ಹೈದರಾಬಾದ್: ವಿವಿಧ ಫೋನ್ ನಂಬರ್ಗಳಿಂದ ಮಹಿಳೆಯರಿಗೆ ಅಶ್ಲೀಲ ವೀಡಿಯೋಗಳನ್ನು ಕಳುಹಿಸುತ್ತಿದ್ದ 58 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಆರೋಪಿಯನ್ನು ರೈಸುದ್ದೀನ್ ಎಂದು ಗುರುತಿಸಲಾಗಿದ್ದು, ಈತ ಹೈದರಾಬಾದ್ನ ಬಜಾರ್ಘಾಟ್ ಪ್ರದೇಶದ ನಿವಾಸಿಯಾಗಿದ್ದಾನೆ. ಈ ಕುರಿತಂತೆ ವಿಚಾರಣೆ ವೇಳೆ ರೈಸುದ್ದೀನ್ ತನ್ನ ಪತ್ನಿಯೊಂದಿಗೆ ದೈಹಿಕ ಸಂಬಂಧ ಹೊಂದಿಲ್ಲದ ಕಾರಣ ಕೆಲವು ತಿಂಗಳಿನಿಂದ ಬೇಸರಗೊಂಡಿದ್ದನು. ಹೀಗಾಗಿ ಮಹಿಳೆಯರ ಹೆಸರಿನಲ್ಲಿ ಫೇಸ್ಬುಕ್ ಅಕೌಂಟ್ ಕ್ರಿಯೆಟ್ ಮಾಡಿ. ನಂತರ ಮಹಿಳೆಯರ ಬಳಿ ನಂಬರ್ ಪಡೆದು ಅಶ್ಲೀಲ ವೀಡಿಯೋಗಳನ್ನು ಕಳುಹಿಸಲು ಆರಂಭಿಸಿದ್ದಾಗಿ ಹೇಳಿದ್ದಾನೆ. ಇದನ್ನೂ ಓದಿ: ಗುತ್ತಿಗೆ, ಹೊರ ಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಯತ್ನ, ಆರೋಗ್ಯ ವಿಮೆ ವಿಸ್ತರಣೆ: ಸುಧಾಕರ್
Advertisement
Advertisement
ಕಳೆದ ಕೆಲವು ತಿಂಗಳುಗಳಿಂದ ಮೂರು ವಿಭಿನ್ನ ಮೊಬೈಲ್ ನಂಬರ್ಗಳಿಂದ 5ಕ್ಕೂ ಹೆಚ್ಚು ಮಹಿಳೆಯರಿಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಿರುವ ವಿಚಾರ ತಿಳಿದುಬಂದಿದೆ. ಮಹಿಳೆಯರು ಒಂದು ಸಂಖ್ಯೆಯನ್ನು ಬ್ಲಾಕ್ ಮಾಡಿದರೆ, ಆತ ಮತ್ತೊಂದು ನಂಬರ್ನಿಂದ ಮತ್ತೆ ಅಶ್ಲೀಲ ವೀಡಿಯೋವನ್ನು ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದನು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪಿಕ್ನಿಕ್ಗೆ ಹೋಗುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೂವರು ಸಾವು – MPಯಲ್ಲಿ ಒಂದೇ ದಿನ 11 ಬಲಿ
Advertisement
ಈತನ ಕಿರುಕುಳ ಸಹಿಸಲಾಗದೇ ಕೊನೆಗೆ ಮಹಿಳೆಯೊಬ್ಬರು ಪೊಲೀಸರನ್ನು ಸಂಪರ್ಕಿಸಿದ್ದು, ಇದೀಗ ಬೋವನಪಲ್ಲಿ ಪೊಲೀಸರು ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.