ಹೈದರಾಬಾದ್: ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ಅವಶ್ಯಕತೆಗಳಾದ ನೀರು, ಬಟ್ಟೆ, ವಸತಿಯೇ ಇರುವುದಿಲ್ಲ. ಅಂತಹದರಲ್ಲಿ ರಸ್ತೆಗಳು, ಆಸ್ಪತ್ರೆಗಳು ಎಲ್ಲಿ ಇರಬೇಕು. ಇಂತಹ ವಿಷಯನ್ನು ಮನಗೊಂಡು ವ್ಯಕ್ತಿಯೊಬ್ಬರು ಬೈಕ್ ಅಂಬುಲೆನ್ಸ್ ವಿನ್ಯಾಸಗೊಳಿಸಿದ್ದಾರೆ.
ಹೈದರಾಬಾದಿನ ಮಹಮ್ಮದ್ ಶಾರೋಝ್ ಖಾನ್ ಎಂಬುವವರು ಬೈಕ್ ಅಂಬುಲೆನ್ಸ್ ತಯಾರಿಸಿದ್ದಾರೆ.
Advertisement
Advertisement
ಯಾಕೆ ಈ ಅಂಬುಲೆನ್ಸ್ ತಯಾರಿಸಿದ್ದೀರಿ ಎಂದು ಕೇಳಿದ್ದಕ್ಕೆ, ನಾನು ಬೈಕ್, ಕಾರ್ ಮತ್ತು ಸ್ಕೂಟರ್‍ಗಳಂತಹ ವಾಹನಗಳನ್ನು ವಿನ್ಯಾಸಗೊಳಿಸುತ್ತಿದ್ದೆ. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಬೈಕಿನಿಂದ ಆಂಬುಲೆನ್ಸ್ ತಯಾರಿಸಬಾರದು ಯಾಕೆ ಎಂದು ಯೋಚಿಸಿ, ಈ ವಿಶೇಷ ಅಂಬುಲೆನ್ಸ್ ತಯಾರಿಸಿದೆ ಎಂದು ಹೇಳಿದರು.
Advertisement
ಅಂಬುಲೆನ್ಸ್ ನಲ್ಲಿ ಏನಿದೆ?
ಸಾಮಾನ್ಯವಾಗಿ ಅಂಬುಲೆನ್ಸ್ ಒದಗಿಸುವ ಎಲ್ಲಾ ಸೌಲಭ್ಯಗಳನ್ನು ಮಿನಿ ಅಂಬುಲೆನ್ಸ್ ಒದಗಿಸುತ್ತದೆ. ಆಮ್ಲಜನಕದ ಸಿಲಿಂಡರ್, ಹಾಸಿಗೆ, ಚಿಕ್ಕ ಫ್ಯಾನ್, ಫಸ್ಟ್ ಎಡ್ ಬಾಕ್ಸ್, ಸ್ಟ್ರೇಚರ್‍ನ್ನು ಒಳಗೊಂಡಿದೆ. ಸರ್ಕಾರದಿಂದ ಅನುಮತಿ ಪಡೆದ ನಂತರ ಮಾರುಕಟ್ಟೆಗೆ ಪರಿಚಯಿಸಲು ಮಹಮ್ಮದ್ ತೀರ್ಮಾನಿಸಿದ್ದಾರೆ.
Advertisement