– ಬೈಕ್ ಶೋರೂಂ ಸಿಬ್ಬಂದಿಗೆ ಥಳಿಸಿದ ತಂದೆ
ಹೈದರಾಬಾದ್: ಅಪ್ರಾಪ್ತ ಮಗನಿಗೆ ದುಬಾರಿ ಬೈಕ್ ಮಾರಿದ ಶೋರೂಂ ಸಿಬ್ಬಂದಿಯನ್ನು ತಂದೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ರಸೂಲ್‍ಪುರ್ ನಿವಾಸಿ 17 ವರ್ಷದ ಬಾಲಕನೋರ್ವ ಕೆಟಿಎಂ ಬೈಕ್ ಖರೀದಿಗಾಗಿ ಮನೆಯಲ್ಲಿದ್ದ 2 ಲಕ್ಷ ರೂ. ಕದಿದ್ದ. ಬಳಿಕ ಆ ಹಣದಿಂದ ಬೇಗಂಪೇಟ್‍ನಲ್ಲಿರುವ ಕೆಟಿಎಂ ಬೈಕ್ ಶೋ ರೂಂನಲ್ಲಿ 2.20 ಲಕ್ಷ ರೂ. ಮೌಲ್ಯದ ಬೈಕ್ ಖರೀದಿಸಿದ್ದ. ಬೈಕ್ ಖರೀದಿಸಿ ಕಳೆದ ನಾಲ್ಕು ತಿಂಗಳಾಗಿದ್ದರೂ ಪೋಷಕರಿಗೆ ಯಾವುದೇ ಮಾಹಿತಿ ಇರಲಿಲ್ಲ.
Advertisement
Advertisement
ಬಾಲಕ ತನ್ನ ಬೈಕ್ ಅನ್ನು ಹಾಸ್ಟೇಲ್ ಹಾಗೂ ಸ್ನೇಹಿತರ ಮನೆಯಲ್ಲಿ ಇಡುತ್ತಿದ್ದ. ಆದರೆ ಶನಿವಾರ ಸ್ನೇಹಿತರೊಂದಿಗೆ ಜಾಲಿ ರೈಡ್ ಹೋದಾಗ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದ. ಈ ವೇಳೆ ಪೋಷಕರು ಮಗ ಸ್ನೇಹಿತರನ್ನು ವಿಚಾರಿಸಿದ ಬೈಕ್ ಖರೀದಿಸಿರುವುದು ತಿಳಿದು ಬಂದಿದೆ ಎಂದು ಬೇಗಂಪೇಟ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement
ಬಾಲಕ ಮನೆಯಲ್ಲಿ ಕದ್ದ 2 ಲಕ್ಷ ರೂ.ವನ್ನು ಕೊಟ್ಟು ಬೈಕ್ ಖರೀಸಿದ್ದಾನೆ. ಜೊತೆಗೆ ಬೈಕ್ ತೆಗೆದುಕೊಳ್ಳುವಾಗ ತನ್ನ ಸಹೋದರನ ದಾಖಲೆಗಳನ್ನು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಅಪ್ರಾಪ್ತ ಮಗನಿಗೆ ಬೈಕ್ ನೀಡಿದ್ದಕ್ಕೆ ಬಾಲಕನ ಪೋಷಕರು ಬೈಕ್ ಶೋರೂಂನ ಇಬ್ಬರು ಸಿಬ್ಬಂದಿಯನ್ನು ಥಳಿಸಿ, ಶೋರೂಂ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಶೋರೂಂ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.