ಹೈದರಾಬಾದ್: ಪಾರ್ಕ್ ಗಳಲ್ಲಿ ಪ್ರೇಮಿಗಳ ಅಕ್ರಮಗಳಿಗೆ ತಡೆ ಹಾಕಬೇಕಾದ ಭದ್ರತಾ ಸಿಬ್ಬಂದಿ ಈಗ ಅವರಿಂದಲೇ ಹಣವನ್ನು ಪಡೆದು ಅಕ್ರಮ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ತೆಲಂಗಾಣ ರಾಜಧಾನಿ ಹೈದರಾಬಾದ್‍ನಲ್ಲಿರುವ ಪ್ರಮುಖ ಪಾರ್ಕ್ ಗಳಾದ ಇಂದಿರಾ, ಸಂಜಿವಯ್ಯ, ದುರ್ಗಂ ಚೆರುವು ಪಾರ್ಕ್ ಗಳಲ್ಲಿ ಆಕ್ರಮ ಚಟುವಟಿಕೆಗಳು ರಾಜರೋಷವಾಗಿ ನಡೆಯುತ್ತಿವೆ. ಅಕ್ರಮ ಚಟುವಟಿಕೆಗಳಿಗೆ ಭದ್ರತಾ ಸಿಬ್ಬಂದಿ ಹೇಗೆ ಸಾಥ್ ನೀಡುತ್ತಾರೆ ಎಂದರೆ, 500 ರೂ. ಕೊಟ್ಟರೆ ಅವರೇ ಪಾರ್ಕ್ ನ ರಹಸ್ಯ ಸ್ಥಳವನ್ನು ತೋರಿಸುತ್ತಾರೆ ಎಂದು ಪ್ರತಿಕೆಯೊಂದು ವರದಿ ಮಾಡಿದೆ.
Advertisement
500 ರೂ. ನೀಡಿದರೆ ಯಾರಿಗೂ ಕಾಣದ ಸ್ಥಳದಲ್ಲಿ ಒಂದು ಗಂಟೆಯ ಅವಧಿವರೆಗೆ ಪ್ರೇಮಿಯ ಜೊತೆ ಕುಳಿತುಕೊಳ್ಳಲು ಅನುಮತಿ ನೀಡಲಾಗುತ್ತದೆ. ಪಾರ್ಕ್ ನ ಪ್ರತಿಯೊಂದು ಸ್ಥಳಕ್ಕೂ ಒಂದು ದರ ನಿಗದಿ ಮಾಡಲಾಗಿದ್ದು, 50 ರೂ. ನಿಂದ 200ರೂ. ವರೆಗೂ ಅಕ್ರಮವಾಗಿ ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ವರದಿ ತಿಳಿಸಿದೆ.
Advertisement
ಸಾರ್ವಜನಿಕ ಪಾರ್ಕ್ ಗಳ ಈ ವ್ಯವಸ್ಥೆಗೆ ಸೆಕ್ಯೂರಿಟಿ ಸಿಬ್ಬಂದಿ ಆಕ್ರಮವಾಗಿ ಅವಕಾಶ ನೀಡುತ್ತಿರುವುದರಿಂದ ಸಂಜೆಯ ವೇಳೆಗೆ ಪಾರ್ಕ್ ಗಳು ಯುವ ಜೋಡಿಗಳಿಂದ ತುಂಬಿ ತುಳುಕುತ್ತಿವೆ. ರಾತ್ರಿ 11 ಗಂಟೆಯಾದರೂ ಜೋಡಿಗಳು ಪಾರ್ಕ್ ಗಳನ್ನು ಬಿಟ್ಟು ತೆರಳುತ್ತಿಲ್ಲ ಎಂದು ಸಾರ್ವಜನಿಕರು ಸಿಬ್ಬಂದಿ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದ್ದಾರೆ.
Advertisement
ಪಾರ್ಕ್ ಗಳ ಯಾವ ಪ್ರದೇಶವನ್ನು ನೋಡಿದರು ಸಹ ಕಾಂಡೋಮ್ ಪ್ಯಾಕೆಟ್ ಗಳ ದರ್ಶನವಾಗುತ್ತಿದ್ದು, ಇಲ್ಲಿನ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಕುರಿತು ಸ್ಥಳೀಯ ಮಾಧ್ಯಮಗಳು ಹಲವು ವರದಿಗಳನ್ನು ಬಿತ್ತರಿಸಿದ ಪರಿಣಾಮ ಅಕ್ರಮಗಳಿಗೆ ಬ್ರೇಕ್ ಬಿದ್ದಿತ್ತು. ಆದರೆ ಕೆಲ ದಿನಗಳ ನಂತರ ಅಧಿಕಾರಿಗಳು ಇತ್ತ ಗಮನಿಸದ ಕಾರಣ ಮತ್ತೆ ಅಕ್ರಮ ಚಟುವಟಿಕೆಗಳು ತಲೆ ಎತ್ತಿದೆ.
Advertisement
ನಗರದ ಜನರು ಕುಟುಂಬ ಸದಸ್ಯರೊಂದಿಗೆ ಸೇರಿ ಸಾರ್ವಜನಿಕ ಪಾರ್ಕ್ ಗಳಿಗೆ ಭೇಟಿ ನೀಡಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಾರ್ಕ್ ಗಳಲ್ಲಿ ಎಲ್ಲೆಂದರಲ್ಲಿ ಕಾಣಸಿಗುವ ಪ್ರೇಮಿಗಳ ವರ್ತನೆಗೆ ಬೇಸತ್ತ ಜನರು ಪಾರ್ಕ್ ಗಳಿಗೆ ಭೇಟಿ ನೀಡುವುದನ್ನೇ ಬಿಟ್ಟಿದ್ದಾರೆ ಎಂದು ವರದಿಯಾಗಿದೆ.