ಹೈದರಾಬಾದ್: ಝೊಮ್ಯಾಟೊ ಆಹಾರ ಪೂರೈಕೆ ಮಾಡುವ ಜೊತೆಗೆ ಒಂದಿಲ್ಲ ಒಂದು ವಿಷಯಗಳಿಂದ ಸುದ್ದಿಯಾಗುತ್ತಲೇ ಇರುತ್ತಿದೆ. ಇದೀಗ ಹೈದರಾಬಾದ್ ಯುವಕನೋರ್ವ ಝೊಮ್ಯಾಟೊದ ಸಹಾಯದಿಂದ ಮಧ್ಯರಾತ್ರಿ ತನ್ನ ಮನೆಯನ್ನು ತಲುಪಿದ್ದಾನೆ. ಯುವಕ ಮನೆ ತಲುಪಲು ಕಂಡುಕೊಂಡ ಮಾರ್ಗಕ್ಕೆ ಜನರು ಫಿದಾ ಆಗಿದ್ದಾರೆ. ಅಂದು ಮಧ್ಯರಾತ್ರಿ ತಾನು ಹೇಗೆ ತಲುಪಿದೆ ಎಂಬುದರ ಮಾಹಿತಿಯನ್ನು ಯುವಕ ತನ್ನ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾನೆ.
ಓಬೇಶ್ ಕೊಮಿರಿಶೆಟ್ಟಿ ಝೊಮ್ಯಾಟೊ ಆ್ಯಪ್ ಬಳಸಿ ಮನೆ ತಲುಪಿದ ಯುವಕ. ಅಂದು ರಾತ್ರಿ 11.50ರ ಸಮಯ. ನಾನು ಇನ್ರೊಬಿಟ್ ಮಾಲ್ ಬಳಿ ಆಟೋಗಾಗಿ ಕಾಯುತ್ತಾ ನಿಂತಿದ್ದೆ. ಆದರೆ ಸ್ಥಳದಲ್ಲಿ ಯಾವ ಆಟೋ ಕಾಣಿಸುತ್ತಿರಲಿಲ್ಲ. ಊಬರ್ ಆ್ಯಪ್ ನೋಡಿದರೆ ಮನೆ ತಲುಪಲು 300 ರೂ. ಚಾರ್ಜ್ ತೋರಿಸುತ್ತಿತ್ತು. ಆ ಸಮಯದಲ್ಲಿ ಸ್ವಲ್ಪ ಹಸಿವು ಸಹ ಆಗಿತ್ತು. ಝೊಮ್ಯಾಟೊ ಆ್ಯಪ್ ಓಪನ್ ಮಾಡಿ ಸುತ್ತಮುತ್ತ ಇರುವ ಹೋಟೆಲ್, ಫುಡ್ ಸೆಂಟರ್ ಗಳನ್ನು ಹುಡುಕಲಾರಂಭಿಸಿದೆ. ದೋಸೆ ಸೆಂಟರ್ ಕಾಣಿಸಿದಾಗ ಝೊಮ್ಯಾಟೊದಲ್ಲಿ ಎಗ್ ದೋಸೆ ಆರ್ಡರ್ ಮಾಡಿದೆ. ಸ್ವಲ್ಪ ಸಮಯದ ಬಳಿಕ ದೋಸೆ ಸೆಂಟರ್ ಗೆ ಝೊಮ್ಯಾಟೊ ಡೆಲಿವರಿ ಬಾಯ್ ಬಂದು ನಾನು ಹೇಳಿದ ಆರ್ಡರ್ ತೆಗೆದುಕೊಳ್ಳುತ್ತಿದ್ದರು. ಆತನ ಬಳಿಗೆ ಹೋಗಿ ಈ ದೋಸೆಯನ್ನು ಆರ್ಡರ್ ಮಾಡಿದ್ದು ನಾನು, ನೀವು ತಲುಪಿಸಬೇಕಾದ ವಿಳಾಸವೇ ನನ್ನ ಮನೆ ಎಂದು ತಿಳಿಸಿದೆ.
Advertisement
Modern problems require modern solutions. ^PC pic.twitter.com/2bmo7EMIpu
— zomato care (@zomatocare) August 6, 2019
Advertisement
ಆರ್ಡರ್ ನೀಡಲು ನೀವು ಹೋಗುವಾಗ ನನಗೆ ಡ್ರಾಪ್ ನೀಡಿ ಎಂದು ಕೇಳಿಕೊಂಡಿದ್ದಕ್ಕೆ ಡೆಲಿವರಿ ಬಾಯ್ ಒಪ್ಪಿಕೊಂಡರು. ಹೀಗೆ ಮಧ್ಯರಾತ್ರಿ ಹಣ ನೀಡದೇ ಊಟದೊಂದಿಗೆ ಸುರಕ್ಷಿತವಾಗಿ ಮನೆ ತಲುಪಿದೆ. ಡೆಲಿವರಿ ಬಾಯ್ ತನಗೆ 5 ಸ್ಟಾರ್ ನೀಡಿ ಎಂದು ಕೇಳಿಕೊಂಡಿದ್ದಕ್ಕೆ ಓಕೆ ಎಂದು ಮನೆ ಸೇರಿದೆ ಎಂದು ಓಬೇಶ್ ಬರೆದುಕೊಂಡಿದ್ದಾರೆ.
Advertisement
Advertisement
ಓಬೇಶ್ ಪ್ಲಾನ್ ಕೇಳಿದ ನೆಟ್ಟಿಗರು ಫಿದಾ ಆಗಿದ್ದು, ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಲೆಜೆಂಡ್ ಅಂದ್ರೆ, ಇನ್ನೂ ಕೆಲವರು ನಿಮ್ಮ ಈ ಯೋಚನೆಗೆ ಪ್ರಶಸ್ತಿ ನೀಡಬೇಕು. ಮತ್ತೆ ಹಲವರು ಆಧುನಿಕ ಸಮಸ್ಯೆಗಳಿಗೆ ಆಧುನಿಕ ಪರಿಹಾರ ಎಂದು ಕಮೆಂಟ್ ಮಾಡುವ ಮೂಲಕ ಓಬೇಶ್ ಬುದ್ಧಿವಂತಿಕೆಯನ್ನು ಜಾಲತಾಣಿಗರು ಕೊಂಡಾಡಿದ್ದಾರೆ.