರಕ್ಷಿತ ನಗರಗಳಲ್ಲಿ ಒಂದಾಗಿದೆ. ಆದರೆ ನಾವು ಕೆಲಸವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮುಂದುವರಿಸಬೇಕಾಗಿದೆ. ‘ಶೀ’ ಬಂದ ಮೇಲೆ ಮಹಿಳೆಯರ ಮೇಲೆ ನಡೆಯುತ್ತಿದ್ದ ಅಪರಾಧ ಕಡಿಮೆಯಾಗುವುದನ್ನು ನಾವು ನೋಡಬಹುದು. ಮಹಿಳೆಯರಿಗೆ ನೋವುಂಟು ಮಾಡುವ ಉದ್ದೇಶದಿಂದ ಯಾವುದೇ ಕೆಲಸ ಮಾಡಿದರೆ ಆ ಚಟುವಟಿಕೆಯನ್ನು ತಕ್ಷಣವೇ ನಿಲ್ಲಿಸಬೇಕು. ನಾನು ಇಲ್ಲಿಯ ಎಲ್ಲ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ. ವಿವಿಧ ಶಾಲೆಗಳಿಂದ ಇಲ್ಲಿಗೆ ಬಂದಿರುವ 200 ವಿದ್ಯಾರ್ಥಿಗಳಿಗೆ ನನ್ನ ಶುಭಾಶಯಗಳು ಎಂದು ಹೇಳಿದರು. ಇದನ್ನೂ ಓದಿ: ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ – ಗೋ ಕಳ್ಳರು ಅರೆಸ್ಟ್
ಈ ‘ಶೀ’ ತಂಡವು 8000ಕ್ಕೂ ಹೆಚ್ಚು ಸಂತ್ರಸ್ತರು ಮತ್ತು ಅವರ ಕುಟುಂಬಗಳ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿದೆ ಎಂದು ಕಮಿಷನರ್ ಶ್ಲಾಘಿಸಿದರು. ಇದರಲ್ಲಿ 687 ಎಫ್‌ಐಆರ್‌ಗಳು ದಾಖಲಾಗಿವೆ. 723 ಪ್ರಕರಣಗಳು ದಾಖಲಾಗಿವೆ ಮತ್ತು 942 ರೆಡ್‍ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಎಲ್ಲ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.